Saturday, September 21, 2024

1913 ರಲ್ಲಿ ಸಾರ್ವಜನಿಕವಾಗಿ ಬಸವ ಜಯಂತಿ ಆಚರಣಗೆ ತಂದವರು; ಹರ್ಡೇಕರ್ ಮಂಜಪ್ಪನವರು

ಸುದ್ದಿ ಸದ್ದು ನ್ಯೂಸ್

ಪತ್ರಕರ್ತ, ಪತ್ರೀಕೋದ್ಯಮಿ,ಕನ್ನಡದ ಶ್ರೇಷ್ಠ ಬರಹಗಾರ,ಶ್ರೇಷ್ಠ ಸನ್ಯಾಸಿ, ಪರಮ ರಾಷ್ಟ್ರಭಕ್ತ, ವಿಶ್ಬವಗುರು ಬಸವಣ್ಣನವರ ಮತ್ತು ಮಹಾತ್ಮ ಗಾಂಧಿ ಅವರ ವಿಚಾರದಾರೆಗಳ ನಿಷ್ಠುರ ಅನುಯಾಯಿ,ರಾಷ್ಟ್ರೀಯ ವಿಚಾರದಾರೆಗಳ ಪ್ರೇರಣಾದಾಯಿ ವ್ಯಕ್ತಿತ್ವ ಹೊಂದಿದ ಹರ್ಡೇಕರ ಮಂಜಪ್ಪನವರ ಜನ್ಮದಿನ ಪೆಬ್ರವರಿ ೧೮,

ಉಪ್ಪು ,ಖಾರ,ಸಿಹಿ ಪದಾರ್ಥಗಳುನ್ನು ಸೇವಿಸಿದರೆ ಬ್ರಹ್ಮಚರ್ಯ ಪಾಲನೆ ಕಷ್ಟ ವೆಂದು ಅವೆಲ್ಲವನ್ನು ವರ್ಜನೆ ಮಾಡಿ ಯಾವ ಶ್ರೆಷ್ಠ ಮಠಾದೀಶರಿಗೂ ಕಡಿಮೆ ಇಲ್ಲದ ಶ್ರೇಷ್ಠ ಬದಕು ಸವೆಸಿದವರು ಹರ್ಡೆಕರ ಮಂಜಪ್ಪನವರು .

1886 ರಲ್ಲಿ ಬನವಾಸಿಯಲ್ಲಿ ಜನನ.ಅಣ್ಣನ ಆರೈಕೆಯಲ್ಲಿ ಬೆಳೆದವರು.ಮುಲ್ಕಿ ಪರೀಕ್ಷೆ ಪಾಸಾಗಿ ಕಲಿತ ಶಾಲೆ ಯಲ್ಲಿ ಶಿಕ್ಷಕರಾದರು.ವಿಚಾರ ಬಲಿಷ್ಠವಾದ ಹಾಗೆ ದೇಶ ಸೇವೆಯ ಹುಚ್ಚು ಹಿಡಿಸಿಕೂಂಡು ಬನವಾಸಿಯಿಂದ ಡಾವಣಗೆರೆಗೆ ಬಂದು”” ಧನುರ್ದಾರಿ “” ಪತ್ರಿಕೆ ಪ್ರಾರಂಬಿಸಿದರು.ಇ ಮೂಲಕ ತಿಲಕರ ಬರಹಗಳನ್ನು ಕನ್ನಡಕ್ಕೆ ಅನುವಾದಿಸಿ ತಿಲಕರನ್ನು ಕನ್ನಡಿಗರಿಗೆ ಪರಿಚಯಿಸಿದರು ಹರ್ಡೆಕರ ಮಂಜಪ್ಪನವರು.

ಬರವಣಿಗೆ ನೀಷ್ಠುರ ವಾದ ಕಾರಣ ,ಧನುರ್ದಾರಿ ಪತ್ರಿಕೆ ಮುದ್ರಣಕ್ಕೆ ಮುದ್ರಣ ಮಾಲಿಕರು ಹೆಚ್ಚು ಹಣಕೇಳಿದಾಗ ಅಸಾಹಾಯಕರಾದ ಹರ್ಡೆಕರ ಮಂಜಪ್ಪನವರು ಪ್ರಾರಂಬಿಸಿದ “ಧನುರ್ದಾರಿ” ಪತ್ರಿಕೆ ನಿಂತು ಹೋಯಿತು.೧೯೦೮ರಲ್ಲಿ ಸ್ವಂತ ಮುದ್ರಣಾಲಯ ಹಾಕಿ ಪತ್ರಿಕೆ ಪ್ರಕಟಿಸಿದರು. ಇವರ ಪತ್ರಿಕೆ ಮೈಸೂರು ರಾಜ್ಯದ ದಿವಾನ ಮಾದವರಾಯನ ಕಣ್ಣು ಕುಕ್ಕಿ ಪತ್ರಿಕೆ ಮುದ್ರಣಕ್ಕೆ ನಿಷೇದ ಹೆರಿದ.ಇದೂಂದು ಅಂತರಾಜ್ಯ ಸಮಸ್ಯೆಯಾಗಿ ಉಲ್ಬಣವಾಯಿತು.ಕಾರಣ ಆಗ ಮೈಸೂರು ಅರಸರು ಬ್ರಿಟಿಷ್ ರ ಜೋತೆ ಹೂಂದಾಣಿಕೆ ಇತ್ತು…ಇವರ ಪತ್ರಿಕೆಯಲ್ಲಿ ಬ್ರಿಟಿಷ್ ವೀರೋದಿ ಲೇಖನಗಳೆ ಇರುತ್ತಿದ್ದವು…

