Wednesday, September 18, 2024

ಇಬ್ಬರು ಗಂಡು ಮಕ್ಕಳೊಂದಿಗೆ ತಾಯೊಯೋರ್ವಳು ಕೆರೆಗೆ ಹಾರಿ ಆತ್ಮಹತ್ಯೆ

ಬೆಳಗಾವಿ (ಫೆ. 12):  ಕೌಟುಂಬಿಕ ಕಲಹದಿಂದ ಬೇಸತ್ತು ಇಬ್ಬರು ಗಂಡು ಮಕ್ಕಳೊಂದಿಗೆ ತಾಯೊಯೋರ್ವಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ನಗರದ ಹಿಂಡಲಗಾ ರಸ್ತೆಯಲ್ಲಿ ಶುಕ್ರವಾರ  ನಡೆದಿತ್ತು. ನಗರದ ಹಿಂಡಲಗಾ ರಸ್ತೆಯಲ್ಲಿರುವ ಕೆರೆಯಲ್ಲಿ ಶುಕ್ರವಾರ ಶವಗಳು ಕಂಡು ಬಂದಿದ್ದವು.  ಈ ವೇಳೆ ಕೃಷಾ ಹಾಗೂ ಭಾವೀರ ಎಂಬುವರ ಮೃತದೇಹವನ್ನ ಹೊರತೆಗೆಯಲಾಗಿತ್ತು.ಈಗ ನಾಪತ್ತೆಯಾಗಿದ್ದ ಮತ್ತೋರ್ವ ಬಾಲಕ ವೀರೇನ್(7) ಮೃತದೇಹ ಕೂಡ ಪತ್ತೆಯಾಗಿದೆ. ಎಸ್‌ಡಿಆರ್‌ಎಫ್  ಸಿಬ್ಬಂದಿ 7 ವರ್ಷದ ವೀರೇನ್ ಮೃತದೇಹ ಹೊರತಗೆದಿದ್ದಾರೆ.   

ಮೃತದೇಹ  ಕುರಿತು ಮಾಹಿತಿ ಪಡೆದ ಕ್ಯಾಂಪ್‌ ಠಾಣೆಯ ಪೊಲೀಸ್‌ ಇನ್ಸ್‌ಪೆಕ್ಟರ್‌ ಪ್ರಭಾಕರ ಧರ್ಮಟಿ ಹಾಗೂ ಸಿಬ್ಬಂದಿ, ಅಗ್ನಿಶಾಮಕ ದಳದ ಸಿಬ್ಬಂದಿ  ಶುಕ್ರವಾರ ಘಟನಾ ಸ್ಥಳಕ್ಕೆ ದೌಡಾಯಿಸಿದ್ದರು. ಆದರೆ  ಕೃಷಾ ಹಾಗೂ ಭಾವೀರ ಎಂಬುವರ ಮೃತ ದೇಹ ಮಾತ್ರ ಪತ್ತೆಯಾಗಿತ್ತು. ಈಗ ಶಾಲಾ ಸಮವಸ್ತ್ರದಲ್ಲೇ ಕೆರೆಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ. ಮಗುವಿನ ಮೃತದೇಹ ಬೆಳಗಾವಿ ಬಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಶವಾಗಾರ ಬಳಿ ಕುಟುಂಬಸ್ಥರ ಆಕ್ರಂದನ  ಮುಗಿಲು ಮುಟ್ಟಿದೆ. 

ನಗರದ ಸಹ್ಯಾದ್ರಿ ನಗರದ ಕೃಷಾ ಮನಿಷ್‌ ಕೇಶ್ವಾನಿ(36), ಪುತ್ರರಾದ ಭಾವೀರ(4), ವೀರೇನ್‌(17) ಆತ್ಮಹತ್ಯೆ ಮಾಡಿಕೊಂಡವರು. ನಗರದ ಹಿಂಡಲಗಾ ಗಣಪತಿ ದೇಗುಲ ಬಳಿಯ ಕೆರೆಯಲ್ಲಿ ತಾಯಿ, ಮಕ್ಕಳ ಶವ ಪತ್ತೆಯಾಗಿದೆ. ಈ ಕುರಿತು ಕ್ಯಾಂಪ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಿರಜ್‌ ಮೂಲದ ಕೃಷಾ ಅವರನ್ನು ಬೆಳಗಾವಿ ಸಹ್ಯಾದ್ರಿ ನಗರದಲ್ಲಿರುವ ಮನಿಷ್‌ ಎಂಬುವರೊಂದಿಗೆ 8 ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ನಗರದಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಮನಿಷ್‌ ಕೇಶ್ವಾನಿ ಅತ್ಯಂತ ಅನ್ಯೋನ್ಯತೆಯಿಂದ ಜೀವನ ಸಾಗಿಸುತ್ತಿದ್ದರು. ನಂತರದ ದಿನಗಳಲ್ಲಿ ದಂಪತಿ ಮಧ್ಯೆ ಮೇಲಿಂದ ಮೇಲೆ ಮನಸ್ತಾಪ ಹಾಗೂ ಜಗಳ ನಡೆಯುತ್ತಿರುವುದರಿಂದ ಎರಡೂ ಕುಟುಂಬದ ಹಿರಿಯರು ತಿಳಿ ಹೇಳಿ ಎಂದಿನಂತೆ ಜೀವನ ಸಾಗಿಸುವಂತೆ ಮಾಡಿದ್ದರು

 

ಜಿಲ್ಲೆ

ರಾಜ್ಯ

error: Content is protected !!