Sunday, September 29, 2024

ರಾಷ್ಟ್ರೀಯ ಮತದಾರರ ಜಾಗೃತಿ ಸ್ಪರ್ಧೆ: ವಿಜೇತರಿಗೆ ಆಕರ್ಷಕ ನಗದು ಬಹುಮಾನ

ಬೆಳಗಾವಿ, ಫೆ.22: ಭಾರತೀಯ ಚುನಾವಣಾ ಆಯೋಗದ ವತಿಯಿಂದ ಜನವರಿ 25 ರಿಂದ ಮಾರ್ಚ್ 15 ರವರೆಗೆ “ನನ್ನ ಮತ ನನ್ನ ಭವಿಷ್ಯ” ‘ ಒಂದು ಮತದ ಶಕ್ತಿ’ ಧ್ಯೇಯ ವಾಕ್ಯದೊಂದಿಗೆ “ರಾಷ್ಟೀಯ ಮತದಾರರ ಜಾಗೃತಿ ಸ್ಪರ್ಧೆ” ಆಯೋಜಿಸಲಾಗಿದೆ.

ರಸಪ್ರಶ್ನೆ ಸ್ಪರ್ಧೆ, ವಿಡಿಯೋ ತಯಾರಿಕೆ ಸ್ಪರ್ಧೆ, ಗಾಯನ, ಬಿತ್ತಿ ಚಿತ್ರ ವಿನ್ಯಾಸ ಹಾಗೂ ಘೋಷ ವಾಕ್ಯ ಬರೆಯುವ ಸ್ಪರ್ಧೆ ನಡೆಯಲಿವೆ. ಹವ್ಯಾಸಿಗಳು, ವೃತ್ತಿಪರರು, ಸಾಂಸ್ಥಿಕ ಸಂಸ್ಥೆಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.

ವಿಡಿಯೋ ತಯಾರಿಕೆ ಸ್ಪರ್ಧೆ ಬಹುಮಾನಗಳು:
ಸಾಂಸ್ಥಿಕ ಸಂಸ್ಥೆಯ ಮೊದಲ ಬಹುಮಾನ 2 ಲಕ್ಷ, 2ನೇ ಬಹುಮಾನ 1 ಲಕ್ಷ, 3ನೇ ಬಹುಮಾನ 75000, ಹಾಗೂ ಸಮಾಧಾನಕರ ಬಹುಮಾನ 30,000 ಇರಲಿದೆ. ವೃತ್ತಿಪರರ ಮೊದಲ ಬಹುಮಾನ 50,000, 2ನೇ ಬಹುಮಾನ 30,000, 3ನೇ ಬಹುಮಾನ 20,000 ಹಾಗೂ ಸಮಾಧಾನಕರ ಬಹುಮಾನ 10 ಸಾವಿರ ನೀಡಲಾಗುವದು. ಅದೇ ರೀತಿ ಹವ್ಯಾಸಿಗಳಿಗೆ ಮೊದಲ ಬಹುಮಾನ 30,000, 2ನೇ ಬಹುಮಾನ 20,000, 3ನೇ ಬಹುಮಾನ 10,000 ಸಮಾಧಾನಕರ ಬಹುಮಾನ 5 ಸಾವಿರ ಇರಲಿದೆ.

ಗಾಯನ ಸ್ಪರ್ಧೆ ಬಹುಮಾನಗಳು:ಸಾಂಸ್ಥಿಕ ಸಂಸ್ಥೆಯ ಸ್ಪರ್ಧೆಗೆ 1 ಲಕ್ಷ ಮೊದಲ ಬಹುಮಾನ, 2ನೇ ಬಹುಮಾನ 50,000, 3ನೇ ಬಹುಮಾನ 30,000, ಸಮಾಧಾನಕರ ಬಹುಮಾನ 15,000, ಹಾಗೂ ವೃತ್ತಿಪರರ ಮೊದಲ ಬಹುಮಾನ 50,000, 2ನೇ ಬಹುಮಾನ 30,000, 3ನೇ 20,000, ಸಮಾಧಾನಕರ ಬಹುಮಾನ 10 ಸಾವಿರ ಇರಲಿದೆ. ಅದೇ ರೀತಿ ಹವ್ಯಾಸಿ ಸ್ಪರ್ಧಿಗಳಿಗೆ ಮೊದಲ ಬಹುಮಾನ 20,000, 2ನೇ ಬಹುಮಾನ 10,000, 3ನೇ ಬಹುಮಾನ 75,000 ಹಾಗೂ ಸಮಾಧಾನಕರ ಬಹುಮಾನ 3 ಸಾವಿರ ನೀಡಲಾಗುವದು.

