Tuesday, May 28, 2024

ಅಂಬೇಡ್ಕರ್‌ಗೆ ಅಪಮಾನ ವಿವಾದ: ನ್ಯಾಯಾಧೀಶರ ವಿರುದ್ಧ ಬೆಂಗಳೂರು ನಲ್ಲಿ ‘ ಬೃಹತ್ ಪ್ರತಿಭಟನೆ..

ಬೆಂಗಳೂರು: ಗಣರಾಜ್ಯೋತ್ಸವ ಕಾರ್ಯಕ್ರಮ ದಂದು ಡಾ. ಅಂಬೇಡ್ಕರ್‌ ಅವರ ಭಾವಚಿತ್ರವನ್ನು ತೆಗೆಸಿದ ಆರೋಪ ಎದುರಿಸುತ್ತಿರುವ ರಾಯಚೂರಿನ ಜಿಲ್ಲಾ ನ್ಯಾಯಾಧೀಶರಾಗಿದ್ದ ನ್ಯಾ. ಮಲ್ಲಿಕಾರ್ಜುನಗೌಡ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ‘ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ-ಕರ್ನಾಟಕ’ದ ವತಿಯಿಂದ ಶನಿವಾರ ಬೃಹತ್ ‘ವಿಧಾನಸೌಧ-ಹೈಕೋರ್ಟ್‌ ಚಲೋ’ ನಡೆಸಲಾಯಿತು.

ಇದರ ಅಂಗವಾಗಿ ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೆ ನಾನಾ ದಲಿತರ ಸಂಘಟನೆಗಳ ಮುಖಂಡರು, ಪ್ರಗತಿಪರ ಚಿಂತಕರು, ಕಲಾವಿದರು ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಸುತ್ತೋಲೆಯಿದ್ದರೂ, ಗಣ ರಾಜ್ಯೋತ್ಸವ ಕಾರ್ಯಕ್ರಮದಿಂದ ಅಂಬೇಡ್ಕರ್‌ ಅವರ ಭಾವಚಿತ್ರ ತೆಗೆಸಿದ ನ್ಯಾಯಾಧೀಶರ ಕ್ರಮ ಅಕ್ಷಮ್ಯ. ಅವರನ್ನು ವರ್ಗಾವಣೆ ಮಾಡಿದ್ದು ನಿಜ. ಆದರೆ, ನ್ಯಾ. ಮಲ್ಲಿಕಾರ್ಜುನ ಗೌಡ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು.

ನ್ಯಾಯಾಂಗದಲ್ಲಿ ಶೋಷಿತ ಸಮುದಾಯದವರ ಪ್ರಾತಿನಿಧ್ಯ ಹೆಚ್ಚಳಕ್ಕೆ ಸರಕಾರ ಕ್ರಮ ಕೈಗೊಳ್ಳಬೇಕು. ಡಾ. ಬಿ.ಆರ್‌. ಅಂಬೇಡ್ಕರ್‌ ಭಾವಚಿತ್ರವನ್ನು ಎಲ್ಲಾ ನ್ಯಾಯಾಲಯಗಳಲ್ಲಿ ಕಡ್ಡಾಯವಾಗಿ ಹಾಕಬೇಕು,” ಎಂದು ಒತ್ತಾಯಿಸಿದರು.

ಸ್ಥಳಕ್ಕೆ ತೆರಳಿ ಮನವಿ ಸ್ವೀಕರಿಸಿದ ಸಿಎಂ.‘ವಿಧಾನಸೌಧ ಮತ್ತು ಹೈಕೋರ್ಟ್‌ ಚಲೋ’ ಹಿನ್ನೆಲೆಯಲ್ಲಿ ಫ್ರೀಡಂ ಪಾರ್ಕ್‌ನಲ್ಲಿ ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ-ಕರ್ನಾಟಕ ಹಮ್ಮಿಕೊಂಡಿದ್ದ ಪ್ರತಿಭಟನಾ ಸ್ಥಳಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೆರಳಿ ಮನವಿ ಸ್ವೀಕರಿಸಿದರು.

ಒಕ್ಕೂಟದ ಬೇಡಿಕೆಗಳನ್ನು ಪರಿಶೀಲಿಸಿ, ಸೂಕ್ತ ಕ್ರಮ ಜರುಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಈ ಪ್ರತಿಭಟನೆ ಮುದಗಲ್ಲ ಹಾಗೂ ಲಿಂಗಸೂರು ನ ದಲಿತ ಸಂಘಟನೆಗಳ ಮುಖಂಡರು
ಭಾಗಿಯಾಗಿದ್ದರು.  ಮುದಗಲ್ಲ ಶರಣಪ್ಪ ಕಟ್ಟಿಮನಿ, ಕೃಷ್ಣ ಚಲುವಾದಿ, ಬಸವರಾಜ ಬಂಕದ ಮನಿ ಹಾಗೂ ಇತರರು ಉಪಸ್ಥಿತರಿದ್ದರು

ಈ ಕಾರ್ಯಕ್ರಮದಲ್ಲಿ ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯ ಕಾರ್ಯಕರ್ತರು ಭಾಗವಹಿಸಿದರು ರಾಜ್ಯ ಅಧ್ಯಕ್ಷರಾದ ಮಲ್ಲಪ್ಪ ಹೊಸಮನಿ ಇಂಗನಕಲ್ ರಾಜ್ಯ
ಉಪಾಧ್ಯಕ್ಷ ಆರ್. ತಿಮ್ಮಾರೆಡ್ಡಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎ. ಸಿ. ದಾನಪ್ಪ ವಿಭಾಗಿಯ ಪ್ರಧಾನ ಕಾರ್ಯದರ್ಶಿ ಕಲ್ಯಾಣರಾವ್ ಡೊಣ್ಣುರ ದಿನೇಶ್ ಮೊಗಾ ಕಾಶಿನಾಥ್ ಶೆಳ್ಳಗಿ ನವೀನ್ ಕುಮಸಿ ಗುರು ಕಾಂಗ್ರೆಸ್ ಮುಖಂಡರಾದ ಸುನಿಲ್ ದೊಡ್ಡಮನಿ ಅಶೋಕ್
ವೀರನಾಯಕ ಅನೇಕ ದಲಿತ ಪ್ಯಾಂಥರ್ ಕಾರ್ಯಕರ್ತರು ಭಾಗವಹಿಸಿದ್ದರು

ವರದಿ: ಮಂಜುನಾಥ ಕುಂಬಾರ

ಜಿಲ್ಲೆ

ರಾಜ್ಯ

error: Content is protected !!