Monday, September 30, 2024

ಐತಿಹಾಸಿಕ ಕೋಟೆ ವೀಕ್ಷಣೆ ಮಾಡಿದ ಬಳ್ಳಾರಿಯ ಸೇವ್ ಇಂಡಿಯಾ ಫೌಂಡೇಶನ್ ಸದಸ್ಯರು.

ಮುದಗಲ್ಲ: ಬಳ್ಳಾರಿಯ ಸೇವ್ ಇಂಡಿಯಾ ಸದಸ್ಯರು ಇಂದು ಐತಿಹಾಸಿಕ ಮುದಗಲ್ ಕೋಟೆ ವೀಕ್ಷಣೆ ಮಾಡಿ ಕೋಟೆಯ ಬಗ್ಗೆ ಮಾಹಿತಿಯನ್ನು ಪಡೆದರು.

ಸೇವಾ ಇಂಡಿಯಾ ಫೌಂಡೇಶನ್ ನ ಸದಸ್ಯರಾದ ಜಾನ್ ರಾಕೇಶ್ ಅವರು ಮಾತನಾಡಿ ಸಾವಿರಾರು ವರ್ಷಗಳ ಇತಿಹಾಸ ಇರುವ ಮುದಗಲ್  ಐತಿಹಾಸಿಕ ಕೋಟೆಯ ಸ್ವಚ್ಚತೆಯನ್ನು ಸ್ಥಳೀಯರು ಮಾಡುತ್ತಿರುವುದು ಹೆಮ್ಮೆಯ ವಿಚಾರಾಗಿದೆ.

ವಿಜಯನಗರ ಸಾಮ್ರಾಜ್ಯ ಹಾಗೂ ಬಹುಮನಿ ಸುಲ್ತಾನರ ಮತ್ತು ಹೈದ್ರಾಬಾದ್ ನಿಜಾಮರ ಕಾಲದಲ್ಲಿ ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತು ಈ ಕೋಟೆಯ ಸಂರಕ್ಷಣೆಯನ್ನು ಮಾಡಿ ಈಗಿನ ಪೀಳಿಗೆಗೆ ಇದರ ಇತಿಹಾಸ ತಿಳಿಸುವ ಕೆಲಸ ಆಗಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬಳ್ಳಾರಿಯ ಸುಭಾಷ್,ಸುಂದರ್, ಜೇಮ್ಸ್, ಸ್ಟಾಲಿ, ಮಾಜಿ ಪುರಸಭೆ ಅಧ್ಯಕ್ಷ ಅಶೋಕ ಗೌಡ ಪಾಟೀಲ್, ಕ ರ ವೇ ಅಧ್ಯಕ್ಷ ಎಸ್.ಎ.ನಯೀಮ್, ಮಹೆಬೂಬ ಬಾರಿಗಿಡ ಪುರಸಭೆ ಸದಸ್ಯರಾದ ದುರಗಪ್ಪ ಕಟ್ಟಿಮನಿ, ಮಹೆಬೂಬ್ ಕಡ್ಡಿಪುಡಿ,ನಾಗರಾಜ ಗಸ್ತಿ ವಕೀಲರು, ಡಾ॥ ಶರಣಪ್ಪ ಆನೆಹೊಸೂರ, ಶಾನೂರ್, ಮಾಸೂಮ್ ಷರೀಫ್, ಎಸ್.ಎನ್. ಖಾದ್ರಿ, ರಘುವೀರ ಮೇಗಳಮನಿ, ಸಾವು ಹುಸೇನ್, ಇಸ್ಮಾಯಿಲ್ ಬಳಿಗಾರ, ಪಾಷ ದುಮ್ ದುಮ್ ಉಪಸ್ಥಿತರಿದ್ದರು

ವರದಿ: ಮಂಜುನಾಥ ಕುಂಬಾರ 

ಜಿಲ್ಲೆ

ರಾಜ್ಯ

error: Content is protected !!