Saturday, July 27, 2024

30 ಸಾವಿರ ರೂಪಾಯಿ ಲಂಚ ಕೊಟ್ರೆ ಮಾತ್ರ ವಸತಿ ಯೋಜನೆ ಫಲಾನುಭವಿಗಳಿಗೆ ಮನೆ! ವಕೀಲ ಉಮೇಶ ಲಾಳ ಆರೋಪ.

ಬೈಲಹೊಂಗಲ: ತಾಲೂಕಿನ ಸಂಗೊಳ್ಳಿ ಗ್ರಾಮ ಪಂಚಾಯತಿಗೆ ಸರ್ಕಾರದಿಂದ ವಿವಿಧ ವಸತಿ ಯೋಜನೆಗಳಲ್ಲಿ 30 ಮನೆಗಳು ಮಂಜೂರಾಗಿದ್ದು, ಗ್ರಾಪಂ ಸದಸ್ಯರು ಫಲಾನುಭವಿಗಳಿಗೆ ಮನೆ ಬೇಕಾದರೆ ರೂ. 30 ಸಾವಿರ ಲಂಚ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ ಎಂದು ವಕೀಲ ಉಮೇಶ ಲಾಳ ಆರೋಪಿಸಿದ್ದಾರೆ. 

ಈ ಕುರಿತು ಗುರುವಾರ ಪತ್ರಿಕಾ ಮಾಧ್ಯಮದೊಂದಿಗೆ ಮಾತನಾಡಿ. ಗ್ರಾಮ ಪಂಚಾಯತಿಯಲ್ಲಿ ಅರ್ಹ ಫಲಾನುಭವಿಗಳ ಹೆಸರು ಲಿಸ್ಟನಲ್ಲಿ ಇದ್ದರು ಅವರಿಗೆ ಮನೆ ನೀಡದೇ ದುಡ್ಡು ಕೊಟ್ಟವರಿಗೆ ಮಾತ್ರ ಮನೆ ಹಂಚಿಕೆ ಮಾಡಲಾಗುವುದು ಎಂದು ಗ್ರಾಮಸಭೆಯಲ್ಲಿ ಕೇಳಿ ಬರುತ್ತಿದ್ದು ಸಂಭಂದಪಟ್ಟ ಮೇಲಾಧಿಕಾರಿಗಳು ಇತ್ತ ಕಡೆ ಗಮನ ಹರಿಸಬೇಕು. ತಪ್ಪಿಸ್ಥರ ವಿರುದ್ದ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. ಒಂದು ವೇಳೆ ಕ್ರಮ ಜರುಗಿಸದೇ ಇದ್ದರೆ ಗ್ರಾಮ ಪಂಚಾಯತಿ ಬೀಗ ಜಡಿದು ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲೆ

ರಾಜ್ಯ

error: Content is protected !!