Thursday, July 25, 2024

ಬಡತನದಲ್ಲಿ ಅರಳಿದ ಪ್ರತಿಭೆ ನೀತಾ ಹಣಬರಗೆ ಸನ್ಮಾನ.

ಬೆಳಗಾವಿ: ಪ್ರತಿಭೆಯು ಗುಡಿಸಲಲ್ಲಿ ಹುಟ್ಟಿ ಅರಮನೆಯಲ್ಲಿ ಬೆಳಗುತ್ತದೆ, ಎಂಬಂತೆ
ಬಡತನದಲ್ಲಿ ಅರಳಿದ ಪ್ರತಿಭೆಗೆ ಕರ್ನಾಟಕ ಹಣಬರ ಯಾದವ ಸಾಮಾಜಿಕ ಜಾಲತಾಣ ತಂಡದಿಂದ ಅಭಿನಂದನೆಯ ಸನ್ಮಾನ.

ಐಎಎಸ್ ಕನಸು ಹೊತ್ತಿರುವ ಮುಂದಿನ ವಿದ್ಯಾಭ್ಯಾಸಕ್ಕೆ ಐಎಎಸ್ ಕೋಚಿಂಗ್ ಹೊರಟಿರುವ ಪ್ರಸ್ತುತ ಬೆಳಗಾವಿ ಅಂಗಡಿ ತಾಂತ್ರಿಕ ಮಹಾವಿದ್ಯಾಲಯದ ಎಮ್‌,ಕಾಮ್. ವಿಭಾಗದಲ್ಲಿ ವಿದ್ಯಾಲಯಕ್ಕೆ ಪ್ರಥಮಸ್ಥಾನ ಬಂದಿರುವ ನೀತಾ ಹಣಬರ ಅವರಿಗೆ ಇಂದು ಕರ್ನಾಟಕ ಹಣಬರ ಯಾದವ ಸಾಮಾಜಿಕ ಜಾಲತಾಣ ತಂಡದಿಂದ ಕೆ.ಕೆ ಕೊಪ್ಪ ಗ್ರಾಮದಲ್ಲಿ ಸನ್ಮಾನ ಮಾಡಲಾಯಿತು. 

ನಮ್ಮ ಸಮಾಜ ಶಿಕ್ಷಣದಿಂದ ವಂಚಿತವಾಗಿದ್ದು ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳನ್ನು ಉನ್ನತ ಸ್ಥಾನಕ್ಕೆ ತಲುಪಿಸಲು ಶಿಕ್ಷಣಕ್ಕೆ ಮಹತ್ವ ನೀಡುತ್ತಿದ್ದು. ಇದರ ಉತ್ತಮ ಉದಾಹರಣೆ ಬಡತನ ಇದ್ದರು ಪ್ರತಿಭಾವಂತೆ ಯಾಗಿರುವ ಸೋದರಿ ನೀತಾ ಅವರು ಐಎಎಸ್ ಆಗುವ ಮುಖಾಂತರ ನಮ್ಮ ಸಮಾಜದ ಪ್ರಥಮ ಅಧಿಕಾರಿಯಾಗಿ ಆಯ್ಕೆಯಾಗಿ ಮುಂದಿನ ಪೀಳಿಗೆಗೆ ಪ್ರತಿಯೊಂದು ಊರಿನಿಂದ ಉನ್ನತ ಶಿಕ್ಷಣದಿಂದ ಅಧಿಕಾರಿಯಾಗಲು ಪ್ರೇರಣೆಯಾಗಲಿ ಎಂದರು.

ಈ ಸಂದರ್ಭದಲ್ಲಿ ಆತ್ಮೀಯ ಗುರುಗಳಾದ ಕರ್ನಾಟಕ ಪ್ರಾಥಮಿಕ ಶಿಕ್ಷಕರ ಸಂಘದ ಬೆಳಗಾವಿ ಜಿಲ್ಲಾ ಖಜಾಂಚಿ  ಯಲ್ಲಪ್ಪ ಪೂಜೆರ  ಅವರ ಪ್ರಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಹಣಬರ ಯಾದವ ಸಾಮಾಜಿಕ ಜಾಲತಾಣ ತಂಡದ ಅಧ್ಯಕ್ಷ ನಾಗರಾಜ ಹಣಬರ. ಜಿಲ್ಲಾಧ್ಯಕ್ಷ ಪ್ರಶಾಂತ್ ಕೌಲಗಿ .ಉಪಾಧ್ಯಕ್ಷರ ರಾಘವ ಹಣಬರ. ಶಿವು ಹಣಬರ. ಮಂಜು ಹಾಲಗಿಮರ್ಡಿ.ರಮೇಶ್ ಪಾಟೀಲ್ .ಸಂಜು ವಾಗ್. ಹಾಗೂ ಕೇಕೆ ಕೊಪ್ಪ ಗ್ರಾಮದ ಸಮಾಜದ ಯುವಕರು ಹಾಗೂ ಹಿರಿಯರು ಉಪಸ್ಥಿತರಿದ್ದರು.

ಜಿಲ್ಲೆ

ರಾಜ್ಯ

error: Content is protected !!