Monday, April 15, 2024

ಆರತಿ ಮಾಡಿದ ಪುಟ್ಟ ಬಾಲಕಿಯನ್ನು ಗುರುತಿಸಿ ಶುಭ ಹಾರೈಸಿದ ಸಚಿವ ನಿರಾಣಿ.

ಅಥಣಿ: ಬನಜವಾಡ ಪ್ರಾಥಮಿಕ ಇಂಗ್ಲಿಷ್ ಮಾಧ್ಯಮ ಶಾಲೆಯ ಮೊದಲನೆಯ ತರಗತಿಯಲ್ಲಿ ಓದುತಿದ್ದ ತಾಂವಶಿ ಗ್ರಾಮದ ವಿದ್ಯಾರ್ಥಿನಿಯಾದ “ಚೈತನ್ಯ ಅಶೋಕ್ ಗೌರಗೊಂಡ” ಮುರುಗೇಶ ನಿರಾಣಿ ಇವರು ಬ್ರಹತ್ ಮಧ್ಯಮ ಕೈಗಾರಿಕಾ ಸಚಿವ ಸ್ಥಾನದ ಪ್ರಮಾಣವಚನ ಸ್ವೀಕಾರ ಮಾಡುವ ಸಂಧರ್ಭದಲ್ಲಿ ಟಿವಿ ಪರದೆಯ ಮೇಲೆ ಗಮನಿಸಿದ ಪುಟ್ಟ ಬಾಲಕಿ ಟಿವಿ ಪರದೆಗೆ ಆರತಿ ಮಾಡಿದ ದೃಶ್ಯ ಮಾಧ್ಯಮದಲ್ಲಿ ಪ್ರಸಾರವಾಗಿತ್ತು. ಇದನ್ನು ಗಮನಿಸಿದ ಸಚಿವರಾದ ಮುರುಗೇಶ ನಿರಾಣಿಯವರು ರವಿವಾರ ಫೆ 13 ನಡೆದ ಜಮಖಂಡಿ ತಾಲೂಕಿನ ಅಲಗೂರ ನಲ್ಲಿ ಜರುಗಿದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಸಮಾರಂಭದಲ್ಲಿ ಆ ಪುಟ್ಟ ಬಾಲಕಿಯನ್ನು ಗುರುತಿಸಿ ಬೇಟಿಯಾಗಿ ಪ್ರೀತಿ ಹಂಚಿಕೊಂಡು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯವರು ಹಾಗೂ ಬಾಲಕಿ ಕುಟುಂಬಸ್ಥರು ಸಚಿವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ವರದಿ: ಅಬ್ಬಾಸ ಮುಲ್ಲಾ.

ಜಿಲ್ಲೆ

ರಾಜ್ಯ

error: Content is protected !!