Thursday, July 25, 2024

ಬಹುದಿನಗಳ ನಂತರ ನಡೆದ ಯಶಸ್ವಿ ಗ್ರಾಮಸಭೆ. ಗ್ರಾಮದ ಅಭಿವೃದ್ಧಿಗೆ ಹತ್ತಾರು ಹೊಸ ನಿಯಮಗಳಿಗೆ ಗ್ರಾಮಸ್ಥರಿಂದ ಅನುಮತಿ

ನೇಗಿನಹಾಳ ಫೆ.10 : ನೇಗಿನಹಾಳ ಎಂದರೆ ಇಲ್ಲಿ ಗ್ರಾ.ಪಂ ಇಂದ ವಿಧಾನಸೌಧ ಮೆಟ್ಟಿಲು ಹತ್ತಿರುವ ಗ್ರಾಮ. ಇಲ್ಲಿ ಬರುವ ಅಧಿಕಾರಿಗಳಿಗೆ ಹಾಗೂ ಗ್ರಾ.ಪಂ ಸದಸ್ಯರಿಗೆ ಸಮಸ್ಯೆಗಳನ್ನು ಅಷ್ಟು ಸುಲಭವಾಗಿ ಬಗೆಹರಿಸುವುದು ಅಸಾಧ್ಯ ಎಂಬುವುದು ಎಲ್ಲರ ಮನಸಸಿನಲ್ಲಿ ನೆಲೆಗೊಂಡಿತ್ತು. ಗ್ರಾಮ ಪಂಚಾಯತಿಯಲ್ಲಿ ಜರಗುವ ಸಾಮಾನ್ಯ ಸಭೆ, ವಾರ್ಡ ಸಭೆ, ಗ್ರಾಮ ಸಭೆಗಳು ಹತ್ತಾರು ವರ್ಷಗಳಿಂದ ಹಲವಾರು ಸಮಸ್ಯೆಗಳ ಮುಂದಿಟ್ಟುಕೊಂಡು ಮೊಟಕುಗೊಳಿಸುತ್ತಾ ಬಂದಿದ್ದು ಸರ್ವೆಸಾಮಾನ್ಯವಾಗಿತು. ಆದರೆ 2021ರಲ್ಲಿ ನೂತನವಾಗಿ ಆಯ್ಕೆಗೊಂಡ ಪ್ರಜ್ಞಾವಂತ ಯುವ ಜನಪ್ರತಿನಿಧಿಗಳು, ಅನುಭವಿ ಸದಸ್ಯರ ಸಹಕಾರಿಂದ ಗ್ರಾಮದ ಜನಸೇವೆಗಾಗಿ ಏನಾದರೂ ಮಾಡೋಣ ಎಂಬ ಒಗ್ಗಟ್ಟಿನ ಮೂಲಮಂತ್ರ ಕಳೆದ ಒಂದು ವರ್ಷದಿಂದ ಲಕ್ಷಾಂತರ ರೂ ಅನುದಾನ ತಂದು ಹಲವಾರು ವರ್ಷಗಳ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಶ್ರಮಿಸುತ್ತಿರುವುದು ಬಹಳಷ್ಟು ಪ್ರಶಂಸೆಯ ಸಂಗತಿಯಾಗಿದೆ.

40 ಮನೆಗಳಿಗೆ 500 ಕ್ಕೂ ಹೆಚ್ಚು ಅರ್ಜಿ :
ಗ್ರಾಮಕ್ಕೆ ಸರಕಾರದಿಂದ ಬಸವ ವಸತಿ ಯೋಜನೆಯಲ್ಲಿ 40 ಮನೆಗಳು ಮೂಂಜೂರಾಗಿದ್ದು ಆದರೆ 6 ವಾರ್ಡಗಳಿಂದ ಸುಮಾರು 500ಕ್ಕೂ ಹೆಚ್ಚು ಅರ್ಜಿ ಬಂದಿದ್ದು ಗ್ರಾಮದಲ್ಲಿ ಮತ್ತೆ ಗಲಾಟೆ ಗೊಂದಲ ಉಂಟುಮಾಡಬಹುದು ಎಂದು ಜನಸಾಮಾನ್ಯರು  ಚರ್ಚಿಸುತ್ತಿದ್ದರೆ ಪ್ರಜ್ಞಾವಂತ ಜನಪ್ರತಿನಿಧಿಗಳು ನಿನ್ನೆಯ ಪೂರ್ವಭಾವಿ ಸಭೆ ಕರೆದು ಗ್ರಾಮದಲ್ಲಿರುವ ಅತ್ಯಂತ ಅವಶ್ಯಕತೆ ಇರುವ ಜನರನ್ನು ಆಯ್ಕೆ ಮಾಡಿದ್ದರು. ಗ್ರಾಮ ಸಭೆಯಲ್ಲಿ ಅವರ ಹೆಸರುಗಳ ಹೇಳಿದ ತಕ್ಷಣ ಗ್ರಾಮಸ್ಥರು ಚಪ್ಪಾಳೆ ತಟ್ಟಿ ಸಹಮತ ವ್ಯಕ್ತಪಡಿಸಿದ್ದು ನೇಗಿನಹಾಳ ಗ್ರಾ.ಪಂ ಇತಿಹಾಸದಲ್ಲಿಯೇ ದಾಖಲೆಯಾಗಿದೆ.

