Wednesday, July 24, 2024

 ಆನ್‌ಲೈನ್ ಸುರಕ್ಷತೆ, ಭದ್ರತೆ ಮತ್ತು ಸೈಬರ್ ನೈರ್ಮಲ್ಯದ ಕುರಿತು ಬಳಕೆದಾರರಿಗೆ ಶಿಕ್ಷಣ ಮತ್ತು ಸಂವೇದನಾಶೀಲತೆಯನ್ನು ನೀಡುವ ಪ್ರಯತ್ನದಲ್ಲಿ Koo (ಕೂ)  ಒಂದು ಭಾಗವಾಗಿದೆ.

ನವದೆಹಲಿ:  ಭಾರತದ ಬಹುಭಾಷಾ ಮೈಕ್ರೊ ಬ್ಲಾಗಿಂಗ್ ವೇದಿಕೆ Koo (ಕೂ)  ಮತ್ತು ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In), ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ((MeitY), ಕೇಂದ್ರ ಸರ್ಕಾರಗಳು ಸುರಕ್ಷಿತ ಅಂತರ್ಜಾಲ ದಿನ 2022ರ ಪ್ರಯುಕ್ತ ಸಾರ್ವಜನಿಕ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿವೆ. ಈ ಅಭಿಯಾನವು ಆನ್‌ಲೈನ್ ಸುರಕ್ಷತೆ, ಭದ್ರತೆ ಮತ್ತು ಸೈಬರ್ ನೈರ್ಮಲ್ಯದ ಕುರಿತು ಸಾರ್ವಜನಿಕ ಜಾಗೃತಿಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. 2022ರ ಧ್ಯೇಯವಾದ ಎಲ್ಲರೂ ಒಗ್ಗೂಡಿ ಉತ್ತಮ ಅಂತರ್ಜಾಲ ಸೌಕರ್ಯ ಪಡೆಯುವ ಆಶಯದಡಿಯಲ್ಲಿ ಈ ವರ್ಷ ಸುರಕ್ಷಿತ ಅಂತರ್ಜಾಲ ದಿನವನ್ನು ಆಚರಿಸಲಾಗುತ್ತಿದೆ. ತಂತ್ರಜ್ಞಾನವನ್ನು ಜವಾಬ್ದಾರಿಯುತವಾಗಿ, ಗೌರವಯುತವಾಗಿ ಮತ್ತು ಸೃಜನಾತ್ಮಕವಾಗಿ ಬಳಸಲು ಯುವಕರನ್ನು ಸಶಕ್ತಗೊಳಿಸುವಲ್ಲಿ ಪೋಷಕರು ಮತ್ತು ಸಮಾಜವು ವಹಿಸಬಹುದಾದ ನಿರ್ಣಾಯಕ ಪಾತ್ರದ ಬಗ್ಗೆ Koo (ಕೂ) ವೇದಿಕೆ CERT-In ಸಹಯೋಗದೊಂದಿಗೆ ಅಭಿಯಾನದ ಮೂಲಕ ಬಳಕೆದಾರರನ್ನು ಸಂವೇದನಾ ಶೀಲಗೊಳಿಸುತ್ತಿದೆ.

ಈ ಅಭಿಯಾನದ ಕುರಿತು ಪ್ರತಿಕ್ರಿಯಿಸಿದ Koo (ಕೂ)  ವಕ್ತಾರರು, ಭಾರತೀಯರಿಗೆ ಪ್ರಾದೇಶಿಕ ಭಾಷೆಗಳಲ್ಲಿ ಅಭಿವ್ಯಕ್ತಿಸಲು ಅವಕಾಶ ಮಾಡಿಕೊಡುವ ಬಹುಭಾಷಾ ಮೈಕ್ರೋ ಬ್ಲಾಗಿಂಗ್ ವೇದಿಕೆಯಾದ Koo (ಕೂ), ಸುರಕ್ಷಿತ ಅಂತರ್ಜಾಲ ಮತ್ತು ಆನ್‌ಲೈನ್‌ನಲ್ಲಿ ಬಳಕೆದಾರರು ಸಭ್ಯವಾಗಿ ವರ್ತಿಸಲು ಉತ್ತೇಜಿಸುತ್ತದೆ.

ಆನ್‌ಲೈನ್ ಬೆದರಿಸುವಿಕೆ, ದುರುದ್ದೇಶಗಳನ್ನು ನಿಗ್ರಹಿಸಲು ಮತ್ತು ಆರೋಗ್ಯಕರ ವಿಷಯವನ್ನು ರಚಿಸಲು Koo (ಕೂ)  ಪ್ರೊತ್ಸಾಹ ನೀಡುತ್ತದೆ. ಜೊತೆಗೆ ಅರ್ಥಪೂರ್ಣ ಸಂಭಾಷಣೆಗಳನ್ನು ನಡೆಸುವಂತೆ ಬಳಕೆದಾರರನ್ನು ಪ್ರೋತ್ಸಾಹಿಸಲು  ಉತ್ತೇಜಿಸುತ್ತದೆ. ಸುರಕ್ಷಿತ ಅಂತರ್ಜಾಲ ದಿನದಂದು ಅಂತರ್ಜಾಲ ಜಗತ್ತನ್ನು ಇನ್ನಷ್ಟು ಸುರಕ್ಷಿತವಾಗಿಸಲು ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ಜೊತೆ Koo (ಕೂ)  ಸಹಯೋಗ ಹೊಂದಿರುವುದು ಸಂತಸ ತಂದಿದೆ ಎಂದು ತಿಳಿಸಿದರು.

Koo (ಕೂ)  ಮತ್ತು  CERT-In ನಡುವಿನ ಈ ಸಹಯೋಗವು ಇಂಟರ್ನೆಟ್ ಸುರಕ್ಷತೆಯ ಕುರಿತು ಹೆಚ್ಚಿನ ಜಾಗೃತಿ ಮೂಡಿಸಲು ನಡೆಯುತ್ತಿರುವ ಅಭಿಯಾನದ ಭಾಗವಾಗಿದೆ.  ರಾಷ್ಟ್ರೀಯ ಸೈಬರ್ ಭದ್ರತಾ ಜಾಗೃತಿ ತಿಂಗಳು ಆಕ್ಟೊಬರ್ 2021, Koo (ಕೂ)  ಮತ್ತು CERT-In ಸಹಭಾಗಿತ್ವದಲ್ಲಿ ಬಳಕೆದಾರರಿಗೆ ಆನ್‌ಲೈನ್ ವಂಚನೆ, ಹ್ಯಾಕಿಂಗ್, ವೈಯಕ್ತಿಕ ಮಾಹಿತಿ ಸುರಕ್ಷತೆ, ಪಾಸ್‌ವರ್ಡ್ ಮತ್ತು ಪಿನ್ ಕಾಪಾಡಿಕೊಳ್ಳುವಿಕೆ, ಅಸುರಕ್ಷಿತ ಲಿಂಕ್‌ಗಳ ಕುರಿತು ಜಾಗೃತಿ ಮತ್ತು ಸಾರ್ವಜನಿಕ ವೈಫೈ ಬಳಸುವಾಗ ತಮ್ಮ ಗೌಪ್ಯತೆ ರಕ್ಷಿಸುವುದರ ಬಗ್ಗೆ ಜಾಗೃತಿ ಮೂಡಿಸಲಾಗಿತ್ತು.

ಜಿಲ್ಲೆ

ರಾಜ್ಯ

error: Content is protected !!