Tuesday, May 21, 2024

ಕಾರು ಡಿಕ್ಕಿ, ಸ್ಕೂಟಿಯಲ್ಲಿದ್ದ ಬಾಲಕ ಸಾವು. ಮೂವರಿಗೆ ಗಾಯ:

ಸಿಂಧನೂರು: ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿಯಲ್ಲಿದ್ದ ಓರ್ವ ಬಾಲಕ ಮೃತಪಟ್ಟು ಮೂವರು ಗಾಯಗೊಂಡಿರುವ ಘಟನೆ ಪಾಡುರಂಗ ಕ್ಯಾಂಪ್ ಕ್ರಾಸ್ ಬಳಿ ಘಟನೆ ನಡೆದಿದೆ.

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ತುರುವಿಹಾಳ‌ ಬಳಿಯ ಪಾಂಡುರಂಗ ಕ್ಯಾಂಪ್‌ನ ಹತ್ತಿರದ ಗೋಡೌನ್ ಮುಂದೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಮಸ್ಕಿ ತಾಲೂಕಿನ ಖಾನಹಾಳ ಗ್ರಾಮದ 12 ವರ್ಷದ ಬಾಲಕ ಹರ್ಷ ಮೃತಪಟ್ಟಿದ್ದರೆ, 38 ವರ್ಷದ ಸೂಗಪ್ಪ, ಸಂಜೀಯ್ ಕುಮಾರ್, ಇಂದ್ರಜೀತ್ ಮೂವರು ಗಾಯಗೊಂಡಿದ್ದಾರೆ.

ಸಿಂಧನೂರಿನಲ್ಲಿ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದರು, ಮದುವೆ ಮುಗಿಸಿಕೊಂಡು ಮುದಗಲ್ ಬಳಿ ಇರುವ ಖಾನಹಾಳ ಗ್ರಾಮದ ಕಡೆ ತೆರಳುವಾಗ, ಮಾರ್ಗಮಧ್ಯ ಕಾರ್ ಹಿಂಬದಿಯ ಬಂದು ಸ್ಕೂಟಿ‌ಗೆ ಡಿಕ್ಕಿ ಹೊಡೆದ ಪರಿಣಾಮ ಒರ್ವ ಬಾಲಕ ಸ್ಥಳದಲ್ಲೆ ಮೃತಪಟ್ಟಿದ್ದಾನೆ ಎನ್ನಲಾಗುತ್ತಿದೆ.

ಇನ್ನು ಅಪಘಾತ ನಂತರ ಕಾರಿ ಚಾಲಕ ಪರಾರಿಯಾಗಿದ್ದು, ಸ್ಥಳಿಯರ ಸಹಾಯದಿಂದ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿದೆ. ಘಟನೆಗೆ ಸಂಭಂದಿಸಿದಂತೆ ಸ್ಥಳಕ್ಕೆ ಆಗಮಿಸಿದ ತುರುವಿಹಾಳ ಪೊಲೀಸರು ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವರದಿ: ಮಂಜುನಾಥ ಕುಂಬಾರ ..

ಜಿಲ್ಲೆ

ರಾಜ್ಯ

error: Content is protected !!