Saturday, July 27, 2024

ಅವತ್ತಿನ ಕಾಲಘಟ್ಟದಲ್ಲಿ ಸರಿಯೆನಿಸಿದ್ದು ಇವತ್ತಿಗೂ ಸರಿಯೇ? ಮುಸ್ಲಿಮರೇಕೆ ಮುಖ್ಯವಾಹಿನಿಯಿಂದ ಮಾರು ದೂರ?

ಎಲ್ಲರೂ ಮೊದಲು ದೇಶಪ್ರೇಮಿಗಳಾಗೋಣ. ಧರ್ಮವೂ ಪರಿವರ್ತನೆಗೊಳಗಾಗಲಿ.

1947 ರ ದೇಶವಿಭಜನೆಯ ಸಮಯ. ಹಿಂದೂ ಮುಸ್ಲಿಮರ ನಡುವೆ ಗಲಭೆ ಏರ್ಪಟ್ಟು ಸಾವಿರಾರು ಜನರ ಮಾರಣಹೋಮ ನಡೆದಿರುತ್ತದೆ. ಪಾಕಿಸ್ತಾನದಿಂದ ಸಾವಿರಾರು ಹಿಂದೂ ಕುಟುಂಬಗಳು ಭಾರತಕ್ಕೂ,ಇಲ್ಲಿಂದ ಅನೇಕ ಮುಸ್ಲಿಂ ಕುಟುಂಬಗಳು ಪಾಕಿಸ್ತಾನಕ್ಕೂ ಸ್ಥಳಾಂತರವಾಗುತ್ತಿರುತ್ತಾರೆ. ಹೀಗೆ ತೊರೆದುಹೋದ ದೆಹಲಿಯ ಮಸೀದಿಯೊಂದರಲ್ಲಿ ಪಾಕಿಸ್ತಾನದಿಂದ ಬಂದ ಸಿಖ್ ನಿರಾಶ್ರಿತರು ಆಶ್ರಯ ಪಡೆದಿರುತ್ತಾರೆ. ಆದರೆ ಮಾರನೇ ದಿನ ಅಲ್ಲಿಗೆ ಬಂದ ಪೊಲೀಸರು, ಅಲ್ಲಿ ಆಶ್ರಯ ಪಡೆದಿದ್ದವರನ್ನು ಬೇರೆಡೆಗೆ ಸ್ಥಳಾಂತರಿಸಿ,ಹಾನಿಯಾಗಿದ್ದ ಮಸೀದಿಯ ಭಾಗಗಳನ್ನು ದುರಸ್ತಿಗೊಳಿಸಿ, ಮತ್ತೆ ಮುಸ್ಲಿಮರಿಗೆ ಅದನ್ನು ವಹಿಸಿಕೊಡುವ,ಅಲ್ಲಿಯೇ ಕಾವಲು ಕಾಯುತ್ತ ಅವರಿಗೆ ರಕ್ಷಣೆ ಕೊಡುವ ಸನ್ನಿವೇಶವೊಂದು ಶಶಿಧರ ಹಾಲಾಡಿ ಅವರ ‘ಕಾಲಕೋಶ’ ಕಾದಂಬರಿಯಲ್ಲಿ ಬರುತ್ತದೆ. ಆ ಕಾಲದ ಸಂತ್ರಸ್ತ ಸಿಖ್ ವ್ಯಕ್ತಿಯೊಬ್ಬ ಹೇಳುವ ಸತ್ಯಕಥೆ ಇದಾಗಿದೆ.

ಸ್ವಾತಂತ್ರ್ಯಾನಂತರ ರಚನೆಯಾದ ನೆಹರೂ ಸರ್ಕಾರ, ಇಲ್ಲಿ ಉಳಿದ ಮುಸ್ಲಿಮರಿಗೆ ತಾನೇ ಟೊಂಕ ಕಟ್ಟಿ ನಿಂತು, ಅವರಿಗೆ ಭದ್ರತೆ ಒದಗಿಸಿದ್ದಲ್ಲದೆ ಮಸೀದಿಗಳನ್ನು ದುರಸ್ತಿಗೊಳಿಸಿ, ಇರಲು ವಾಸ್ತವ್ಯದ ವ್ಯವಸ್ಥೆ ಕೂಡ ಮಾಡಿ,ಅವರಿಗೆ ಬೆಂಗಾವಲಾಗಿ ನಿಂತು,ಅವರನ್ನು ಈ ದೇಶದಲ್ಲೇ ಉಳಿಸಿಕೊಂಡ ಪರಿ ಎಲ್ಲರಿಗೂ ತಿಳಿದಿರುವ ನಗ್ನಸತ್ಯವಾಗಿದೆ. ನೆಹರೂರವರ ಮುಸ್ಲಿಮ್ ಓಲೈಕೆಯ ಕಥನಗಳು ಒಂದೆರಡಲ್ಲ. ಸ್ವತಂತ್ರ ಭಾರತದ ಮೊದಲ ಶಿಕ್ಷಣ ಮಂತ್ರಿಯನ್ನಾಗಿ ಮೌಲಾನಾ ಅಬುಲ್ ಕಲಾಂ ಆಜಾದ್(ಅವಧಿ: ಆಗಸ್ಟ್ 1947 – ಫೆಬ್ರವರಿ 1958) ಅವರನ್ನು ನೇಮಿಸಿಕೊಂಡರು. ಸುಮಾರು 11 ವರ್ಷಗಳ ಕಾಲ ನೆಹರೂ ಮಂತ್ರಿಮಂಡಲದಲ್ಲಿ ಅವರು ಶಿಕ್ಷಣಮಂತ್ರಿಗಳಾದರು.