ಬಿತ್ತಿ ಚಿತ್ರ ವಿನ್ಯಾಸ ಸ್ಪರ್ಧೆ ಬಹುಮಾನಗಳು: ಸಾಂಸ್ಥಿಕ ಸಂಸ್ಥೆ ಸ್ಪರ್ಧೆಗೆ ಮೊದಲ ಬಹುಮಾನ 50,000, 2ನೇ ಬಹುಮಾನ 30,000, 3ನೇ ಬಹುಮಾನ 20,000, ಸಮಾಧಾನಕರ ಬಹುಮಾನ 10 ಇರಲಿದೆ. ವೃತ್ತಿಪರರಿಗೆ ಮೊದಲ ಬಹುಮಾನ 30,000, 2ನೇ ಬಹುಮಾನ 20,000, 3ನೇ ಬಹುಮಾನ 10,000, ಹಾಗೂ ಸಮಾಧಾನಕರ ಬಹುಮಾನ 5000 ನೀಡಲಾಗುವದು. ಅದೇ ರೀತಿ ಹವ್ಯಾಸಿ ಸ್ಪರ್ಧಿಗಳಿಗೆ ಮೊದಲ ಬಹುಮಾನ 20,000, 2ನೇ ಬಹುಮಾನ 10,000, 3ನೇ ಬಹುಮಾನ 7500, ಹಾಗೂ ಸಮಾಧಾನಕರ ಬಹುಮಾನ 3 ಸಾವಿರ ಇರಲಿದೆ.

ಘೋಷ ವಾಕ್ಯ ಬರೆಯುವ ಸ್ಪರ್ಧೆಯ ಮೊದಲ ಬಹುಮಾನ 20,000, 2ನೇ ಬಹುಮಾನ 10,000, 3ನೇ ಬಹುಮಾನ 7500, ಹಾಗೂ ಸಮಾಧಾನಕರ ಬಹುಮಾನವಾಗಿ ಭಾಗಿಯಾದ 50 ಸ್ಪರ್ಧಿಗಳಿಗೆ ತಲಾ 2 ಸಾವಿರ ರೂಪಾಯಿಗಳ ಪ್ರಶಸ್ತಿ ನೀಡಲಾಗುವದು.

ರಸಪ್ರಶ್ನೆ ಸ್ಪರ್ಧೆಯ 3 ಸುತ್ತು ಪೂರ್ಣಗೊಳಿಸಿದ ವಿಜೇತರಿಗೆ ಇಸಿಐ ಮರ್ಚಂಡೈಸ್ ಮತ್ತು ಇ-ಪ್ರಮಾಣಪತ್ರ ವಿತರಿಸಲಾಗುವುದು.

ಆಕರ್ಷಕ ನಗದು ಬಹುಮಾನದ ಜೊತೆಗೆ ಇ-ಪ್ರಮಾಣಪತ್ರ ಮತ್ತು ಇಸಿಐ ಮರ್ಚಂಡೈಸ್ ಹಾಗೂ ಚುನಾವಣಾ ಆಯೋಗದ ಸಾಮಾಜಿಕ ಮಾದ್ಯಮಗಳಲ್ಲಿ ಕಾಣಿಸಿಕೊಳ್ಳುವ ಅವಕಾಶ ಕಲ್ಪಿಸಲಾಗುವುದು.

ಸ್ಪರ್ಧೆಯಲ್ಲಿ ಎಲ್ಲಾ ವಯೋಮಾನದವರು ಭಾಗವಹಿಸಲು ಅವಕಾಶವಿದ್ದು, [email protected] ಮೇಲ್ ವಿಳಾಸಕ್ಕೆ ನಿಮ್ಮ ನಮೂದುಗಳನ್ನು ಕಳುಹಿಸಬಹುದಾಗಿದೆ.

ಜಿಲ್ಲೆ

ರಾಜ್ಯ

error: Content is protected !!