Tuesday, April 16, 2024

ವಾಹನ ನಡೆಸುವಾಗ ಮೊಬೈಲ್‌ನಲ್ಲಿ ಮಾತನಾಡುವುದುವುದನ್ನು ಕಾನೂನು ಬದ್ಧ ಮಾಡಲಿರುವ ಕೇಂದ್ರ.

ನವದೆಹಲಿ ಫೆ.12: ಇನ್ನು ಮುಂದೆ ವಾಹನ ನಡೆಸುವಾಗ (ಚಾಲನೆ) ಸಮಯದಲ್ಲಿ ಮೊಬೈಲ್‌ನಲ್ಲಿ ಮಾತನಾಡಿದರೆ ಅಪರಾಧ ಎಂದು ಪರಿಗಣಿಸುವುದಿಲ್ಲ ಅದನ್ನು ಕಾನೂನುಬದ್ಧವಾಗಿಸಲು ಕೆಂದ್ರ ಸರ್ಕಾರ ಹೊರಟಿದೆ.

ಹಾಗೆಂದ ಮಾತ್ರ ಫೋನ್ ಹಿಡಿದು ಮಾತನಾಡುತ್ತಾ ಹೋಗಬಹುದು ಎಂದು ಅರ್ಥವಲ್ಲ, ಬ್ಲೂಟೂಥ್ ಅಥವಾ ಹ್ಯಾಂಡ್‌ಫ್ರೀ ಮೊಬೈಲ್ ಮೂಲಕ ಮಾತನಾಡಬಹುದಾಗಿದೆ.

ಲೋಕಸಭೆಯಲ್ಲಿ ಸಚಿವ ನಿತಿನ್ ಗಡ್ಕರಿ ಈ ಕುರಿತು ಮಾಹಿತಿ ನೀಡಿದ್ದು, ವಾಹನ ಚಲಾಯಿಸುವಾಗ ಒಂದು ವೇಳೆ ನಿಮ್ಮ ಬಳಿ ಮೊಬೈಲ್ ಇದ್ದರೆ, ಅದು ಹ್ಯಾಂಡ್‌ಫ್ರೀ ಸಾಧನಕ್ಕೆ ಸಂಪರ್ಕ ಹೊಂದಿದ್ದರೆ ಮಾತ್ರ ಮಾತನಾಡಲು ಅನುಮತಿ ನೀಡಲಾಗುತ್ತದೆ, ಅಲ್ಲದೇ ಮೊಬೈಲ್ ಅನ್ನು ಕಾರಿನಲ್ಲಿ ಇಡುವುದಕ್ಕಿಂತ ಹೆಚ್ಚಾಗಿ ಜೇಬಿನಲ್ಲಿ ಇಡಬೇಕು ಎಂದು ತಿಳಿಸಲಾಗಿದೆ.

ವಾಹನ ಚಲಾಯಿಸುವಾಗ ಒಂದು ವೇಳೆ ಚಾಲಕ ಹ್ಯಾಂಡ್‌ಫ್ರೀ ಸಾಧನವನ್ನು ಬಳಸಿ, ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರೆ ಅನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸುವುದಿಲ್ಲ, ಅಂತಹ ಪರಿಸ್ಥಿತಿಯಲ್ಲಿ ಟ್ರಾಫಿಕ್ ಪೊಲೀಸರು ಯಾವುದೇ ದಂಡ ವಿಧಿಸಲು ಸಾಧ್ಯವಿಲ್ಲ

ಒಂದು ವೇಳೆ ಹ್ಯಾಂಡ್ಸ್‌ ಫ್ರೀ ಬಳಸಿದಾಗಲೂ ದಂಡ ವಿಧಿಸಿದರೆ ಅದನ್ನು ನೀವು ನ್ಯಾಯಾಲಯದಲ್ಲಿ ಅದನ್ನು ನೀವು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು.

ಒಂದು ವೇಳೆ ವಾಹನ ಚಲಾಯಿಸುವಾಗ ಮೊಬೈಲ್‌ನಲ್ಲಿ ಮಾತನಾಡಿದ್ದಕ್ಕಾಗಿ ನಿಮ್ಮನ್ನು ಬಂಧಿಸಿದರೆ, ನೀವು ಆ ಆರೋಪದ ವಿರುದ್ಧ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬಹುದು ಎಂದು ವರದಿ ತಿಳಿಸಿದೆ.

 

ಜಿಲ್ಲೆ

ರಾಜ್ಯ

error: Content is protected !!