Friday, April 19, 2024

ಚಿಕ್ಕನಂದಿಹಳ್ಳಿಯಲ್ಲಿ ಬಾಯರ್ ಕಂಪನಿಯ ಹೊಸ ಗೋವಿನಜೋಳದ ತಳಿಯ ಅದ್ಧೂರಿ ಕ್ಷೇತ್ರೋತ್ಸವ

ಬೆಳಗಾವಿ: ಜಿಲ್ಲೆಯ ಕಿತ್ತೂರ ತಾಲೂಕಿನ ಚಿಕ್ಕನಂದಿಹಳ್ಳಿ ಯಲ್ಲಿ ಇಂದು ನಾಗಪ್ಪ ವಕ್ಕುಂದ ಅವರ ತೋಟದಲ್ಲಿ ಬಾಯರ್ ಕಂಪನಿಯ ಹೊಸ “ಡಿಕಾಲ್ಬ್9178″ಗೋವಿನಜೋಳದ ತಳಿಯ ಕ್ಷೇತ್ರೋತ್ಸವ ಅದ್ಧೂರಿಯಾಗಿ ನೆರವೇರಿತು.ಈ ಕಾರ್ಯಕ್ರಮಕ್ಕೆ ಸುತ್ತಮುತ್ತಲಿನ ಗ್ರಾಮದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಈ ವೇಳೆ  ಮಾತನಾಡಿದ ಬಾಯರ್ ಕಂಪನಿಯ ಬೆಳಗಾವಿ ಜಿಲ್ಲೆ ವಿಭಾಗಿಯ ಅಧಿಕಾರಿಯಾದಂತ ಅಕ್ಷಯ ಮಂಕಾಪುರೇ ಅವರು ಡಿಕಾಲ್ಬ್9178 ಗೋವಿನಜೋಳದ ತಳಿಯ ಗುಣಲಕ್ಷಣಗಳು ಮತ್ತು ಬಾಯರ್ ಕಂಪನಿಯ “ಲಾಡಿಸ್” ಕಳೇನಾಶಕ ಬಳಸುವುದರಿಂದಾಗುವ ಲಾಭಗಳ ಬಗ್ಗೆ ಸವಿವರವಾಗಿ ವಿವರಿಸಿದರು.

ಈ ಕಾರ್ಯಕ್ರಮದಲ್ಲಿ ಅಧಿಕೃತ ಮಾರಾಟಗಾರರಾದಂತ ದುರಡುಂಡೇಶ್ವರ ಸೀಡ್ಸ್, ನಂದಿ ಆಗ್ರೋ ಸೆಂಟರ್ ಮತ್ತು  ಬಸವ ಕೃಷಿ ಕೇಂದ್ರದ ಮಾಲಿಕರು ಹಾಗೂ  ಕಂಪನಿಯ ಸಿಬ್ಬಂದಿಗಳಾದಂತಹ ಮಂಜು ತಟ್ಟಿಮನಿ, ಸಿದ್ದು ನವಲಗುಂದ ಸೇರಿದಂತೆ ಸುತ್ತಮುತ್ತಲಿನ ರೈತರು ಉಪಸ್ಥಿತರಿದ್ದರು. 

ಜಿಲ್ಲೆ

ರಾಜ್ಯ

error: Content is protected !!