Saturday, June 15, 2024

ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ ಮಹಾ ಪರಾಕ್ರಮಿ ಛತ್ರಪತಿ ಶಿವಾಜಿ:ಮುಖ್ಯಾಧಿಕಾರಿ ಮರಿಲಿಂಗಪ್ಪ

ಮುದಗಲ್ಲ : ಪುರಸಭೆಯಲ್ಲಿ ಮುಖ್ಯಾಧಿಕಾರಿ ಮರಿಲಿಂಗಪ್ಪ ಅವರ ನೇತೃತ್ವದಲ್ಲಿ ಶಿವಾಜಿ ಜಯಂತಿ ಆಚರಿಸಲಾಯಿತು.  ಶಿವಾಜಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಪುರಸಭೆಯ ಸದಸ್ಯ ಗುಂಡಣ್ಣ ಗಂಗಾವತಿ ಅವರು ಪುಷ್ಪ ನಮನ ಸಲ್ಲಿಸಿ, ಮಾಲಾರ್ಪಣೆ ಮಾಡಿದರು.

ಪುರಸಭೆ ಮುಖ್ಯಾಧಿಕಾರಿ ಮರಿಲಿಂಗಪ್ಪ ಮಾತನಾಡಿ ಶಿವಾಜಿ ಮಹಾರಾಜರು ರಾಜನಾಗಿದ್ದು ಸ್ವಂತ ಬಲದಿಂದ ಎಂದ ಅವರು ಸಮಾಜದಲ್ಲಿ ಹಲವಾರು ಶೋಷಣೆಗಳನ್ನು ಅನುಭವಿಸಿದ ಶಿವಾಜಿ ಮಹಾ ರಾಜರು ತಮ್ಮ ಸಾಮ್ರಾಜ್ಯ ಕಟ್ಟಿ ಅಲ್ಲಿನ ಶೂದ್ರರು, ಬುಡಗಟ್ಟು ಜನಾಂಗದವರು ಹಾಗೂ ಮುಸ್ಲಿಮರನ್ನು ಸಮಾನವಾಗಿ ಕಾಣುವ ಮೂಲಕ ಸಾಮಾಜಿಕ ತಾರತಮ್ಯವನ್ನು ಮೆಟ್ಟಿ ನಿಂತಿವರು ಹಾಗು ಅನ್ಯರ ವಿರುದ್ಧ ಹೋರಾಡುವ ಮೂಲಕ ಸ್ವರಾಜ್ಯ ಸ್ಥಾಪನೆಯ ಪ್ರಥಮ ರಾಜ ಛತ್ರಪತಿ ಶಿವಾಜಿ ಮಹಾರಾಜರು.ಭೂಕಬಳಿಕೆ, ಅನ್ಯಾಯಗಳನ್ನು ಎಂದೂ ಸಹಿಸಿಕೊಳ್ಳದ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ ಮಹಾ ಪರಾಕ್ರಮಿ ಎಂದರು.

ಈ ಸಂದರ್ಭದಲ್ಲಿ ಪುರಸಭೆಯ  ಸದಸ್ಯ ಗುಂಡಣ್ಣ ಗಂಗಾವತಿ, ಜೆಡಿಎಸ್ ಮುಖಂಡ ಕರಿಯಪ್ಪ ಯಾದವ್, ಪುರಸಭೆ ಸಿಬ್ಬಂದಿ ನಿಸಾರ್ ,ಚನ್ನಮ್ಮ, ಕುಪ್ಪಣ್ಣ ,ಹಾಗೂ ಊರಿನ ಹಿರಿಯರಾದ ಭವಾನಿ ಸಿಂಗ್, ಮದೀನ ಟ್ರೇಡರ್ಸ್ ಮಾಲಿಕ ಟಿಪ್ಪು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವರದಿ: ಮಂಜುನಾಥ ಕುಂಬಾರ

ಜಿಲ್ಲೆ

ರಾಜ್ಯ

error: Content is protected !!