Tuesday, October 1, 2024

ರಂಗಾಯಣಗಳು ರಂಗಕಲೆಯನ್ನು ಬೆಳೆಸುತ್ತಿವೆ:ಮಹಾರುದ್ರಪ್ಪ ನಂದೆಣ್ಣವರ

ಧಾರವಾಡ: ಅಂದು ಮತ್ತು ಇಂದಿನ ಕಾಲಕ್ಕೆ ನಾಟಕಗಳ ಸ್ಥಿತಿಗತಿಗಳು ಬದಲಾವಣೆಗೊಂಡಿವೆ. ಭಾರತೀಯ ರಂಗಕಲೆಯನ್ನು ಉಳಿಸಿ ಬೆಳೆಸುವಲ್ಲಿ ರಂಗಾಯಣಗಳು ಸಹಕಾರಿಯಾಗಿವೆ ಎಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಬೆಳಗಾವಿ ಜಿಲ್ಲಾಧ್ಯಕ್ಷರು ಹಾಗೂ ರಂಗಭೂಮಿ ಕಲಾವಿದರಾದ ಮಹಾರುದ್ರಪ್ಪ ನಂದೆಣ್ಣವರ ಅವರು ಹೇಳಿದರು.

ರಂಗಾಯಣದ ಸುವರ್ಣ ಸಾಂಸ್ಕøತಿಕ ಸಮುಚ್ಛಯ ಸಭಾಭವನದಲ್ಲಿ ಏರ್ಪಡಿಸಿದ್ದ ವಾರಾಂತ್ಯ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ, ಮಾತನಾಡಿದರು. ರಂಗಾಯಣಗಳು ಇತಿಹಾಸ, ಸಾಮಾಜಿಕ ಹಾಗೂ ಪ್ರಚಲಿತ ವಿಚಾರಗಳ ಕುರಿತು ನಾಟಕಗಳನ್ನು ಪ್ರದರ್ಶನ ಮಾಡುವ ಮೂಲಕ ಜನರಲ್ಲಿ ಅರಿವನ್ನು ಮೂಡಿಸುವ ಕಾರ್ಯವನ್ನು ಮಾಡುತ್ತಿವೆ ಎಂದು ತಿಳಿಸಿದರು.

ರಂಗಸಮಾಜದ ಸದಸ್ಯರಾದ ಹಿಪ್ಪರಗಿ ಸಿದ್ಧರಾಮ ಅವರು ಮಾತನಾಡಿ, ರಂಗಾಯಣಗಳು ಅತ್ಯಂತ ಕ್ರೀಯಾಶೀಲವಾಗಿ ರಂಗಚಟುವಟಿಕೆಗಳನ್ನು ಮಾಡುವ ಮೂಲಕ ಉತ್ತಮ ನಾಟಕಗಳನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿವೆ. ಧಾರವಾಡ ರಂಗಾಯಣವು ಪ್ರತಿ ವಾರವೂ ನಾಟಕಗಳನ್ನು ಪ್ರದರ್ಶನ ಮಾಡುವ ಮೂಲಕ ರಂಗಾಸಕ್ತರ ಮನವನ್ನು ತಣಿಸುತ್ತಿವೆ ಎಂದರು.

ರಂಗಾಯಣದ ನಿರ್ದೇಶಕ ರಮೇಶ ಪರವಿನಾಯ್ಕರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ರಂಗಾಯಣವು ಪ್ರತಿ ವಾರಾಂತ್ಯದಲ್ಲಿ ಹವ್ಯಾಸಿ ಹಾಗೂ ವೃತ್ತಿ ರಂಗಭೂಮಿ ಕಲಾವಿದರಿಗೆ ಅವಕಾಶಗಳನ್ನು ನೀಡುತ್ತಿದೆ. ಇದರಿಂದ ಎಲ್ಲ ಕಲಾವಿದರಿಗೂ ಸಹಕಾರ ದೊರಕುತ್ತಿವೆ. ರಂಗಾಸಕ್ತರು ನಾಟಕಗಳನ್ನು ನೋಡುವುದರ ಮೂಲಕ ರಂಗಭೂಮಿಯನ್ನು ಬೆಳೆಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಹಿರಿಯ ತಬಲಾ ಕಲಾವಿದರಾದ ಸುರೇಶ ನಿಡಗುಂದಿ, ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಅವರು ಉಪಸ್ಥಿತರಿದ್ದರು. ಫಕ್ಕೀರಪ್ಪ ಮಾದನಭಾವಿ ಕಾರ್ಯಕ್ರಮ ನಿರೂಪಿಸಿದರು. ಜೋಗಿ ರಚಿಸಿ, ಮಂಜು ಸಿರಿಗೇರಿ ನಿರ್ದೇಶಿಸಿದ ವಿಶ್ವಾಮಿತ್ರ ಮೇನಕೆ ಡಾನ್ಸ್ ಮಾಡೋದು ಏನಕೆ ನಾಟಕವನ್ನು ಧಾತ್ರಿ ರಂಗ ಸಂಸ್ಥೆ (ರಿ) ಸಿರಿಗೇರಿ ಕಲಾವಿದರು ಪ್ರದರ್ಶಿಸಿದರು.

ಜಿಲ್ಲೆ

ರಾಜ್ಯ

error: Content is protected !!