ಹನ್ನೊಂದು ವರ್ಷಗಳ ದೀರ್ಘ ಕಾಲಾವಧಿಯಲ್ಲಿ ನೆಹರೂ -ಆಜಾದ್ ರವರ ಜೋಡಿ ಅಲ್ಪಸಂಖ್ಯಾತರ ಶಿಕ್ಷಣಕ್ಕೆ ನೀಡಿದ ಕೊಡುಗೆ ಏನು? ಇವತ್ತಿಗೂ ಬಹುಪಾಲು ಮುಸ್ಲಿಮ್ ಜನಾಂಗ ವಿದ್ಯೆಯಿಂದ ವಂಚಿತವಾಗಿರುವುದು ಏತಕ್ಕೆ? ಒಳ್ಳೆಯ ಶಾಲಾ ಕಟ್ಟಡಗಳಾಗಲಿ, ವೈಚಾರಿಕ ವಿದ್ಯೆಯಾಗಲಿ, ತಾಂತ್ರಿಕ ತರಬೇತಿಯಾಗಲಿ ಅವರಿಗೆ ನೀಡಲಿಲ್ಲವೇಕೆ? ಮದರಸಾಗಳಲ್ಲಿ ಅವರಿಗೆ ಕೇವಲ ಧಾರ್ಮಿಕ ಶಿಕ್ಷಣ ನೀಡಿ, ಆಧುನಿಕ ಶಿಕ್ಷಣದಿಂದ ಅವರನ್ನು ವಂಚಿತಗೊಳಿಸಿ, ನಿಜವಾದ ಅರ್ಥದಲ್ಲಿ ಅವರನ್ನು ವಿದ್ಯಾವಂತರನ್ನಾಗಿಸದೆ, ಇಡೀ ಅಲ್ಪಸಂಖ್ಯಾತ ಸಮುದಾಯ ಮೌಡ್ಯ ಹಾಗೂ ಬಡತನದಲ್ಲೇ ಉಳಿಯುವಂತೆ ಮಾಡಿದವರು ಈ ಜೋಡಿಯಲ್ಲವೇ? ಅಸಲಿಗೆ ಆಜಾದ್ ರವರೇ ಶಾಲೆಯಲ್ಲಿ ಔಪಚಾರಿಕ ಶಿಕ್ಷಣವನ್ನು ಪಡೆದಿರಲಿಲ್ಲ,ತಮ್ಮ ತಂದೆಯವರ ಬಳಿಯೇ ಸಾಂಪ್ರದಾಯಿಕ ಇಸ್ಲಾಮಿಕ್ ಶಿಕ್ಷಣ ಪಡೆದಿದ್ದರು.

ಆದರೆ ಇದಕ್ಕೆ ವ್ಯತಿರಿಕ್ತವಾಗಿ ಪಾಕಿಸ್ತಾನದಲ್ಲಿ ಅಲ್ಲಿನ ಪೊಲೀಸರೇ ಬೆಂಬಲವಾಗಿ ನಿಂತು ಅಲ್ಲಿದ್ದ ಹಿಂದೂಗಳನ್ನು ಚಿತ್ರಹಿಂಸೆಗೊಳಪಡಿಸಿ ಭಾರತಕ್ಕೆ ಓಡಿಸುತ್ತಿದ್ದದ್ದು ಸರ್ವೇ ಸಾಮಾನ್ಯ ಸಂಗತಿಯಾಗಿತ್ತು. ಅದಕ್ಕೊಂದು ಉದಾಹರಣೆ ಇಲ್ಲಿದೆ ನೋಡಿ. ವಿಭಜನೆಯಾಗಿ ರಚನೆಯಾದ ಪಾಕಿಸ್ತಾನ ಧರ್ಮಾಧಾರಿತ ದೇಶವಾಯಿತು. ಮೊದಲೇ ನಿರ್ಧಾರಿತವಾದಂತೆ ಪಾಕಿಸ್ತಾನದ ಪ್ರಧಾನಿಯಾಗಿ ಲಿಯಾಖತ್ ಅಲಿ ಖಾನ್ ಆಯ್ಕೆಯಾದರು. ಜೋಗೇಂದ್ರನಾಥ್‌ ಮಂಡಲ್ ಅವರನ್ನು ಪಾಕಿಸ್ತಾನದ ಮೊದಲ ಕಾನೂನು ಮತ್ತು ಕಾರ್ಮಿಕ ಖಾತೆ ಮಂತ್ರಿಯಾಗಿ ನೇಮಿಸಲಾಯಿತು.

ಬಂಗಾಳದಲ್ಲಿ ಸಾಮಾಜಿಕ ಕ್ಷೋಭೆಗೆ ಕಾರಣವಾಗಿದ್ದ ಹಿಂದೂ- ಮುಸ್ಲಿಂ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ, ಶತ್ರುವಿನ ಶತ್ರು ಮಿತ್ರ ಎಂಬಂತೆ, ಮಂಡಲ್ ರವರು ಮೇಲ್ಜಾತಿಯವರ ವಿರುದ್ಧದ ದ್ವೇಷದಿಂದ, ಮುಸ್ಲಿಮರೊಂದಿಗೆ ಬಾಂಧವ್ಯ ಬೆಳೆಸಿದ್ದರು.ದೇಶ ವಿಭಜನೆಯ ಸಂದರ್ಭದಲ್ಲಿ ಹಿಂದೂ- ಮುಸ್ಲಿಮರ ನಡುವಿನ ಕೋಮು ಸಂಘರ್ಷದಲ್ಲಿ,ಮುಸ್ಲಿಮರ ವಿರುದ್ಧ ಹೋರಾಡಬಾರದೆಂದು ದಲಿತರಲ್ಲಿ ತಿಳುವಳಿಕೆ ಮೂಡಿಸಲು ಮಂಡಲ್ ರವರು ಪೂರ್ವಬಂಗಾಳದಾದ್ಯಂತ ಪ್ರವಾಸ ಕೈಗೊಂಡರು.ಇದೀಗ ಮಂಡಲ್ ರವರು ಒಂದು ದಶಕದ ಭಾರತದ ರಾಜಕೀಯ ವೃತ್ತಿಜೀವನ (1937-1947) ವನ್ನು ತೊರೆದು, ಪಾಕಿಸ್ತಾನದ ಪೌರತ್ವ ಪಡೆದು, ಅಲ್ಲಿ ತಮ್ಮ ರಾಜಕೀಯ ವೃತ್ತಿಜೀವನ ಆರಂಭಿಸಿದರು. ಪಾಕಿಸ್ತಾನದ 96 ಸಂಸ್ಥಾಪಕರಲ್ಲಿ ಒಬ್ಬರಾಗಿ ಸೇರ್ಪಡೆಗೊಂಡರು.