ಬಯಲು ಶೌಚಕ್ಕೆ 500 ರೂ ದಂಡ:
ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಲ ವಿಸರ್ಜನೆ  ಮಾಡುವುದರಿಂದ ಗ್ರಾಮದ ಪರಿಸರ ಮಾಲಿನ್ಯದಿಂದ ಗಬ್ಬು ಹೊಡೆಯುತ್ತಿದ್ದು ಇನ್ನು ಮುಂದೆ ಬಯಲು ಮಲ ವಿಸರ್ಜನೆ ಮಾಡಿದರೆ 500ರೂ ದಂಡ ವಿಧಿಸುವ ಕುರಿತು ಅನುಮೋದನೆ ಪಡೆದರು.

ಸ್ಮಶಾನ ಅಭಿವೃದ್ಧಿಗೆ ಒತ್ತು:
ಗ್ರಾಮದಲ್ಲಿರುವ ಸಾರ್ವಜನಿಕ  ಸ್ಮಶಾನಗಳನ್ನು ಸರ್ವೆ ಮಾಡಿಸಿ ಆವರಣ ಗೋಡೆ ನಿರ್ಮಿಸಿ ವಿದ್ಯುತ್ ಪೂರೈಕೆ, ಸಸಿ ನೆಡುವ ಕುರಿತು ಅನುಮೋದನೆ ಪಡೆದರು.

ತೆರಿಗೆ ನೀಡದಿದ್ದರೆ ಮೂಲಭೂತ ಸೌಕರ್ಯ ಕಟ್ :
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮನೆ ಹಾಗೂ ನೀರಿನ ತೆರಿಗೆ 5000ಕ್ಕಿಂತ ಹೆಚ್ಚು ಬಾಕಿ ಉಳಿಸಿದರೆ ಅವರ ಮೂಲಭೂತ ಸೌಕರ್ಯ ಕಟ್ ಮಾಡುವಂತೆ ಜನಪ್ರತಿನಿಧಿಗಳು ಏಚ್ಛರಿಕೆ ನೀಡಿದರು.

ಕೆಲವು ವಾರ್ಡಗಳಲ್ಲಿ ಕುಡಿಯುವ ನೀರಿನ ಅಸಮರ್ಪಕ ವಿತರಣೆ,  ಸಾರ್ವಜನಿಕ  ಸ್ಥಳಗಳಲ್ಲಿ ಶೌಚಾಲಯ ನಿರ್ಮಾಣ ಹಾಗೂ ನಿರ್ವಹಣೆ  ಕುರಿತು ಚರ್ಚಿಸಿದರು. ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕಗಳು ಸಂಪೂರ್ನ ಸ್ಥಗಿತಗೊಂಡಿದ್ದು ದುರಸ್ಥಿಗೊಳಿಸಲು ಗ್ರಾಮಸ್ಥರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ನೂಡಲ್ ಅಧಿಕಾರಿ ಕೆ.ಸಿ ದೇಶನೂರ, ಸಿ.ಡಿ.ಪಿ ಕಛೇರಿಯ ನೇಗಿನಹಾಳ ಮೆಲ್ವೀಚಾರಕಿ ಆಶಾ ಗುರಪುತ್ರ, ಗ್ರಾ.ಪಂ ಅಧ್ಯಕ್ಷ ಶಿವಾಜಿ ಮುತಗಿ, ಉಪಾದ್ಯಕ್ಷೆ ದ್ರಾಕ್ಷಾಯಿಣಿ ಹುಲಮನಿ, ಪಿ.ಡಿ.ಓ ಮಲ್ಲಿಕಾರ್ಜುನ ಜಿ.ಎಲ್, ಕಾರ್ಯದರ್ಶಿ ಸ್ನೇಹಾ ಹಿರೇಮಠ ಸರ್ವ ಸದಸ್ಯರು, ಸಿಬ್ಬಂದಿಗಳು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ನರೇಗಾ ಕೂಲಿ ಕಾರ್ಮಿಕರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ಜಿಲ್ಲೆ

ರಾಜ್ಯ

error: Content is protected !!