Saturday, July 27, 2024

ಶಿಕ್ಷಕ ಚಂದ್ರಶೇಖರ್ ಅವರಿಗೆ ಅವಿಸ್ಮರಣೀಯ ಬೀಳ್ಕೊಡುಗೆ.

ಮುದಗಲ್ಲ : ಸಮಾಜದಲ್ಲಿ ಬಹುದೊಡ್ಡ ವ್ಯಕ್ತತ್ವದ ಶ್ರೇಷ್ಠ ಸ್ಥಾನ ಅಂದ್ರೆ ಗುರುವಿನ ಸ್ಥಾನ. ಅಂಬೆಗಾಲಿಡುತ್ತಾ ಕಲಿಕಾ ಕೇಂದ್ರಕ್ಕೆ ಬಂದ ವಿಧ್ಯಾರ್ಥಿಗಳಿಗೆ ಅರಿವಿನ ಜ್ಞಾನದ ಧಾರೆ ಎರೆದು 
ವ್ಯಕ್ತತ್ವವನ್ನ ತುಂಬುವತಾ. ಸಂಸ್ಕೃತಿಕ ಹಿರಿಮೆಯ ಹೊಂದಿರುವ ಗುರುವಿಗೆ ವಿಶೇಷ ಗೌರವ ಇದೆ.

 ಶಿಕ್ಷಕ ತನ್ನ ಶಾಲೆಗೆ ಬರುವ ವಿಧ್ಯಾರ್ಥಿಗಳಿಗೆ ಮಾತ್ರ ಶಿಕ್ಷಕ ಆಗಿರುವುದಿಲ್ಲ ಬದಲಾಗಿ ಆ ಗ್ರಾಮಕ್ಕೇ ಮಾಗ೯ದಶ೯ಕ ನಾಗಿರುತ್ತಾನೆ ಅನ್ನುವ ಮಾತಿದೆ.ಇಂತಹ ವಿಶೇಷ ಸ್ಥಾನ ಅದೇಷ್ಟೋ ಶಿಕ್ಷಕರು ಉಳಿಸಿಕೊಂಡು ಹೋಗಿರುತ್ತಾರೆ

ಮುದಗಲ್ಲ ಸಮೀಪದ ಬನ್ನಿಗೋಳ ಗ್ರಾಮದ ಸರಕಾರಿ ಪ್ರೌಢಶಾಲೆ ಶಿಕ್ಷಕರೊಬ್ಬರನ್ನ ಇಂದು ತುಂಬ ಹೃದಯದಿಂದ ಬೀಳ್ಕೊಡಲಾಯಿತು..

ಹೌದು ಅದೊಂದು ಅವಿಸ್ಮರಣೀಯ ನಿಸ್ವಾಥ೯ ಸೇವೆಗೆ ಮೂಡಿದ ಸಾಥ೯ಕತೆಯ ಭಾವ ಅದಾಗಿತ್ತು. ಚಂದ್ರಶೇಖರ್ ಸರ್ ಬನ್ನಿಗೋಳ ಗ್ರಾಮದ ವಗಾ೯ವಣೆ ಗೊಂಡ ಶಿಕ್ಷಕನಿಗೆ ಅಥ೯ಪೂಣ೯ ಕಾಯ೯ಕ್ರಮದ ಮೂಲಕ ಬೀಳ್ಕೊಡಲಾಯಿತು.

ಬನ್ನಿಗೋಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಹಾಗೂ ಪ್ರೌಡಶಾಲೆ 15 ವರ್ಷಗಳ ನಿರಂತರ ಸೇವೆ ಸಲ್ಲಿಸಿ ವಗಾ೯ವಣೆ ಗೊಂಡ ಶಿಕ್ಷಕ ಚಂದ್ರಶೇಖರ್ ಅವರನ್ನು ಹಳೆ ವಿದ್ಯಾರ್ಥಿಗಳು ಸನ್ಮಾನಿಸಿ ಬೀಳ್ಕೊಟ್ಟರು.