ಕ್ರಮೇಣ ಪಾಕಿಸ್ತಾನದ ನಿಜ ಬಣ್ಣ ಬಯಲಾಗತೊಡಗಿತು. ಮಂಡಲ್ ರವರು ತಮಗರಿವಿಲ್ಲದೆ ಮೋಸಕ್ಕೊಳಗಾದ ವಿಚಾರ ಅವರ ಅರಿವಿಗೆ ಬರತೊಡಗಿತು.ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ಅಲ್ಲಿನ ಮುಸ್ಲಿಮರು ದೌರ್ಜನ್ಯ ನಡೆಸ ತೊಡಗಿದರು.ದಿನ ಕಳೆದಂತೆ ಇದು ಹೆಚ್ಚಾಗತೊಡಗಿತು. ಮೊದಮೊದಲು ಮೇಲ್ಜಾತಿಯ ಹಿಂದೂಗಳ ಮೇಲೆ ನಡೆಯುತ್ತಿದ್ದ ದೌರ್ಜನ್ಯ ಕ್ರಮೇಣ ದಲಿತರನ್ನು ಒಳಗೊಂಡು ಎಲ್ಲಾ ಹಿಂದೂಗಳಿಗೂ ವಿಸ್ತರಿಸತೊಡಗಿತು.ಮಂಡಲ್ ರವರು ಇದನ್ನು ಪ್ರಧಾನಿ ಲಿಯಾಖತ್ ಅಲಿ ಖಾನ್ ರವರ ಗಮನಕ್ಕೆ ತಂದರು. ತಪ್ಪಿತಸ್ಥರ ವಿರುದ್ಧ ಕ್ರಮದ ಭರವಸೆ ಸಿಕ್ಕರೂ ಕಾರ್ಯರೂಪಕ್ಕೆ ಬರಲಿಲ್ಲ.

ಮುಸ್ಲಿಂ ಗಲಭೆಕೋರರ ದೌರ್ಜನ್ಯಕ್ಕೆ ಅಲ್ಲಿನ ಪೊಲೀಸರೇ ಬೆಂಗಾವಲಾಗಿ ನಿಲ್ಲುತ್ತಿರುವ ವಿಚಾರ ಮಂಡಲ್ ರವರ ಗಮನಕ್ಕೆ ಬಂತು. ಅಲ್ಲಿಯವರೆಗೂ ಆಕಸ್ಮಿಕವಾಗಿ ನಡೆಯುತ್ತಿರುವ ದೌರ್ಜನ್ಯಗಳೆಂದು ಭಾವಿಸಿದ್ದ ಮಂಡಲ್ ರವರಿಗೆ,ಇದು ಪೂರ್ವನಿಯೋಜಿತ ಸಂಚಿನ ಭಾಗವೆಂಬ ಅರಿವಾಯಿತು.ಸಾಮಾಜಿಕ ಅನ್ಯಾಯ ಮತ್ತು ಮುಸ್ಲಿಮೇತರ ಹಿಂದೂ ಅಲ್ಪಸಂಖ್ಯಾತರ ವಿರುದ್ಧದ ಪಕ್ಷಪಾತದ ಧೋರಣೆಯನ್ನು ಖಂಡಿಸಿ ಮಂಡಲ್ ರವರು 8 ಅಕ್ಟೋಬರ್ 1950 ರಂದು ತಮ್ಮ ಮಂತ್ರಿ ಪದವಿಗೆ ರಾಜಿನಾಮೆ ನೀಡಿದರು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಸರ್ಕಾರ ಮಂಡಲ್ ರವರ ವಿರುದ್ಧ ಬಂಧನದ ವಾರಂಟ್ ಹೊರಡಿಸಿತು. ಇದರಿಂದ ತಪ್ಪಿಸಿಕೊಳ್ಳಲು ಮಂಡಲ್ ರವರು ಭಾರತಕ್ಕೆ ಪಲಾಯನ ಮಾಡಬೇಕಾಯಿತು.

