Saturday, June 15, 2024

ಬಿಜೆಪಿ ಪಕ್ಷ ಕಾರ್ಯಕರ್ತರ ಪಕ್ಷ : ಶಾಸಕ ದೊಡ್ಡನಗೌಡ ಪಾಟೀಲ್.

ಇಳಕಲ್:ಭಾರತೀಯ ಜನತಾ ಪಕ್ಷ ಹುನಗುಂದ ಮತಕ್ಷೇತ್ರ ದ ವತಿಯಿಂದ ಹುನಗುಂದ ಗ್ರಾಮೀಣ ಮತ್ತು ಇಲಕಲ್ಲ ನಗರ ಮಂಡಲದ ವಿಸ್ತಾರಕರ ಕಾರ್ಯಾಗಾರ ನಗರದ ಹೊರವಲಯದ ಕಡಪಟ್ಟಿ ಫಾರ್ಮ್ ಹೌಸ್ ನಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ವಿಸ್ತಾರಕರು ಹಾಗೂ ಪಕ್ಷದ ಕಾರ್ಯಕರ್ತರು ಸಂಘಟಿತರಾಗಬೇಕು.ದೇಶದ ಪ್ರಧಾನ ಮಂತ್ರಿಗಳ ಹಲವಾರು ಜನಪರ ಯೋಜನೆಗಳನ್ನು ಹಾಗೂ ಕರ್ನಾಟಕ ಸರ್ಕಾರದ ಬಿಎಸ್ ವೈ ಹಾಗೂ ಬೊಮ್ಮಾಯಿಯವರ ಯೋಜನೆಗಳನ್ನು ಕೂಡ ಜನರಿಗೆ ನೇರವಾಗಿ ಮುಟ್ಟಿಸುವ ಕೆಲಸವನ್ನು ಎಲ್ಲರೂ ಮಾಡಬೇಕು ಎಂದು ಹುನಗುಂದ ಮತಕ್ಷೇತ್ರದ ಶಾಸಕ ದೊಡ್ಡನಗೌಡ ಜಿ ಪಾಟೀಲ್ ಮಾತನಾಡಿದರು.

ಈ ಸಭೆಯಲ್ಲಿ ಜಿಲ್ಲಾ ಭಾಜಪ ಪಕ್ಷದ ಬೆಳಗಾವಿ ವಿಭಾಗದ ಪ್ರಭಾರಿ ಬಸವರಾಜ ಯಂಕಂಚಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಿ ಟಿ ಉಪಾಧ್ಯ.ಮಲ್ಲು ಚೂರಿ.ಮಹಾಂತಗೌಡ ಪಾಟೀಲ .ಮಂಜುನಾಥ್ ಶೆಟ್ಟರ್.ಮಲ್ಲಯ್ಯ ಮೂಗನೂರಮಠ.ಚಂದ್ರಶೇಖರ್ ಎಕ್ಬೊಟೆ. ಅರವಿಂದ ಮಂಗಳೂರ ಹಾಗೂ ಭಾಜಪ ಪಕ್ಷದ ಪ್ರಮುಖ ಮುಖಂಡರು ಭಾಗವಹಿಸಿದ್ದರು.

ವರದಿ. ದಾವಲ್. ಶೇಡಂ

ಜಿಲ್ಲೆ

ರಾಜ್ಯ

error: Content is protected !!