Saturday, July 27, 2024

ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣ ಪಡೆದು ಜೀವನ ರೂಪಿಸಿಕೊಂಡು ಸಮಾಜದ ಆಸ್ತಿಯಾಗಬೇಕು:ಹಿರಿಯ ಪತ್ರಕರ್ತ ಈಶ್ವರ ಹೋಟಿ

ಬೈಲಹೊಂಗಲ: ಬೆಳಗಾವಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾದ ಪ್ರತಿಷ್ಠಿತ ಜಿ. ನಾರಾಯಣಸ್ವಾಮಿ ಪ್ರಶಸ್ತಿ ಪುರಸ್ಕೃತ ವಿಜಯ ಕರ್ನಾಟಕ ದಿನಪತ್ರಿಕೆಯ ತಾಲೂಕಾ ಮುಖ್ಯ ವರದಿಗಾರರು ಹಾಗೂ ಹಿರಿಯ ಪತ್ರಕರ್ತರಾದ ಈಶ್ವರ ಹೋಟಿ ಅವರನ್ನು ಸಂಪಗಾವಿಯ ಆರ್.ಇ.ಎಸ್ ಪ್ರೌಢಶಾಲೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಈಶ್ವರ ಹೋಟಿ ಉತ್ತಮ ಸಮಾಜ ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಹೇಳಿದರು. ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣ ಪಡೆದು ಜೀವನ ರೂಪಿಸಿಕೊಂಡು ಸಮಾಜದ ಆಸ್ತಿಯಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು. ಸಾಧಕರನ್ನು ಗುರುತಿಸಿ ಸತ್ಕರಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ.ಎನ್.ಪ್ಯಾಟಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯೆ ಮೀನಾಕ್ಷಿ ಕುಡಸೋಮಣ್ಣವರ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯೆ  ರೋಹಿಣಿ ಪಾಟೀಲ ಮಾತನಾಡಿದರು. ಖ್ಯಾತ ಪ್ರವಚನಗಾರ್ತಿ ಪ್ರೇಮಕ್ಕ ಅಂಗಡಿ ಶಿಕ್ಷಣ ಹಾಗೂ ಸಂಸ್ಕಾರದ ಕುರಿತು ಉಪನ್ಯಾಸ ನೀಡಿದರು.

ಈ ವೇಳೆ ಇತ್ತೀಚಿಗೆ ನಿಧನರಾದ ಶಾಲೆಯ ಸಂಸ್ಥಾಪಕರು, ಮಾಜಿ ಸಂಸದರು ಎಸ್.ಬಿ. ಶಿದ್ನಾಳ, ನಟ ಪುನೀತ ರಾಜಕುಮಾರ, ಪದ್ಮಶ್ರೀ ಪ್ರಶಸ್ತಿ ವಿಜೇತ ಇಬ್ರಾಹಿಂ ಸುತಾರ, ಲತಾ ಮಂಗೇಶ್ಕರ, ಬಿಪಿನ ರಾವತ್ ಹಾಗೂ ಅಗಲಿದ ಆರ್. ಇ.ಎಸ್ ಸಂಸ್ಥೆಯ ಸದಸ್ಯರುಗಳಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಶಂಕರೆಪ್ಪ ಶಿದ್ನಾಳ ವಹಿಸಿದ್ದರು.ಕಾರ್ಯಕ್ರಮದಲ್ಲಿ ಧಾರವಾಡದ ಚೇತನಾ ಕಾಲೇಜಿನ ಸಂಸ್ಥಾಪಕ, ಕ್ರಿಯಾಶೀಲ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಗುರುಶಾಂತ ವಳಸಂಗ, ಜಗದೀಶ ಶಿದ್ನಾಳ, ಯುವ ಧುರೀಣರಾದ ದಿಗ್ವಿಜಯ ಶಿದ್ನಾಳ, ಕೇಂದ್ರ ಬಸವ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರೂ, ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಮೋಹನ ಬಸನಗೌಡ ಪಾಟೀಲ, ತಾಲ್ಲೂಕು ಅಧ್ಯಕ್ಷ ಎನ್.ಆರ್.ಠಕ್ಕಾಯಿ, ಎನ್ ಜಿ ಓ ಅಧ್ಯಕ್ಷ ಶಿವಾನಂದ ಕುಡಸೋಮಣ್ಣವರ, ಪಿ ಡಿ ಓ ಜ್ಯೋತಿ ಉಪ್ಪಿನ, ಗ್ರಾಮ ಪಂಚಾಯತ ಅಧ್ಯಕ್ಷೆ ಶೋಭಾ ಬುಲಾಕೆ, ಸಂಸ್ಥೆಯ ಉಪಾಧ್ಯಕ್ಷ ಮಹಾಂತೇಶ ಜಕಾತಿ, ಕಾರ್ಯದರ್ಶಿ ಬಸವರಾಜ ಶ್ರೀಶೈಲ್ ಉಳ್ಳೇಗಡ್ಡಿ ಹಾಗೂ ಸಂಸ್ಥೆಯ ಎಲ್ಲ ಪದಾಧಿಕಾರಿಗಳು, ಹಳೆಯ ವಿದ್ಯಾರ್ಥಿ ದುಂಡಪ್ಪ ವಕ್ಕುಂದ, ಶಿಕ್ಷಕ ಸಂಘದ ಪ್ರತಿನಿಧಿಗಳಾದ ಎಸ್.ಡಿ ಗಂಗಣ್ಣವರ, ಗ್ರಾಮ ಪಂಚಾಯತಿ ಸದಸ್ಯರಾದ ಬಸವರಾಜ ಉಳ್ಳೇಗಡ್ಡಿ, ಮಂಜುನಾಥ ಶಿಡ್ಲೆವ್ವಗೋಳ, ಉಪಾಧ್ಯಕ್ಷ ಸುರೇಶ ದೇಶಣ್ಣವರ ಹಾಗೂ ಮಹಿಳಾ ಗ್ರಾ ಪಂ ಸದಸ್ಯರು ಉಪಸ್ಥಿತರಿದ್ದರು.

ಉಮಾರೂಢ ತಲ್ಲೂರ ನಿರೂಪಿಸಿದರು. ದೀಪ ಹಸ್ತಾಂತರ ಕಾರ್ಯಕ್ರಮವನ್ನು ಶಿಕ್ಷಕ ವಿಠ್ಠಲ ಬಡಿಗೇರ ನೆರವೇರಿಸಿದರು. ಶ್ರೀಕಾಂತ ಉಳ್ಳೇಗಡ್ಡಿ ಸ್ವಾಗತಿಸಿದರು.ಆನಂದ ಬಡಿಗೇರ ವಂದಿಸಿದರು.

ಜಿಲ್ಲೆ

ರಾಜ್ಯ

error: Content is protected !!