ಇಷ್ಟೇಲ್ಲಾ ಮಾಡಿದರೂ ಹೂಟ್ಟೆ ತುಂಬಲಿಲ್ಲ ಆದರೆ ಇದು ಅವರಿಗೆ ಸಮಸ್ಯೆ ಯಾಗಲಿಲ್ಲ ಕಾರಣ ಅವರು ಭಾರಿ ಮೀತ ಆಹಾರಿಯಾಗಿದ್ದರು.ದಾವಣಗೆರೆ ಯಲ್ಲಿ ಪ್ಲೇಗ್ ರೋಗ ಬಂದಾಗ ಜನ ತೀರಿಕೂಂಡಾಗ ಅಂತ್ಯಕ್ರಿಯೆಗೆ ಜನ ಬರದೇ ಇದ್ದಾಗ ಮುಂದೆ ನಿಂತು ಅಂತ್ಯಕ್ರಿಯೆ ಮಾಡುತ್ತಿದ್ದರು..

ತುಂಗಭದ್ರಾ ನದಿಯ ದಂಡೆಯ ಮೇಲೆ ಸ್ನೆಹಿತ “ಬಾಳಪ್ಪ” ಜಮೀನಿನಲ್ಲಿ ಆಶ್ರಮ ಮಾಡಿಕೂಂಡು ಜೀವನ ಸಾಗಿಸಿದರು.ತಮ್ಮ ತಾಯಿಯ ನಿಧನದ ನಂತರ ಇಡಿ ಕರ್ನಾಟಕದ ಹಳ್ಳಿಗಳನ್ನು ಸಂಚರಿಸಿ ಬಾಗಲಕೋಟೆ ಯ ಆಲಮಟ್ಟಿಯಲ್ಲಿ ಆಶ್ರಮ ಸ್ಥಾಪಿಸಿ “ಶರಣ ಸಂದೇಶ “ಪತ್ರಿಕೆ ಪ್ರಾರಂಬಿಸಿದರು.

1924ರಲ್ಲಿ ಬೆಳಗಾವಿಯಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೇಸ್ ಅದೀವೇಶನ ನಡೆದಾಗ ” ಬಸವ ಸೇವಾದಳ” ಸ್ಥಾಪಿಸುವ ಮೂಲಕ 1924 ಕಾಂಗ್ರೆಸ ಅಧಿವೇಶನ ದ ಯಶಸ್ವಿಯಾಗಿ ನೆರವೆರಲು ಕಾರಣಿಭೂತರಾದರು..ಗಾಂಧಿಯವರ ಆತ್ಮೀಯ ವಲಯದಲ್ಲಿ ಇದ್ದರೂ ಗಾಂದಿಜೀಯವರ ವಿಚಾರಗಳನ್ನು ಕೆಲವೊಮ್ಮೆ ವೀರೂದಿಸಿದ್ದರು..

ಗಾಂದಿಜೀಯವರು ಶೋಷೀತ ಜನಸಮುದಾಯದವರನ್ನು “ಹರಿಜನರು” ಏಂದು ಕರೆದಾಗ ವಿರೋದಿಸಿದರು ಕಾರಣ ಶೂಷಿತ ಜನಾಂಗ ಆಗಿನ ಕಾಲದಲ್ಲಿ”ಶಿವನ”ಆರಾದಕರಾಗಿದ್ದರೆ ಹೂರತು “ವಿಷ್ಣುವಿನ “ಆರಾದಕರಾಗಿರಲಿಲ್ಲ.

ಪ್ರಥಮವಾಗಿ ಸಾರ್ವಜನಿಕವಾಗಿ ಬಸವ ಜಯಂತಿ ಆಚರಣಗೆ 1913 ರಲ್ಲಿ 1935 ಸ್ರ್ರಿಯರ ಜಾಗೃತಿಗೆ ಅಕ್ಕಮಹಾದೇವಿ ಜಯಂತಿಯನ್ನು ಆಚರಿಸಿದರು.ಆರ್ಥಿಕ ಸಬಲೀಕರಣಕ್ಕೆ”ರಾಟಿ ಸಂಘ” ಸ್ಥಾಪಿಸಿದರು.1924 ರಲ್ಲಿ ಬಸವೇಶ್ವರ ಸೇವಾದಳ ಸ್ಥಾಪಿಸಿದರು.””ಖಾದಿ ವಿಜಯ ಮತ್ತು ಉದ್ಯೋಗ” ಪತ್ರಿಕೆ ಸಂಪಾದಿಸಿ ಪ್ರಕಟಿಸಿದರು… ಜನ್ಮದಿನದ ಸಂದರ್ಭದಲ್ಲಿ ಇವರ ವಿಚಾರದಾರೆಗಳು ನಮ್ಮ ಬದುಕಿಗೆ ಆದರ್ಶ ವಾಗಲಿ…

ಜಿಲ್ಲೆ

ರಾಜ್ಯ

error: Content is protected !!