Saturday, June 15, 2024

ಸಾಧನೆಗೆ ಬಹುದೊಡ್ಡ ಸಾಧನವೇ ಕಠಿಣ ಪರಿಶ್ರಮ: ಪಿಎಸ್ಐ ಜ್ಯೋತಿ ಗೂಳಪ್ಪನವರ

ಬೈಲಹೊಂಗಲ : ಪ್ರಗತಿಪರ ರೈತನ ಮಗಳಾಗಿ ಪಿಎಸ್ಐ ಹುದ್ದೆಗೆ ನೇಮಕಗೊಂಡ ಯುವತಿ ಜ್ಯೋತಿ ಗೂಳಪ್ಪನವರ ಅವರ ಸಾಧನೆ ಈ ನಾಡಿನ ಹಿರಿಮೆ, ಘರಿಮೆ ಹೆಚ್ಚಿಸಿದೆ’ ಎಂದು ದುರ್ಗಾ ಪರಮೇಶ್ವರಿ ದೇವಸ್ಥಾನ ಧರ್ಮದರ್ಶಿ ಡಾ.ಮಹಾಂತಯ್ಯಶಾಸ್ತ್ರಿ ಆರಾದ್ರಿಮಠ ಹೇಳಿದರು.

ಪಟ್ಟಣದ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಪಿಎಸ್ಐ ಹುದ್ದೆಗೆ ಆಯ್ಕೆಗೊಂಡು ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಡಿಕೇರಿ ಗ್ರಾಮದ ಯುವತಿ ಜ್ಯೋತಿ ಗೂಳಪ್ಪನವರ ಅವರನ್ನು ಶುಕ್ರವಾರ ಸತ್ಕರಿಸಿ ಅವರು ಮಾತನಾಡಿದರು. ‘ಗ್ರಾಮೀಣ ಭಾಗದಲ್ಲಿದ್ದುಕೊಂಡು ಸಾಕಷ್ಟು ಸರ್ಕಾರಿ ಹುದ್ದೆಗಳಿಗೆ ಅವಕಾಶ ಪಡೆದು ಪಿಎಸ್ಐ ಹುದ್ದೆಯನ್ನು ಆಯ್ಕೆ ಮಾಡಿಕೊಂಡ ಯುವತಿ ಸಾಧನೆ, ಧೈರ್ಯ ಮೆಚ್ಚುವಂತದ್ದಾಗಿದೆ. ಇದು ಈ ಭಾಗದ ಯುವಕ, ಯುವತಿಯರಿಗೆ ಸ್ಪೂರ್ತಿದಾಯಕ ಸಂಗತಿಯಾಗಿದೆ’ ಎಂದರು.

ಪಿಎಸ್ಐ ಜ್ಯೋತಿ ಗೂಳಪ್ಪನವರ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ‘ಸಾಧನೆಗೆ ಬಹುದೊಡ್ಡ ಸಾಧನವೇ ಕಠಿಣ ಪರಿಶ್ರಮ. ನಿರಂತರ ಶ್ರಮವಹಿಸಿ ಆಸಕ್ತಿಯಿಂದ ಓದಿದರೆ ಎಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಸಹಕಾರಿಯಾಗುತ್ತದೆ’ ಎಂದರು.

ಈ ಸಂದರ್ಭದಲ್ಲಿ ರಾಯಣ್ಣ ಸ್ಮರಣೋತ್ಸವ ಸಮಿತಿ ಉಪಾಧ್ಯಕ್ಷ ಸೋಮನಾಥ ಸೊಪ್ಪಿಮಠ, ಗಂಗಾಧರ ಸಾಲಿಮಠ, ಪ್ರೀತಿ ಆರಾದ್ರಿಮಠ, ಮಹಾಬಲೇಶ್ವರ ಗೂಳಪ್ಪನವರ ಸೇರಿದಂತೆ ಅಪಾರ ಭಕ್ತರು ಇದ್ದರು.

ಜಿಲ್ಲೆ

ರಾಜ್ಯ

error: Content is protected !!