ಇದೆಲ್ಲದರ ಹೊರತಾಗಿಯೂ ಪಾಕಿಸ್ತಾನದಲ್ಲೇ ಉಳಿದಿದ್ದ 22.45% ಹಿಂದೂಗಳ ಸಂಖ್ಯೆ ಇಂದು 1.5% ಗೆ ಕುಸಿದಿದೆ.ಕಾರಣ ಎಲ್ಲರಿಗೂ ತಿಳಿದಿರುವುದೇ ಆಗಿದೆ. ಬಲಾತ್ಕರಿಸಿ, ಮತಾಂತರಿಸಿ, ಹಿಂದೂಗಳ ಬದುಕನ್ನು ಅಸಹನೀಯಗೊಳಿಸಿ, ಅವರನ್ನು ಮುಸ್ಲಿಂಗೆ ಮತಾಂತರಗೊಳಿಸಲಾಗಿದೆ.ಇದಕ್ಕೆ ವ್ಯತಿರಿಕ್ತವಾಗಿ 1947 ರಲ್ಲಿ 7.88% ರಷ್ಟಿದ್ದ ಭಾರತದಲ್ಲಿದ್ದ ಮುಸ್ಲಿಮರ ಸಂಖ್ಯೆ ಇಂದು 18.88%ರಷ್ಟಾಗಿದೆ.ಇದು 2011ರ ಜನಗಣತಿಯ ಲೆಕ್ಕಾಚಾರ. ಇದೀಗ ಜನಗಣತಿ ನಡೆದರೆ ಇವರ ಸಂಖ್ಯೆ 20% ದಾಟುತ್ತದೆ. ಅಂದಿನ ಜನಸಂಖ್ಯೆ 10% ಗಿಂತ ಕಡಿಮೆ ಇತ್ತು ಎಂಬ ಕಾರಣಕ್ಕೆ ಮುಸ್ಲಿಮರನ್ನು ಅಲ್ಪಸಂಖ್ಯಾತರೆಂದು ಮಾನ್ಯತೆ ನೀಡಲಾಗಿತ್ತು. ಇದೀಗ 20% ದಾಟಿದ್ದರೂ ಅವರನ್ನು ಅಲ್ಪಸಂಖ್ಯಾತರನ್ನಾಗಿಯೇ ಗುರುತಿಸುತ್ತಿರುವುದು ಏಕೆಂಬುದು ಯಕ್ಷಪ್ರಶ್ನೆಯಾಗಿದೆ.

ಈ ಅಲ್ಪಸಂಖ್ಯಾತರ ಸವಲತ್ತಿನ ಕಾರಣಕ್ಕಾಗಿಯೇ ಇವತ್ತಿನ ಮುಸ್ಲಿಮರ ಆಟಾಟೋಪಗಳನ್ನು ಕಾಣಬಹುದಾಗಿದೆ. ಸವಲತ್ತುಗಳು ಹೆಚ್ಚಾಗಿ, ಅವೇ ಹಕ್ಕಾಗಿ, ಸ್ವಾತಂತ್ರ್ಯ ಸ್ವೇಚ್ಛಾಚಾರವಾಗಿ,ಸ್ವೇಚ್ಛಾಚಾರವೇ ಜೀವನವಾಗಿ ಮುಸ್ಲಿಮರನ್ನು ರೂಪಿಸುತ್ತಿದೆ. ಈ ದೇಶ ಇಷ್ಟೆಲ್ಲವನ್ನೂ ನೀಡಿದ್ದರೂ ಇವರಿಗೆ ದೇಶಕ್ಕಿಂತ ಧರ್ಮವೇ ಮುಖ್ಯವೆಂದು ಅನಿಸುವುದಾದರೂ ಏತಕ್ಕೆ? ಎಂಬುದೇ ಒಗಟಿನ ಪ್ರಶ್ನೆಯಾಗಿದೆ. ಈ ದೇಶ ಇತರೆ ಮುಸ್ಲಿಂ ದೇಶಗಳಿಗಿಂತಲೂ ಹೆಚ್ಚಿನ ಪ್ರಮಾಣದ ಸ್ವಾತಂತ್ರ್ಯ ಸವಲತ್ತುಗಳನ್ನು ನೀಡಿದರೂ, ಇವರಿಗೆ ಈ ದೇಶ ನಮ್ಮದು ಎಂದು ಅನಿಸುತ್ತಲೇ ಇಲ್ಲ. ಇನ್ನೂ ಹಿಂದೂಗಳನ್ನು ಇವರು ಸ್ವೀಕರಿಸಲು ಸಾಧ್ಯವೇ? ಸ್ವಾತಂತ್ರ್ಯಾನಂತರದ 75 ವರ್ಷಗಳ ಕಾಲ ಇವರಿಗೆ ಇನ್ನಿಲ್ಲದ ಸವಲತ್ತುಗಳನ್ನು ಕೊಟ್ಟು, ಇನ್ನಿಲ್ಲದ ರಾಜಮರ್ಯಾದೆಯನ್ನು ನೀಡಿ ನೋಡಿಕೊಂಡರೂ, ಹಿಂದೂ- ಮುಸ್ಲಿಂ ಭಾಯಿ ಭಾಯಿ ಎಂದು ಅಪ್ಪಿಕೊಂಡರೂ ಇವರಿಗೆ ಅದೆಲ್ಲ ಬೇಡವಾಗಿದೆ. ಇವರು ಇಲ್ಲಿ ದ್ವೀಪಗಳಾಗಿಯೇ ಬದುಕುತ್ತಿದ್ದಾರೆ. ಮುಂದೆಯೂ ಹಾಗೇ ಬದುಕಲು ಇಷ್ಟ ಪಡುತ್ತಿದ್ದಾರೆ.

