Friday, April 19, 2024

ಮಹದಾಯಿ ಕುರಿತು ಪಾದಯಾತ್ರೆಕೈಗೊಳ್ಳಲು ಯೋಚಿಸುತ್ತಿದ್ದ ಕರ್ನಾಟಕ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಯವರ ಮುಂದಿನ ನಡೆಯೇನು ಎಂದು ಬಿ ಎಮ್ ಚಿಕ್ಕನಗೌಡರ ಪ್ರಶ್ನಿಸಿದ್ದಾರೆ.

ಬೆಳಗಾವಿ: ಗೋವಾ ರಾಜ್ಯದ ವಿಧಾನಸಭಾ ಚುನಾವಣೆಯ ನಿಮಿತ್ತ ಗೋವಾ ಬಿಜೆಪಿ ಸರ್ಕಾರ ಮಹದಾಯಿ ನೀರನ್ನು ಕರ್ನಾಟಕಕ್ಕೆ ಉಡುಗೊರೆಯಾಗಿ ಕೊಟ್ಟಿದೆ ಎಂದು ಗೋವಾ ಕಾಂಗ್ರೆಸ್ ಆರೋಪಿಸಿದೆ ಹಾಗೂ ಪಶ್ಚಿಮದತ್ ಗೋವಾದ ಮೂಲಕ ಹರಿದು ಸಮುದ್ರ ಸೇರುವ ಯಾವುದೇ ನದಿಯ ನೀರನ್ನು ತಿರುಗಿಸಲು ಅವಕಾಶ ಕೊಡುವುದಿಲ್ಲವೆಂದು ಗೋವಾ ಕಾಂಗ್ರೆಸ್ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದರ ಬಗ್ಗೆ ಪತ್ರಿಕೆಯೊಂದರಲ್ಲಿ ವರದಿಯಾಗಿದೆ.

ಇದರ ಹಿನ್ನೆಲೆ ಮಹದಾಯಿ ಕುರಿತು ಪಾದಯಾತ್ರೆಕೈಗೊಳ್ಳಲು ಯೋಚಿಸುತ್ತಿದ್ದ ಕರ್ನಾಟಕ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿಯವರ ಮುಂದಿನ ನಡೆಯೇನು ಎಂದು ಸಮಸ್ತ ಲಿಂಗಾಯತ ಹೋರಾಟ ವೇದಿಕೆಯ ಮುಖ್ಯ ಸಂಘಟಿಕ ಬಿ.ಎಂ. ಚಿಕ್ಕನಗೌಡರ ಪ್ರಶ್ನಿಸಿದ್ದಾರೆ.

ಹಿಂದೆ 2009ರ ಲೋಕಸಭಾ ಚುನಾವಣೆಯಲ್ಲಿ ಆಗಿನ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರು ಮಹದಾಯಿ ನದಿಯ ಒಂದು ಹನಿ ನೀರನ್ನು ಗೋವಾ ಕರ್ನಾಟಕಕ್ಕೆ ಬಿಡಲು ಸಾಧ್ಯವಿಲ್ಲವೆಂದು ಹೇಳಿಕೆ ನೀಡಿದ್ದರು ಇದರ ಬಗ್ಗೆ ಪತ್ರಿಕೆಯೊಂದರಲ್ಲಿ ವರದಿಯಾಗಿತ್ತು.

2012ರಲ್ಲಿ ಮಹದಾಯಿ ನ್ಯಾಯಾಧೀಕರಣ ಕೇಂದ್ರದ ಮನಮೋಹನ್ ಸಿಂಗ್ ಸರ್ಕಾರ ಅಧಿನಾಯಕಿ ಸೋನಿಯಾ ಗಾಂಧಿ ಅವರ ಆದೇಶದಂತೆ ನೇಮಿಸಿತ್ತು.ನ್ಯಾಯಾದೀಕರಣ ಮಧ್ಯಂತರ ಆದೇಶದಲ್ಲಿ 6.56 ಟಿಎಂಸಿ ಕುಡಿಯುವ ನೀರು ಕರ್ನಾಟಕಕ್ಕೆ ಬಳಿಕೆ ಮಾಡುವಂತೆ ನೀಡಿದ ಆದೇಶವನ್ನು ಇಲ್ಲಿಯ ಸರ್ಕಾರ ಅನುಷ್ಠಾನಗೊಳಿಸಿಲ್ಲಾ. ಗೋವಾ ಬಿಜೆಪಿ ಸರ್ಕಾರದ ಮಹಾದಾಯಿ ಉಡುಗೊರೆಯ ಆ ನೀರು ಎಲ್ಲಿ ಅಸ್ಥಂಗತವಾಯಿತು? ಎಂದು ಪ್ರಶ್ನಿಸಿದ್ದಾರೆ.

ಜಿಲ್ಲೆ

ರಾಜ್ಯ

error: Content is protected !!