Wednesday, July 24, 2024

ಸ್ಕೂಲ್​​ನಲ್ಲೇ ಸಿಗರೇಟ್​ ಸೇದಿದ ಮುಖ್ಯ ಶಿಕ್ಷಕ.! ಮದ್ಯೆ ಸೇವನೆ ಕೂಡಾ ಮಾಡ್ತಾರೆ ಅಂತೆ :ಮಕ್ಕಳ ಆರೋಪ.!

ಬೆಳಗಾವಿ: ಶಾಲೆ ಜ್ಞಾನ ದೇಗುಲ ಕೈ ಮುಗಿದು ಒಳಗೆ ಬಾ ಅಂತಾರೆ. ಆದ್ರೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ಮಂಗಸೂಳಿ ಗ್ರಾಮದ ಮರಾಠಿ ಶಾಲೆ ಶಿಕ್ಷಕ ಸ್ಕೂಲ್​​ನಲ್ಲೇ ಸಿಗರೇಟ್​ ಸೇದಿದ್ದಾರೆ

ಮಕ್ಕಳಿಗೆ ನೀತಿ ಪಾಠ ಹೇಳ ಬೇಕಾದ ಹೆಡ್​ ಮಾಸ್ಟರ್​​​​​​​ ಮನಸ್ಸಿಗೆ ಬಂದಂತೆ ವರ್ತನೆ ಮಾಡ್ತಿದ್ದಾರೆ. ಕ್ಲಾಸ್​ ರೂಂನಲ್ಲೇ ಸಿಗರೇಟ್​ ಸೇದುತ್ತಿರೋದಾಗಿ ಮಕ್ಕಳು ಆರೋಪ ಮಾಡಿದ್ದಾರೆ. ಸಭ್ಯತೆ ಮರೆತು ವರ್ತಿಸುತ್ತಿರುವ ವಿಡಿಯೋ ವೈರಲ್​ ಆಗಿದೆ.

ಇದಲ್ಲದೆ ಮೇಷ್ಟ್ರು ಮದ್ಯ ಸೇವನೆ ಕೂಡಾ ಮಾಡ್ತಾರೆ ಅಂತಾ ಮಕ್ಕಳು ಆರೋಪಿಸಿದ್ದಾರೆ. ಈ ಬಗ್ಗೆ ಕಾಗವಾಡ ಶಿಕ್ಷಣಾಧಿಕಾರಿ ಎಂ.ಆರ್ ಮುಂಜೆ  ಮಂಗಸೂಳಿ ಮರಾಠಿ ಶಾಲೆಗೆ ಭೇಟಿ ನೀಡಿ ಕಠಿಣ ಕ್ರಮ ಕೈಗೊಳುತ್ತೇನೆ ಎಂದು ಹೇಳಿದ್ದಾರೆ‌.

ಜಿಲ್ಲೆ

ರಾಜ್ಯ

error: Content is protected !!