ಗಾಳಿ ನೀರು ಅನ್ನ ಆಶ್ರಯ ನೀಡುತ್ತಿದೆ ಎಂಬ ಕಾರಣಕ್ಕೆ ಈ ದೇಶವನ್ನು ನಾವೆಲ್ಲ ತಾಯಿ ಎಂದು ಪೂಜಿಸುತ್ತೇವೆ. ತಾಯಿ ಋಣ ತೀರಿಸಲು ಶ್ರಮಿಸುತ್ತೇವೆ. ಆದರೆ ಇವರಿಗೆ ಹಾಗೇನೂ ಅನ್ನಿಸುವುದಿಲ್ಲ. ಸಮಯ ಸಿಕ್ಕಾಗಲೆಲ್ಲಾ ಈ ದೇಶದ ವಿರೋಧಿ ಗುಂಪುಗಳೊಂದಿಗೆ ಗುರುತಿಸಿಕೊಳ್ಳಲು ಇಷ್ಟಪಡುತ್ತಾರೆ.ಅಥವಾ ಜಗತ್ತಿನೆಲ್ಲೆಡೆ ಈ ದೇಶದ ಬಗ್ಗೆ ದ್ವೇಷ ಭಾವನೆ ಬರುವಂತೆ ಮಾಡಲು ಪ್ರಯತ್ನಿಸುತ್ತಾರೆ. ಅದಕ್ಕೆ ಇತ್ತೀಚಿನ ಉದಾಹರಣೆ ಹಿಜಾಬ್ ವಿವಾದ.ಈ ವಿಷಯಕ್ಕೆ ಪಾಕಿಸ್ತಾನ ಹಾಗೂ ಇತರೆ ದೇಶಗಳು ಅನವಶ್ಯಕವಾಗಿ ಮೂಗು ತೂರಿಸುತ್ತಿವೆ. ತಾಲಿಬಾನ್ ಎಂಬ ಮೃಗೀಯ ಸಂಘಟನೆ ಇವರಿಗೆ ಬೆಂಬಲ ಸೂಚಿಸಿದೆ. ದೇಶದ ಮುಸ್ಲಿಮರು ಇದರ ವಿರುದ್ಧ ದನಿ ಎತ್ತಬೇಕಿತ್ತು. ‘ಇದು ನಮ್ಮ ದೇಶದ ವಿಚಾರ, ನೀವ್ಯಾರು ಮುಖ ತೂರಿಸಬೇಡಿ. ನಾವೇ ಬಗೆಹರಿಸಿಕೊಳ್ಳುತ್ತೇವೆ’ ಎನ್ನಬೇಕಿತ್ತು. ಆದರೆ ಅಂತಹ ಮಾತುಗಳನ್ನು ಇವರಿಂದ ನಿರೀಕ್ಷಿಸಲು ಸಾಧ್ಯವೇ?

ಹಾಗೆಯೇ ಲವ್ ಜಿಹಾದ್ ವಿಚಾರ ಕೂಡ ಇತ್ತೀಚಿನ ವರ್ಷಗಳ ಚರ್ಚಿತ ವಿಷಯವಾಗಿದೆ. ಮುಗ್ಧ ಹಿಂದೂ ಹೆಣ್ಣುಮಕ್ಕಳನ್ನು ಮೋಹದ ಪಾಶಕ್ಕೆ ಸಿಲುಕಿಸಿಕೊಂಡು, ಆನಂತರ ಅವರನ್ನು ಮತಾಂತರಕ್ಕೆ ಒತ್ತಾಯಿಸುವ, ಒಪ್ಪದಿದ್ದರೆ ಸಾಯಿಸುವ, ಇಲ್ಲವಾದರೆ ಅವರ ಬದುಕನ್ನು ನರಕವನ್ನಾಗಿಸುವ ಈ ಮೃಗೀಯ ವರ್ತನೆ ಯಾವುದೇ ಜನಾಂಗಕ್ಕಾಗಲಿ, ಧರ್ಮಕ್ಕಾಗಲಿ ಶೋಭೆ ತರುವಂಥದ್ದಲ್ಲ. ಇದು ನಿಜಕ್ಕೂ ಶುದ್ಧ ಅವಮಾನಕರ. ಇಂತಹ ಅನೇಕ ತಂಡಗಳು ಕರಾವಳಿ ಭಾಗದಲ್ಲಿ ಸಕ್ರಿಯವಾಗಿವೆ ಎಂಬುದನ್ನು ಪತ್ರಿಕಾ ವರದಿಗಳಲ್ಲಿ ನಾವೆಲ್ಲ ಓದುತ್ತಿದ್ದೇವೆ.

ಇವರು ಮನೆಗಳಲ್ಲಿ ಏನಾದರೂ ಮಾಡಿಕೊಳ್ಳಲಿ. ಹೊರಗೆ ಬಂದಾಗ ಈ ನಾಡಿನ ಮಾತೃಭಾಷೆಯಾದ ಕನ್ನಡದಲ್ಲಿ ವ್ಯವಹರಿಸಬೇಕೆಂಬ ಕನಿಷ್ಠ ಜ್ಞಾನವೂ ಇವರಿಗಿಲ್ಲ. ಇಬ್ಬರು ಮುಸ್ಲಿಮರು ಸೇರಿದರೆ ಅಲ್ಲಿ ಉರ್ದು ಇರುತ್ತದೆಯೇ ಹೊರತು, ಕನ್ನಡಕ್ಕೆ ಜಾಗವೇ ಇರುವುದಿಲ್ಲ.ಇವರ ಮಾಲೀಕತ್ವದ ಅನೇಕ ಸಂಸ್ಥೆಗಳಲ್ಲಿ, ವ್ಯವಹಾರಗಳಲ್ಲಿ ಉರ್ದು ಮತ್ತು ಇಂಗ್ಲಿಷ್ ಮಾತ್ರ ಇರುವುದನ್ನು ಕಾಣಬಹುದು .ಅಷ್ಟರ ಮಟ್ಟಿಗೆ ಇವರು ಈ ನಾಡಿನ ಭಾಷೆಯನ್ನು ಧಿಕ್ಕರಿಸುತ್ತಾರೆ. ಇಷ್ಟು ವರ್ಷಗಳಾದರೂ ಕನ್ನಡ ‘ಓರಾಟಗಾರರು’ ಎನಿಸಿಕೊಂಡವರಿಗೆ ಈ ಸತ್ಯ ಅರಿವಾಗದೇ ಇರುವುದು ಆಶ್ಚರ್ಯಕರವಾಗಿದೆ. ಕಣ್ಣೆದುರು ಕನ್ನಡವನ್ನು ಕಬಳಿಸುತ್ತಿರುವ ಉರ್ದುವಿಗಿಂತ, ಇವರಿಗೆ ದೂರದ ಹಿಂದಿ ಸಂಸ್ಕೃತ ಗಳದ್ದೇ ಚಿಂತೆಯಾಗಿದೆ. ಆ ಭಾಷೆಗಳ ವಿರುದ್ಧ ಹೋರಾಡುವುದು ಇವರಿಗೊಂದು ಫ್ಯಾಷನ್ ಆಗಿಬಿಟ್ಟಿದೆ.