ಚಂದ್ರಶೇಖರ ಅವರು ಮೂಲತಃ ಬಾಗಲಕೋಟೆ ಜಿಲ್ಲೆ, ಬಿಳಗಿ ಯವರು ಅತ್ಯಂತ ಶಿಸ್ತಿನ ಶಿಕ್ಷಕರಾದ ಚಂದ್ರಶೇಖರ್ ಎಂದರೆ ಮಕ್ಕಳಿಗೆ ಅಚ್ಚುಮೆಚ್ಚು, ಅಲ್ಲದೆ ಸುತ್ತಮುತ್ತಲ 20 ಹಳ್ಳಿಗಳಲ್ಲು ಅತ್ಯಂತ ಪ್ರೀತಪಾತ್ರ ಶಿಕ್ಷಕರಾಗಿದ್ದರು. ಶಾಲೆಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಟ್ಟು ಪ್ರತಿವರ್ಷ ಶಾಲೆಯಲ್ಲಿ ಉತ್ತಮ ಫಲಿತಾಂಶ ಬರುವಂತೆ ನೋಡಿಕೊಳ್ಳುತ್ತಿದ್ದರು

ವಿನಯ ಕುಮಾರ್ ಹಿರಿಯ ವಿದ್ಯಾರ್ಥಿಗಳು ಮಾತನಾಡಿ ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕನ ಪಾತ್ರ ಅತ್ಯಂತ ಮಹತ್ವವಾದುದು.

ಒಬ್ಬ ಶಿಕ್ಷಕ ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಿ ಮಕ್ಕಳಿಗೆ ಭವಿಷ್ಯ ರೂಪಿಸಿದರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಅದೆ ಒಬ್ಬ ಶಿಕ್ಷಕ ತಮ್ಮ ಜವಾಬ್ದಾರಿಯನ್ನು ಮರೆತು ತಪ್ಪು ಮಾಡಿದರೆ ಮಕ್ಕಳು ತಪ್ಪುದಾರಿ ತುಳಿಯುತ್ತಾರೆ ಎಂಬುದಕ್ಕೆ ತಾವು ಮತ್ತು ತಮ್ಮ ಶಿಕ್ಷಕರೇ ನಿದರ್ಶನ’ ಎಂದರು.

‘ಚಂದ್ರಶೇಖರ್ ಅವರು ಈ ಶಾಲೆಯ ಮಕ್ಕಳಲ್ಲಿಯೆ ತಮ್ಮ ಭವಿಷ್ಯವನ್ನು ಕಂಡವರು. ಹೆಚ್ಚು ಸಮಯವನ್ನು ಶಾಲೆಗಾಗಿಯೆ ಮೀಸಲಿಟ್ಟಿದ್ದಾರೆ. ಇಂತಹ ಶಿಕ್ಷಕರು ಸಿಗುವುದು ತುಂಬಾ ಅಪರೂಪ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಲೆಯ ಹಳೆಯ ವಿದ್ಯಾರ್ಥಿಗಳು, ಪ್ರಸಕ್ತ ವರ್ಷದ ವಿದ್ಯಾರ್ಥಿಗಳು, ಬನ್ನಿಗೋಳ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಇದೆ ವೇಳೆ ಬನ್ನಿಗೋಳ ಪ್ರೌಡಶಾಲೆ ಮುಖೋಪಾಧ್ಯಾರಿಗೆ ಈ ಸಂದರ್ಭದಲ್ಲಿ ಅವರು ಕುಡಾ ಸುಮಾರು ವಷ೯ಗಳ ಸೇವೆ ಸಲ್ಲಿಸಿದ ಶೀಲಾ ಬಿ.ಜೇ ಅವರಿಗೆ ವಿಶೇಷ ಗೌರವ ಹಾಗೂ ಸಮ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿಗಳಾದ ವಿನಯ ,ಮಲೇಶ ಅಯ್ಯಪ್ಪ ಹಾಗೂ ಶಂಕರ್ ಹಾಗೂ ಪ್ರಸಕ್ತ ವರ್ಷದ ವಿದ್ಯಾರ್ಥಿಗಳು,ಸೇರಿದಂತೆ ಉಪಸ್ಥಿತರಿದ್ದರು

ವರದಿ:ಮಂಜುನಾಥ ಕುಂಬಾರ 

ಜಿಲ್ಲೆ

ರಾಜ್ಯ

error: Content is protected !!