Tuesday, October 1, 2024

ಮಕ್ಕಳು ಬೇಗ ಶಾಲೆಗೆ ಬಂದರೂ ಶಿಕ್ಷಕರು ಬೇಗ ಬರೊದಿಲ್ಲವಂತೆ!ಕೊಠಡಿಯಲ್ಲಿಯೇ ಹಾಸಿಗೆ ಹಾಸಿ ಮಲಗುತ್ತಾರಂತೆ! ಕೊಠಡಿಗಳಿಗೆ ಬೀಗ ಜಡಿದ ವಿದ್ಯಾರ್ಥಿಗಳು.

ಬೆಳಗಾವಿ: ಜಿಲ್ಲೆಯ ಖಾನಾಪೂರ ತಾಲ್ಲೂಕಿನ ರಾಜವಾಳ ಗೌಳಿವಾಡಾ ಮರಾಠಿ ಶಾಲೆಯ ಶಿಕ್ಷಕರ ವಿರುದ್ಧ ಶಾಲೆಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಗೌಳಿವಾಡಾ ಶಾಲೆಯ ವಿದ್ಯಾರ್ಥಿಗಳು ಬೇಗ ಶಾಲೆಗೆ ಬಂದರೂ  ಶಿಕ್ಷಕರು ಬೇಗ ಬರೊದಿಲ್ಲ ಎಂದು ಆರೋಪವನ್ನು ಮಾಡಿದ್ದಾರೆ.ಕೊಠಡಿಗಳಿಗೆ ಬೀಗ ಜಡಿದು ವಿದ್ಯಾರ್ಥಿಗಳು ಖಂಡಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. 1ರಿಂದ 5ನೇ ತರಗತಿಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು, ಶಿಕ್ಷಕರು ನಿಯಮಿತವಾಗಿ ಶಾಲೆಗೆ ಬರುವುದಿಲ್ಲ ಮಧ್ಯಾಹ್ನ ಬೇಗ ಮನೆಗೆ ತೆರಳುತ್ತಾರೆ.ಶಾಲಾ ಅವಧಿಯಲ್ಲಿ ವರ್ಗ ಕೊಠಡಿಯಲ್ಲಿ ಹಾಸಿಗೆ ಹಾಸಿ ಮಲಗುತ್ತಾರ.ತಮಗೆ ಶೌಚಾಲಯ ತೊಳೆಯುವಂತೆ.ನೀರು ತರುವಂತೆ ಕೆಲಸ ಹೇಳುತ್ತಾರೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ. 

ಶಾಲೆಯಲ್ಲಿ 88 ಮಕ್ಕಳು ಇದ್ದು,3 ಜನ ಖಾಯಂ ಶಿಕ್ಷಕರು ಒಬ್ಬರು ಅಥಿತಿ ಶಿಕ್ಷಕರಿದ್ದು, ಶಾಲಾ ವಾತಾವರಣ ಚನ್ನಾಗಿದ್ದರು ಕೂಡ ಶೈಕ್ಷಣಿಕ ಪ್ರಗತಿ ಕುಂಠಿತಗೊಳ್ಳುತ್ತಿರುವುದು ವಿಪರ್ಯಾಸ. ಇಂಥ ಬೇಜವಾಬ್ದಾರಿ ಶಿಕ್ಷಕರಿಂದ ತಮ್ಮ ಶೈಕ್ಷಣಿಕ ಪ್ರಗತಿ ಕುಂಠಿತಗೊಂಡಿದೆ ಕರ್ತವ್ಯಲೋಪ ಎಸಗುತ್ತಿರುವ ಶಿಕ್ಷಕರ ವಿರುದ್ಧ ಕ್ರಮ ಕೈಗೊಂಡು ಬೇರೆ ಶಿಕ್ಷಕರ ವ್ಯವಸ್ಥೆ ಮಾಡುವಂತೆ ಮಕ್ಕಳು ಮನವಿ ಮಾಡಿದ್ದಾರೆ. 

ಇದು ನನ್ನ ಗಮನಕ್ಕೆ ಬಂದಿದ್ದು,ಶಾಲೆಗೆ ಭೇಟಿ ನೀಡಿ ತಪ್ಪಿತಸ್ಥತರ ವಿರುದ್ದ ಕ್ರಮ ಕೈಗೊಳ್ಳುತೇನೆ.   

         ಲಕ್ಷ್ಮಣರಾವ ಯಕ್ಕುಂಡಿ.ಕ್ಷೇತ್ರ ಶಿಕ್ಷಣಾಧಿಕಾರಿ.ಖಾನಾಪೂರ

 

 

ಜಿಲ್ಲೆ

ರಾಜ್ಯ

error: Content is protected !!