ಎಷ್ಟು ಜನ ಮುಸ್ಲಿಮರು ಕನ್ನಡ ಪತ್ರಿಕೆಗಳನ್ನು ಓದುತ್ತಾರೆ, ಕನ್ನಡ ಚಲನಚಿತ್ರಗಳನ್ನು ನೋಡುತ್ತಾರೆಂದರೆ, ಅದೂ ಅಷ್ಟಕಷ್ಟೆ. ಮುಸ್ಲಿಮರ ಆಟೋಗಳ ಮೇಲೆ ಕನ್ನಡ ಚಲನ ಚಿತ್ರ ನಟರುಗಳ ಚಿತ್ರವಿರುವುದನ್ನು ಯಾರಾದರೂ ನೋಡಿರುವಿರಾ? ಇದ್ದರೂ ಬಹುಶಃ ಬೆರಳೆಣಿಕೆಯಷ್ಟು ಮಾತ್ರ. ಅನ್ನ ಈ ನಾಡಿನದು.ಆಶ್ರಯ ಈ ಮಣ್ಣಿನದು. ಆದರೆ ಇವರ ಆರಾಧನೆಗೆ ಬೇಕಾಗಿರುವುದು ಶಾರುಖ್ ಹಾಗೂ ಸಲ್ಮಾನ್ ಖಾನ್ ಗಳು ಮಾತ್ರ.

ಮುಸ್ಲಿಮರಾಗಿ ಹುಟ್ಟಿ ಈ ನಾಡಿನ, ಈ ದೇಶದ ಹೆಮ್ಮೆಯ ಪುತ್ರರಾಗಿಯೇ ಬದುಕಿದ ಎ ಪಿ ಜೆ ಅಬ್ದುಲ್ ಕಲಾಂ, ಪಕ್ಷಿ ತಜ್ಞ ಸಲೀಂ ಆಲಿ, ನಿತ್ಯೋತ್ಸವ ಕವಿ ನಿಸಾರ್ ಅಹ್ಮದ್, ಭಾವೈಕ್ಯತೆ ಸಾರಿದ ಇಬ್ರಾಹಿಂ ಎನ್. ಸುತಾರ್ ರವರು ಮುಸ್ಲಿಮರಿಗೆ ಏಕೋ ಆದರ್ಶವಾಗಲೇ ಇಲ್ಲ. ಇವರ ಫೋಟೋಗಳನ್ನು ಎಷ್ಟು ಜನ ತಮ್ಮ ಮನೆಗಳಲ್ಲಿ, ಆಫೀಸ್ ಗಳಲ್ಲಿ, ಆಟೋಗಳಲ್ಲಿ ಹಾಕಿಕೊಂಡಿದ್ದಾರೆ? ಇಂತಹ ಸಾಧಕರ ಬಗ್ಗೆ ಅವರಿಗೆ ಹೆಮ್ಮೆ ಇರಬೇಕಾಗಿತ್ತು. ಆದರೆ ಯಾವನಾದರೂ ಮುಸ್ಲಿಮ್ ಎದೆತಟ್ಟಿ ಇವರು ನಮ್ಮವರು ಎಂದು ಹೇಳಿಕೊಂಡಿದ್ದಾರೆಯೇ? ಹೇಳಿಕೊಳ್ಳುತ್ತಿದ್ದಾರೆಯೇ? ತಮ್ಮ ಮುಂದಿನ ತಲೆಮಾರಿಗೆ ಹೇಳಿಕೊಡುತ್ತಿದ್ದಾರೆಯೇ?

ರಾಜಕಾರಣಿಗಳಿಂದ ಮುಸ್ಲಿಮ್ ಜನ ಇಫ್ತಾರ್ ಕೂಟಗಳನ್ನು ಏರ್ಪಡಿಸಿಕೊಳ್ಳುತ್ತಾರೆ. ಆದರೆ ಎಂದಾದರೂ ಇವರು ದಸರಾ ಕೂಟ, ದೀಪಾವಳಿ ಕೂಟಗಳನ್ನು ಏರ್ಪಡಿಸುತ್ತಾರೆಯೇ? ಮುಸ್ಲಿಂ ಬಾಂಧವರೆಂದು ಹಿಂದೂಗಳು ತಮ್ಮನ್ನು ಅಪ್ಪಿಕೊಂಡರೂ ಇವರೇಕೆ ಇನ್ನಷ್ಟು ಮತ್ತಷ್ಟು ದೂರವಾಗುತ್ತಿದ್ದಾರೆ. ಇವರ ವಿಕೃತ ಮನಸ್ಥಿತಿಗೆ ಇನ್ನೊಂದು ಉದಾಹರಣೆ ಇಲ್ಲಿದೆ ನೋಡಿ. ಬೆಳಗ್ಗೆ ಬೆಳಗ್ಗೆ ಒಳ್ಳೆಯ ಗಾಢ ನಿದ್ರೆಯಲ್ಲಿರುತ್ತೀರಿ.ಆಗ ಕಿವಿಗೆ ಮೈಕುಗಳಲ್ಲಿ ಆಜಾನ್ ಶಬ್ದ ಕೇಳುತ್ತದೆ. ಎಷ್ಟು ಜನಕ್ಕೆ ನೆಮ್ಮದಿಯ ನಿದ್ರೆ ಸಾಧ್ಯವಾಗುತ್ತದೆ ಹೇಳಿ?

