Tuesday, May 28, 2024

 ಬೇಲೆ ಹಾನಿ ಪರಿಹಾರದಲ್ಲಿ ತಾರತಮ್ಯ ಖಂಡಿಸಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರವೇ : ಮನವಿ

 ಸೇಡಂ:- ತಾಲೂಕಿನ ಅನೇಕ ಗ್ರಾಮಗಳ ರೈತರ ಹೊಲಕ್ಕೆ ಮಳೆಯಿಂದ ಬೆಳೆ ನಷ್ಟ ಆಗಿದ್ದು 2021-2022ನೇ ಸಾಲಿನ ಹೆಸರು, ಉದ್ದು, ತೊಗರಿ ಬೇಳೆಗಳು ಸೇರಿದಂತೆ ನಷ್ಟ ಪರಿಹಾರದಲ್ಲಿ ತಾರತಮ್ಯವನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅದ್ಯಕ್ಷ ರಾಮಚಂದ್ರ ಗುತ್ತೇದಾರ್ ಅವರ ನೇತೃತ್ವದಲ್ಲಿ ಇಂದು ಸೇಡಂ ತಹಸೀಲ್ದಾರರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಕೂಡಲೇ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನೂ ವಿಚಾರಿಸಿ ಸೂಕ್ತ ಕ್ರಮದಲ್ಲಿ ಸರಿಯಾದ ಉತ್ತರ ಕೊಡಬೇಕು ಮುಂದಿನ 8ದಿನಗಳ ಒಳಗೆ ಸೇಡಂ ತಾಲೂಕಿನ ಪ್ರತಿ ರೈತನ ಖಾತೆಯಲ್ಲಿ ಹಣ ಜಮಾ ಆಗಬೇಕು ಇಲ್ಲವಾದಲ್ಲಿ ತಮ್ಮ ಕಾರ್ಯಾಲಯದ ಮುಂದೆ ರೈತರ ಪರವಾಗಿ ಸತ್ಯಾಗ್ರಹ ಹೋರಾಟ ಮಾಡುತ್ತೇವೆ ಎಂದು ಕರವೇ ಕಾರ್ಯಕರ್ತರು ಮತ್ತು ಅದ್ಯಕ್ಷರು ಎಚ್ಚರಿಸಿದರು.

ಈ ಸಂದರ್ಬದಲ್ಲಿ ಕರ್ಣಾಟಕ ರಕ್ಷಣಾ ವೇದಿಕೆ ತಾಲೂಕ ಅದ್ಯಕ್ಷರು ರಾಮಚಂದ್ರ ಗುತ್ತೇದಾರ್, ಮಹೇಶ್ ಪಾಟೀಲ್ ಬಟಿಗೆರಾ, ಶ್ರೀನಿವಾಸ ರೆಡ್ಡಿ, ದೇವು ನಾಟಿಕಾರ್, ಚಂದ್ರಶೇಖರ್ ಪೂಜಾರಿ, ವೆಂಕಟೇಶ್ ಎಸ್ ಕೊಡ್ಲಾ, ಮಲ್ಲಿಕಾರ್ಜುನ್ ಕಾಕಲವರ್ ಬೆನಕನಹಳ್ಳಿ ಸೇರಿದಂತೆ ಅನೇಕ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ವರದಿ :ವೆಂಕಟಪ್ಪ ಕೆ ಸುಗ್ಗಾಲ್

ಜಿಲ್ಲೆ

ರಾಜ್ಯ

error: Content is protected !!