Thursday, July 25, 2024

ಪಿಕೆಪಿಎಸ್‌ ಕಾರ್ಯದರ್ಶಿಗಳನ್ನು, ತರಾಟೆಗೆ ತೆಗೆದುಕೊಂಡ ಡಿಸಿಸಿ ಬ್ಯಾಂಕ್ ಅಧ್ಯಕ್ಷ: ಬ್ಯಾಲಹಳ್ಳಿ ಗೋವಿಂದಗೌಡ

ಚಿಕ್ಕಬಳ್ಳಾಪುರ : ಡಿಸಿಸಿ ಬ್ಯಾಂಕ್ ಫಂಡಿಂಗ್ ಮಾಡಲು ತಯಾರಿಗಿದ್ದರು ಗ್ರಾಮೀಣ ಭಾಗದ ಕೃಷಿ ಪತ್ತಿನ ಸಹಕಾರ ಸಂಘಗಳ ಕಾರ್ಯದರ್ಶಿಗಳ ಅಸಹಕಾರದಿಂದ ಅರ್ಹ ರೈತರು ಮತ್ತು ಮಹಿಳಾ ಸಂಘಗಳಿಗೆ ಸಾಲ ವಿತರಣೆಯಾಗುತ್ತಿಲ್ಲ. ಸಮರ್ಥ ಕಾರ್ಯದರ್ಶಿಗಳಿಂದ ಸಾಲಸೌಲಭ್ಯ ರೈತರ ಕೈ ಮುಟ್ಟುತ್ತಿಲ್ಲ ಅದಕ್ಕಾಗಿ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಮಹಿಳಾ ಸಂಘಗಳು, ರೈತರ ಬೆಳೆ ಸಾಲ ಸೌಲಭ್ಯದಿಂದ ಅವಕಾಶ ವಂಚಿತರಾಗುತ್ತಿದ್ದಾರೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಕಿಡಿಕಾರಿದರು.

ನಗರದ ಪತ್ರಕರ್ತರ ಭವನದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಮ್ಮ ಬ್ಯಾಂಕಿನ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೃಷಿ ಪತ್ತಿನ ಸಹಕಾರ ಸಂಘಗಳ ಕಾರ್ಯದರ್ಶಿ ಮತ್ತು ಅಧ್ಯಕ್ಷರೊಂದಿಗೆ ಪ್ರಗತಿ ಪರಿಶೀಲನೆ ಸಭೆ ನಡೆಸಿದರು.

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ ಕೆ ಸುಧಾಕರ್ ಡಿಸಿಸಿ ಬ್ಯಾಂಕ್ ಅರ್ಹ ರೈತರಿಗೆ ಸಾಲ ಸೌಲಭ್ಯಗಳು ನೀಡುತ್ತಿಲ್ಲ ಅನ್ನೋ ಆರೋಪ ಕೇಳಿ ಬರುತ್ತಿದೆ ಪ್ರಾಥಮಿಕ ಹಂತದ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿಗಳು ಆಯಾ ಸಂಘದ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಮಹಿಳಾ ಸಂಘಗಳ ಆರ್ಥಿಕ ಅಭಿವೃದ್ಧಿಗೆ ನಾವು ಸಾಲ ಕೊಡಲು ಅವರನ್ನು ಉತ್ತೇಜಿಸಿ ದಾಖಲೆಗಳ ಸಂಗ್ರಹಿಸಿ ಕಳಿಸುವುದಕ್ಕೆ ನಿಮ್ಮಿಂದ ಹಾಗೂ ಆಗುವುದಿಲ್ಲ ಅನ್ನೋದಾದರೆ ನೀವು ಯಾಕೆ ಕಾರ್ಯದರ್ಶಿ ಗಳಾಗುತ್ತೀರಿ ಬಿಟ್ಟು ತೊಲಗಿರಿ

ನಮ್ಮ ಯೋಗ್ಯತೆಗೆ ಇಷ್ಟು ವರ್ಷಗಳಿಂದ 1ಕೋಟಿ ಐವತ್ತು ಲಕ್ಷ ಮಾತ್ರ ಸಾಲ ಕೊಟ್ಟಿದ್ದೀವಿ ಅಂತೀರಲ್ಲ ನಿಮಗೆ ನಾಚಿಕೆ ಆಗಲ್ವಾ ಅಂತ ಅಡಿಗಲ್, ಅರೂರು, ಅಗಲಗುರ್ಕಿ ಸಂಘಗಳ ಕಾರ್ಯದರ್ಶಿಗಳಿಗೆ ಯದ್ವಾ ತದ್ವಾ ತರಾಟೆಗೆ ತೆಗೆದುಕೊಂಡರು ಅವರ ಜೊತೆಯಲ್ಲಿ ಬಂದಿದ್ದ ಅಧ್ಯಕ್ಷರನ್ನು ಸಹ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಟ್ಟ ಮಾತನಾಡಿದ ಅವರು ಕೋಲಾರ ಜಿಲ್ಲೆಗೆ ಹೋಲಿಸಿದರೆ ಚಿಕ್ಕಬಳ್ಳಾಪುರದಲ್ಲಿ ಸಾಲ ವಿತರಣೆಯಲ್ಲಿ ನಾವು ಹಿಂದೆ ಇದ್ದೇವೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಆರೋಪಿಸುತ್ತಿರುವುದು ಸತ್ಯ ಆದರೆ ಕಾರ್ಯದರ್ಶಿಗಳು ಮೈಚಳಿ ಬಿಟ್ಟು ಕೆಲಸ ಮಾಡಿದರೆ ಮಾತ್ರ ಗುರಿ ಮುಟ್ಟುವುದಕ್ಕೆ ಸಾಧ್ಯವಾಗುತ್ತದೆ ಎಂದು ಗುಡುಗಿದರು.

ಆ ನಿಟ್ಟಿನಲ್ಲಿ ಕಾರ್ಯದರ್ಶಿಗಳ ಮೇಲೆ ಕ್ರಮ ಜರುಗಿಸುವುದಕ್ಕೆ ನಮಗೆ ಯಾವುದೇ ತರಹದ ಅಧಿಕಾರ ಇರುವುದಿಲ್ಲ ಅದಕ್ಕೆ ಸಹಕಾರ ಸಂಘಗಳ ನೋಂದಣಿ ಅಧಿಕಾರಿಗಳಿಗೆ ತಾಕೀತು ಮಾಡುತ್ತೇನೆ, ಆ ಸಂಘಗಳ ಕಾರ್ಯ ವೈಖರಿಯನ್ನು ಪರಿಶೀಲಿಸಿ ಕೆಲಸ ಮಾಡಲಿಲ್ಲ ಎಂದರೆ ಕಾರ್ಯದರ್ಶಿಗಳನ್ನು ಕಿತ್ತೊಗೆಯಿರಿ ಎಂದು ಗಂಭೀರವಾಗಿ ಹೇಳಿದರು.

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಡಾಲ್ಪಿನ್ ನಾಗರಾಜ್, ನಿರ್ದೇಶಕ ಮೋಹನ್ ರೆಡ್ಡಿ, ಮೇನೇಜರ್ ಜ್ಯೋತಿ, ಇತರರು ಉಪಸ್ಥಿತರಿದ್ದರು

ವರದಿ: ಎ ಧನಂಜಯ್. ಚಿಕ್ಕಬಳ್ಳಾಪುರ

ಜಿಲ್ಲೆ

ರಾಜ್ಯ

error: Content is protected !!