ಹೃದಯ ಸಂಬಂಧಿ ಹಾಗೂ ಇತರೆ ರೋಗಿಗಳಿಗೆ ಇದರಿಂದ ಆಗುವ ತೊಂದರೆಯ ಅರಿವು ಇವರಿಗಿಲ್ಲವೇ? ಪರೀಕ್ಷೆಗಳಿಗೆಂದು ಮಕ್ಕಳು ಬೆಳಗಿನ ಜಾವ ಓದುತ್ತಿರುತ್ತಾರೆ.ಅವರ ಏಕಾಗ್ರತೆಗೆ ಇದರಿಂದ ತೊಂದರೆಯಾಗುತ್ತದೆ ಎಂಬ ಅರಿವು ಇವರಿಗಿರಬೇಕಲ್ಲವೇ? ಸಿಹಿನಿದ್ರೆಯಲ್ಲಿರುವ ಪುಟಾಣಿ ಕಂದಮ್ಮಗಳಿಗೆ, ಆಯಾಸದ ನಿದ್ರೆಯಲ್ಲಿರುವ ವೃದ್ದಾಪ್ಯರಿಗೆ ಇದು ಎಷ್ಟೊಂದು ಕಿರಿಕಿರಿ ಅಲ್ಲವೇ? ಒಂದು ವೇಳೆ ಅರಿವಿದ್ದೂ ಇದನ್ನು ಮಾಡುತ್ತಿದ್ದಾರೆಂದರೆ ಇನ್ನೊಬ್ಬರಿಗೆ ತೊಂದರೆಯಾಗದಂತೆ ನಡೆದುಕೊಳ್ಳಬೇಕೆಂಬ ಕನಿಷ್ಠ ಜ್ಞಾನವೂ ಇವರಿಗಿಲ್ಲ ಎಂದಾಯಿತು.

ನಮಾಜು ಮಾಡುವ ಸಮಯವನ್ನು ನೆನಪಿಸುವ ಕಾರಣಕ್ಕೆ ಆಜಾನ್ ಕೂಗಲು ಅನೇಕ ವರ್ಷಗಳ ಹಿಂದೆ ಒಂದು ಸಂವಹನ ಮಾಧ್ಯಮವಾಗಿ ಮೈಕ್ ಗಳನ್ನು ಉಪಯೋಗಿಸಲಾಗುತ್ತಿತ್ತು. ಆದರೆ ಇಂದು ಜಗವೇ ಮೊಬೈಲ್ ಮಯವಾಗಿದೆ. ಸಮಯಕ್ಕೆ ಸರಿಯಾಗಿ ತಂತಾನೆ ಸಂಬಂಧಪಟ್ಟವರಿಗೆ ಮೆಸೇಜ್ ಹೋಗುವ ವ್ಯವಸ್ಥೆ ಮಾಡಿಕೊಂಡರಾಯಿತು ಅಲ್ಲವೇ? ಆ ಸಮಯಕ್ಕೆ ಎಲ್ಲರನ್ನೂ ಎಚ್ಚರಿಸಿದಂತೂ ಆಯಿತು. ಹಾಗೆಯೇ ಯಾರಿಗೂ ತೊಂದರೆಯಾಗದಂತೆ ನಡೆದುಕೊಂಡಂತೆಯೂ ಆಯಿತು. ಮಸೀದಿಯ ಮೇಲಿನ ಮೈಕುಗಳನ್ನು ತೆರವು ಮಾಡಲು ಘನ ನ್ಯಾಯಾಲಯ ಹೇಳಿ ವರ್ಷಗಳೇ ಉರುಳಿವೆ, ಆದರೆ ಎಷ್ಟು ಮಸೀದಿಗಳು ಅದನ್ನು ಪಾಲಿಸಿವೆ ? ನ್ಯಾಯಾಂಗದ ಬಗ್ಗೆ ಅಗೌರವವಾಗಿ ನಡೆದುಕೊಳ್ಳುವುದಾದರೂ ಏಕೆ?ಬಹು ಮುಖ್ಯವಾಗಿ ಸರ್ಕಾರ, ಪೋಲೀಸ್ ಇಲಾಖೆ ಇನ್ನೂ ಯಾಕೆ ಮೈಕುಗಳ ತೆರವು ಮಾಡಿಸಿಲ್ಲ? ಕಾನೂನು ಎಲ್ಲರಿಗೂ ಒಂದೇ ತಾನೇ..?”

