Tuesday, September 17, 2024

ಸಕಾಲಕ್ಕೆ ಗ್ರಾಹಕರು ಸಾಲ ಮರುಪಾವತಿ ಮಾಡುವುದರಿಂದ ಬ್ಯಾಂಕಿನ ಪ್ರಗತಿಗೆ ಸಹಕಾರವಾಗಲಿದೆ: ಡಾ.ಶಿವಾನಂದಭಾರತಿ ಸ್ವಾಮೀಜಿ

ಬೈಲಹೊಂಗಲ- ಬ್ಯಾಂಕಿನಿಂದ ಸಾಲ ಪಡೆದ ಗ್ರಾಹಕರು ಸಕಾಲಕ್ಕೆ ಮರುಪಾವತಿ ಮಾಡುವದರಿಂದ ಬ್ಯಾಂಕಿನ ಪ್ರಗತಿಗೆ ಸಹಕಾರವಾಗಲಿದೆ ಎಂದು ಸುಕ್ಷೇತ್ರ ಇಂಚಲ ಶಿವಯೋಗೀಶ್ವರ ಸಾಧು ಸಂಸ್ಥಾನ ಮಠದ ಡಾ.ಶಿವಾನಂದಭಾರತಿ ಸ್ವಾಮೀಜಿ ಹೇಳಿದರು.

ಅವರು ಶುಕ್ರವಾರ ಸಮೀಪದ ಸುಕ್ಷೇತ್ರ ಇಂಚಲ ಗ್ರಾಮದಲ್ಲಿ ಡಿಸಿಸಿ ಬ್ಯಾಂಕಿನ 104 ನೇ ಶಾಖೆಯನ್ನು ಉದ್ಘಾಟಿಸಿ, ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಡಿಸಿಸಿ ಬ್ಯಾಂಕ ಶಾಖೆ ತೆರೆಯುದರಿಂದ ಈ ಭಾಗದ ರೈತರಿಗೆ, ಜನತೆಗೆ ತುಂಬಾ ಅನೂಕರವಾಗಿದ್ದು ಸಹಕಾರ ತತ್ವದಡಿಯಲ್ಲಿ ಡಿಸಿಸಿ ಬ್ಯಾಂಕ ಕಾರ್ಯನಿರ್ವಹಿಸಿದ್ದು ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಗ್ರಾಹಕರ ಜೊತೆ ಉತ್ತಮ ಬಾಂದವ್ಯ ಇಟ್ಟು ಕೊಂಡು ಸೇವೆ ಒದಗಿಸುತ್ತದೆ ಎಂದರು. ವಿಧಾನಸಭೆಯ ಉಪಸಭಾಪತಿ, ಡಿಸಿಸಿ ಬ್ಯಾಂಕ ನಿರ್ದೇಶಕ ಆನಂದ ಮಾಮನಿ ಅವರು ಜನತೆಯ ಅನುಕೂಲಕ್ಕಾಗಿ ಶಾಖೆ ಪ್ರಾರಂಭಿಸಲು ಸಹಕಾರ ನೀಡಿದ್ದು, ಅಭಿವೃದ್ದಿಗೆ ಎಲ್ಲರೂ ಕೈ ಜೋಡಿಸಬೇಕೆಂದರು.

ವಿಧಾನಸಭೆಯ ಉಪಸಭಾಪತಿ ಆನಂದ ಮಾಮನಿ ಮಾತನಾಡಿ, ಡಾ.ಶಿವಾನಂದ ಭಾರತಿ ಅಪ್ಪನವರ ಸಲಹೆಯಂತೆ ಇಂಚಲ ಹಾಗೂ ಸೂತ್ತಲಿನ ಗ್ರಾಮೀಣ ಪ್ರದೇಶದ ಜನತೆಗೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಶಾಖೆಯನ್ನು ಪ್ರಾರಂಭಿಸಲಾಗಿದೆ ಎಂದರು.

