Thursday, July 25, 2024

ಕಲ್ಯಾಣ ಕರ್ನಾಟಕ ಅಭಿವೃದ್ದಿಯೇ ನಮ್ಮ ಗುರಿ : ಸಚಿವ ಶ್ರೀರಾಮುಲು

ಸಿರುಗುಪ್ಪ : ನಗರದಲ್ಲಿ 2.48 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ನೂತನ ಬಸ್ ನಿಲ್ದಾಣದವನ್ನು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಬಿ.ಶ್ರೀರಾಮುಲು ಅವರು ಉದ್ಘಾಟಿಸಿ  ಮಾತನಾಡಿದ ಅವರು ಸಿ.ಎಂ.ಬಸವರಾಜ್ ಬೊಮ್ಮಾಯಿ ಅವರು ಕಲ್ಬುರ್ಗಿಯಲ್ಲಿ ನಡೆದ ಹೈದ್ರಬಾದ್ ಕರ್ನಾಟಕದ ವಿಮೋಚನಾ ದಿನದ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕದ 6 ಜಿಲ್ಲೆಗಳನ್ನೊಳಗೊಂಡ ಕಲ್ಯಾಣ ಕರ್ನಾಟಕದ ಅಭಿವೃದ್ದಿಗಾಗಿ 1500 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದ್ದು, ಅಷ್ಟು ಅನುದಾನವನ್ನು ಖರ್ಚು ಮಾಡಿದಲ್ಲಿ ಮತ್ತೆ 1500ಕೋಟಿ ಅನುದಾನ ನೀಡುವುದಾಗಿ ಆದೇಶಿಸಿದ್ದಾರೆ ಎಂದು ಹೇಳಿದರು.

ಸಾರಿಗೆ ಇಲಾಖೆಯಲ್ಲಿ ಅನೇಕ ಬದಲಾವಣೆಗಳನ್ನು ತರಲು ಪ್ರಯತ್ನದಲ್ಲಿದ್ದ ನಮಗೆ ಕೋವಿಡ್ ತಡೆಯುಂಟು ಮಾಡಿದ್ದರಿಂದ ಸಾರಿಗೆ ನೌಕರರಿಗೆ ಸರಿಯಾದ ಸಮಯಕ್ಕೆ ವೇತನ ನೀಡಲು ತೊಂದರೆಯಾಯಿತು.ಆದರೂ ಕೋವಿಡ್ ಸಂದರ್ಭದಲ್ಲಿಯೂ ನೌಕರರ ವೇತನ ಸೇರಿದಂತೆ ಇನ್ನಿತರ ಸೌಕರ್ಯಕ್ಕೆ ಸರ್ಕಾರವು ಸ್ಪಂದಿಸಿದ್ದು ಮುಷ್ಕರ ಸಂದರ್ಭದಲ್ಲಿ ಕೆಲಸದಿಂದ ವಜಾಗೊಂಡಿದ್ದ 2500 ನೌಕರರನ್ನು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನೇಮಕ ಮಾಡಲಾಯಿತು.

ಕೋವಿಡ್ ಮತ್ತಿತರ ಕಾರಣಗಳಿಂದ ಸಾರಿಗೆ ಇಲಾಖೆಯ ನೌಕರರಿಗೆ ವೇತನ ವಿಳಂಬವಾಗುತ್ತಿದ್ದು. ಮುಂದಿನ ದಿನಗಳಲ್ಲಿ ಸರಿಯಾದ ಸಮಯಕ್ಕೆ ಅವರವರ ಬ್ಯಾಂಕ್ ಖಾತೆಗಳಿಗೆ ಸಂಬಳ ಜಮಾ ಆಗುವಂತೆ ನೋಡಿಕೊಳ್ಳಲಾಗುವುದು.

ಸಾರಿಗೆ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ. ಅವರ ಮನವೊಲಿಸಿ ಶೀಘ್ರ ವೇತನ ಪರಿಷ್ಕರಿಸುವ ಕೆಲಸ ಮಾಡಲಾಗುವುದು ಸಾರಿಗೆ ಇಲಾಖೆಯಲ್ಲಿ ಬದಲಾವಣೆ ತರುವ ಪ್ರಯತ್ನ ನಡೆದಿದೆ.

ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕ ಪ್ರದೇಶಗಳಲ್ಲಿ 8-9ಲಕ್ಷ ಓಡಿದ ಬಸ್‌ಗಳಿದ್ದು, ಅವುಗಳನ್ನೆಲ್ಲ ಸ್ಕ್ರ‍್ಯಾಪ್ ಮಾಡಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ 2000 ಎಲೆಕ್ಟ್ರಿಕ ಹೊಸ ಬಸ್ ಗಳನ್ನು ಒದಗಿಸಲು ಕ್ರಮವಹಿಸಲಾಗುವುದೆಂದು ಹೇಳಿದರು.

ಗಾರ್ಮೆಂಟ್ಸ್ ಕಾರ್ಮಿಕರು, ಶಾಲಾ ವಿದ್ಯಾರ್ಥಿಗಳಿಗೆ ನೀಡುವಂತೆ ಉಚಿತ ಬಸ್ ಸೌಲಭ್ಯವನ್ನು ಕಟ್ಟಡ ಕಾರ್ಮಿಕರಿಗೂ ನೀಡುವ ನಿಟ್ಟಿನಲ್ಲಿ ಮುಂದಿನ ತಿಂಗಳು ಮಂಡಿಸಲಿರುವ ಬಜೆಟ್ ನಲ್ಲಿ ಮುಖ್ಯಮಂತ್ರಿಗಳು ಘೋಷಣೆ ಮಾಡಲಿದ್ದಾರೆ ಎಂದರು.

ಸಮಾರಂಭದ ಅಧ್ಯಕ್ಷತೆವಹಿಸಿದ್ದ ಶಾಸಕ ಸೋಮಲಿಂಗಪ್ಪ ಮಾತನಾಡಿ, ಬರುವ ಏಪ್ರಿಲ್ ತಿಂಗಳಲ್ಲಿ ಸಿರಗುಪ್ಪ ನಗರಕ್ಕೆ ಸಮರ್ಪಕ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗುವುದು. ತಮ್ಮ ಈ ಶಾಸಕ ಅವಧಿ ಮುಗಿಯುವುದರೊಳಗೆ 1ಸಾವಿರ ಕೋಟಿ ರೂ.ಗಳನ್ನು ತಂದು ಸಿರುಗುಪ್ಪ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮುಂದಾಗಲಿದೆ0ದರು.
2.50ಕೋಟಿ ರೂ.ವೆಚ್ಚದ 4570 ಚದರ ಅಡಿಯಲ್ಲಿ ನಿರ್ಮಿಸಲಾಗಿರುವ ನೂತನ ಬಸ್ ನಿಲ್ದಾಣದಲ್ಲಿ ನೆಲಹಂತಸ್ತು, ಮೊದಲ ಹಂತಸ್ತು ನಿರ್ಮಿಸಲಾಗಿದೆ.

ಈ ಬಸ್ ನಿಲ್ದಾಣದಲ್ಲಿ ವಿಸ್ತಾರವಾದ ಮಹಿಳಾ ನಿರೀಕ್ಷಣಾ ಕೊಠಡಿ, ವಿಸ್ತರವಾದ ಉಪಹಾರಗೃಹ, ಸಂಚಾರ ನಿಯಂತ್ರಣ ಕೊಠಡಿ, ಪ್ರಯಾಣಿಕರಿಗೆ ಅವಶ್ಯಕವಾದ ಚಿಕ್ಕ ಮಳಿಗೆಗಳು, ಬೇಕರಿ, ಪೇಪರ್ ಸ್ಟಾಲ್, ಔಷಧಿ, ಶೌಚಾಲಯಗಳ ವ್ಯವಸ್ಥೆ ಕಲ್ಪಿಸಲಾಗಿದೆ.

ಈ ವೇಳೆ ಸಾರಿಗೆ ಇಲಾಖೆ ಅಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವರದಿ:ಎಸ್.ಶ್ರೀನಿವಾಸ ನಾಯ್ಕ.ಸಿರುಗುಪ್ಪ

ಜಿಲ್ಲೆ

ರಾಜ್ಯ

error: Content is protected !!