ಕೆಲವರು ಹೇಳುತ್ತಾರೆ, ಶಿಕ್ಷಣಕ್ಕಿಂತ ನಮಗೆ ಧರ್ಮವೇ ಮೊದಲು ಎಂದು. ಇನ್ನೂ ಕೆಲವರು ಹೇಳುತ್ತಾರೆ, ದೇಶಕ್ಕಿಂತಲೂ ನಮಗೆ ಧರ್ಮವೇ ಮಿಗಿಲೆಂದು. ಹಾಗಾದರೆ ಧರ್ಮವನ್ನು ನಿಷ್ಠೆಯಿಂದ ಪರಿಪಾಲಿಸಿಯೂ ಬ್ರಿಟಿಷರಿಂದ ಟಿಪ್ಪುಸುಲ್ತಾನ್ ಏಕೆ ಹತನಾದ? ತನ್ನ ಧರ್ಮದ ರಕ್ಷಣೆಯ ಹೆಸರಿನಲ್ಲಿ ಮತಾಂತರ ಮಾಡಿದ. ಮಲಬಾರ್ ಪ್ರಾಂತ್ಯದಲ್ಲಿ ಹಿಂದೂಗಳ ನರಮೇಧ ಮಾಡಿದ. ಆದರೂ ಟಿಪ್ಪುವನ್ನು ಅವನ ದೇವರು ಮತ್ತು ಅವನ ಧರ್ಮ ಏಕೆ ರಕ್ಷಿಸಲಿಲ್ಲ? ಅವನ ರಾಜ್ಯವು ಹೋಯಿತು, ಪ್ರಾಣವೂ ಹೋಯಿತು ಏಕೆ?

ಇದ್ಯಾವುದರ ಪರಿವೆಯೇ ಇಲ್ಲದೆ ಇಂದಿಗೂ ಸಾವಿರಾರು ಬಡ ಮುಸ್ಲಿಮರು ತಮ್ಮಷ್ಟಕ್ಕೆ ತಾವು ಬದುಕುತ್ತಾ, ಹಿಂದೂಗಳೊಂದಿಗೆ ಅನೋನ್ಯವಾಗಿರುವ ಅನೇಕ ಉದಾಹರಣೆಗಳು ನಮ್ಮ ನಡುವೆ ಕಾಣಸಿಗುತ್ತವೆ. ಹಳ್ಳಿಗಳ ಕಡೆ ‘ಲಾಳಸಾಬಿ’ಯಾಗಿ, ”ಪಾತ್ರೆ ಕಳಾಯಿ ಸಾಬಿ’ಯಾಗಿ, ‘ಹಳೆಪಾತ್ರೆ ಹಳೆಕಬ್ಬಿಣದ ಸಾಹೇಬ’ನಾಗಿ,ಹಿಂದೂಗಳ ಜೀವನದ ಅನಿವಾರ್ಯ ವ್ಯಕ್ತಿಗಳಾಗಿ ಮುಸ್ಲಿಮರು ಬೆರೆತು ಹೋಗಿದ್ದಾರ ಮತಾಂಧತೆ ಎಲ್ಲೆಡೆ ಜ್ವಾಲೆಯಂತೆ ವ್ಯಾಪಿಸುತ್ತಿರುವ ಈ ಕಾಲಘಟ್ಟದಲ್ಲಿ ಇಂತಹ ಮುಗ್ಧ ಮುಸ್ಲಿಮರ ನಿರ್ವ್ಯಾಜ್ಯ ಪ್ರೀತಿ,ರಾಗದ್ವೇಷಗಳಿಲ್ಲದ ಬದುಕಿನ ಕ್ರಮ ಎಷ್ಟು ದಿನ ಉಳಿಯುತ್ತದೆಯೋ ಕಾದು ನೋಡಬೇಕಾಗಿದೆ.

ಪರಿವರ್ತನೆ ಜಗದ ನಿಯಮ. ಯಾವುದೇ ಧರ್ಮವಾಗಲಿ, ಯಾವುದೇ ತತ್ತ್ವ ಸಿದ್ಧಾಂತಗಳಾಗಲೀ ಕಾಲಕಾಲಕ್ಕೆ ಪರಿವರ್ತನೆ ಆಗಲೇಬೇಕು. ಸಾವಿರಾರು ವರ್ಷಗಳ ಹಿಂದಿನ ರೀತಿ-ರಿವಾಜುಗಳೇ ಇವತ್ತಿಗೂ ಅನ್ವಯವಾಗಲೇ ಬೇಕೆಂದೇನೂ ಇಲ್ಲ. ಆಗಿನ ಕಾಲಘಟ್ಟದಲ್ಲಿ ಸರಿಯೆನಿಸಿದ್ದು ಇವತ್ತಿಗೂ ಸರಿ ಎನಿಸಬೇಕೆಂದೇನೂ ಇಲ್ಲ.ಎಲ್ಲಕ್ಕಿಂತ ಹಿರಿದಾದುದು ಮಾನವೀಯತೆ,ವಿಶ್ವಮಾನವತ್ವ. ಅದು ಕಾಲಾತೀತವಾದದ್ದು. ಎಲ್ಲರ ಹೆಜ್ಜೆ ಅತ್ತ ಚಲಿಸಿದಾಗ ಮಾತ್ರ ಒಂದಷ್ಟು ಪ್ರೀತಿ, ವಿಶ್ವಾಸ, ವಾತ್ಸಲ್ಯ, ನಂಬಿಕೆ, ಬಾಂಧವ್ಯಗಳು, ಧರ್ಮಗಳ ಹೆಸರಿನಲ್ಲಿ ನಡೆಯುತ್ತಿರುವ ಅನಾಚಾರಗಳನ್ನು ಪಕ್ಕಕ್ಕೆ ಸರಿಸಿ ಮನುಷ್ಯರ ನಡುವಿನ ಸಂಬಂಧಗಳಿಗೆ ಹೊಸ ಭಾಷ್ಯ ಬರೆಯುತ್ತವೆ.

 

ಲೇಖಕರು:ಮಣ್ಣೆ ಮೋಹನ್
M- 6360507617
[email protected]

ಜಿಲ್ಲೆ

ರಾಜ್ಯ

error: Content is protected !!