ಶಾಸಕರು, ಡಿಸಿಸಿ ಬ್ಯಾಂಕ್ ನಿರ್ದೇಶಕ ಮಹಾಂತೇಶ ದೊಡಗೌಡರ, ಶಾಸಕ ಮಹಾಂತೇಶ ಕೌಜಲಗಿ, ಮಾಜಿ ಶಾಸಕ ಜಗದೀಶ ಮೆಟಗುಡ್ಡ ಮಾತನಾಡಿ, ಶ್ರೀಗಳ ಅನುಗ್ರಹದಿಂದ ಇಂಚಲ ಗ್ರಾಮದಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳಿಂದ ನಾಡಿನ ಶ್ರೆಯೋಭಿವೃದ್ದಿಗೆ ಅನುಕೂಲವಾಗಿದ್ದು, ಬ್ಯಾಂಕಿನ ಸೇವೆ ಸಹ ಸಾರ್ಥಕವಾಗಲಿದೆ ಎಂದರು.

ಮುರಗೋಡ ಮಹಾಂತ ದುರದುಂಡೇಶ್ವರ ಮಠದ ನೀಲಕಂಠ ಸ್ವಾಮೀಜಿ, ಶಿವಾನಂದ ಭಾರತಿ ಶಿಕ್ಷಣ ಸಂಸ್ಛೆಯ ಚೇರಮನ್ ಡಿ.ಬಿ. ಮಲ್ಲೂರ, ಕಾರ್ಯದರ್ಶಿ ಎಸ್. ಎಂ. ಕೊಳ್ಳಿ, ಸಹಕಾರ ಸಂಘಗಳ ಅಪರ ನಿಬಂಧಕ ಎಂ.ಡಿ. ಮಲ್ಲೂರ, ಯುವ ಮುಖಂಡ ಕಾರ್ತಿಕ. ಮಲ್ಲೂರ, ಮುಖ್ಯ ಕಾರ್ಯನಿರ್ವಾಹಕ ಎಸ್.ಸಿ. ಶೆಟ್ಟಿಮನಿ, ಉಪಪ್ರಧಾನ ವ್ಯವಸ್ಥಾಪಕ ಎ.ಸಿ. ಕಲ್ಮಠ ಸವದತ್ತಿ ತಾಲೂಕಾ ನಿಯಂತ್ರಣಾಧಿಕಾರಿ ಪಾಟೀಲ, ನಿರೀಕ್ಷಕ ಪಿ.ಎಂ. ಕೋಟಗಿ. ಎಸ್.ಜೆ. ಗೋಣಿ. ಜಿ.ಬಿ. ಬೆಳಗಾವಮಠ. ರಮೇಶ ಮಲ್ಲೂರ, ಬಸವರಾಜ ಸಾವಳಗಿ, ಪಕೀರಪ್ಪ ದೇಶನೂರ, ಶಿವಾನಂದ ಗೋವನಕೊಪ್ಪ, ಶಿವಪ್ಪ ಜಕಾತಿ, ರುದ್ರಪ್ಪ ಪಟ್ಟಣಶೆಟ್ಟಿ , ಸೆದೆಪ್ಪ ವಾರಿ, ಕಿರಣಕುಮಾರ ದೇಸಾಯಿ , ಮಹಾಂತೇಶ ಕಡಬಿ, ಇಂಚಲ ಗ್ರಾಮದ ಕುರಿ ಸಂಗೋಪನೆ ಸಹಕಾರಿ ಸಂಘದ ಹಾಗೂ ಪ್ರಾಥಮಿಕ ಕೃಷಿ ಉತ್ಪನ್ನ ಸರಕಾರಿ ಸಂಘದ ಸದಸ್ಯರು ಸಿಬ್ಬಂದಿ, ಡಿಸಿಸಿ ಬ್ಯಾಂಕ್ ಸಿಬ್ಬಂದಿ ಗ್ರಾಮಸ್ಥರು ಇದ್ದರು.

ಜಿಲ್ಲೆ

ರಾಜ್ಯ

error: Content is protected !!