Friday, September 20, 2024

ಫೆ 6  ರಂದು ಬೆಳಗಾವಿ ಜಿಲ್ಲಾ ಕಸಾಪ ಧ್ವಜ ಹಸ್ತಾಂತರ  ಕಾರ್ಯಕ್ರಮ

ಬೆಳಗಾವಿ(ಫೆ.04): ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ  ಕಾರ್ಯಕಾರಿ  ಸಮಿತಿಗೆ ಧ್ವಜ ಹಸ್ತಾಂತರ ಕಾರ್ಯಕ್ರಮವನ್ನು ಫೆಬ್ರವರಿ 6 ರವಿವಾರ ಮಧ್ಯಾಹ್ನ 3 ಘಂಟೆಗೆ   ನೆಹರು ನಗರದಲ್ಲಿರುವ ಕನ್ನಡ ಭವನದಲ್ಲಿ  ಆಯೋಜಿಸಲಾಗಿದೆ ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷೆ ಮಂಗಲಾ ಮೆಟಗುಡ್ಡ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಕಾರ್ಯಕ್ರಮದ ದಿವ್ಯಸಾನಿದ್ಯವನ್ನು ಹುಕ್ಕೇರಿ-ಬೆಳಗಾವಿಯ  ಗುರುಶಾಂತೇಶ್ವರ ಹಿರೇಮಠದ   ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದು ಕೆ.ಎಲ್.ಇ ಕ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಉದ್ಘಾಟಿಸಲಿದ್ದಾರೆ. ಹಿರಿಯ ಸಾಹಿತಿ ನೀಲಗಂಗಾ ಚರಂತಿಮಠ ಅಧ್ಯಕ್ಷತೆ ವಹಿಸಲಿದ್ದಾರೆ.  ಕಸಾಪ ಮಾಜಿ ಜಿಲ್ಲಾ ಅಧ್ಯಕ್ಷ ಮೋಹನ ಬಸನಗೌಡ ಪಾಟೀಲ, ಹಿರಿಯ ಸಾಹಿತಿಗಳಾದ ಬಸವೇಶ್ವರ ಗವಿಮಠ, ಡಾ. ಬಸವರಾಜ ಜಗಜಂಪಿ,ಗೋಕಾಕದ ಪ್ರೋ.ಚಂದ್ರಶೇಖರ ಅಕ್ಕಿ, ಪತ್ರಕರ್ತ ಡಾ.ಸರಜೂ ಕಾಟ್ಕರ, ಅಥಣಿಯ ಬಾಳಾಸಾಹೇಬ ಲೋಕಾಪುರೆ, ಸವದತ್ತಿಯ ಬಿ.ವಿ.ನರಗುಂದ, ಬೆಳಗಾವಿಯ ಡಾ.ಎಸ್.ಎಸ್.ಅಂಗಡಿ, ಸಂಕೇಶ್ವರದ ಪ್ರೋ.ಎಲ್.ವಿ.ಪಾಟೀಲ, ಹಾರೂಗೇರಿಯ ವಿ.ಎಸ್.ಮಾಳಿ, ಸ.ರಾ.ಸುಳಕೂಡೆ, ಡಾ.ರಾಮಕೃಷ್ಣ ಮರಾಠೆ, ರಂಜನಾ ನಾಯಕ, ಡಾ.ಹೆಚ್.ಆಯ್. ತಿಮ್ಮಾಪೂರ, ಡಾ.ಸ್ಮೀತಾ ಸುರೇಬಾನಕರ, ಖಾನಾಪೂರದ  ಡಾ.ಹೆಚ್.ಬಿ.ಕೋಲಕಾರ, ಮೂಡಲಗಿಯ ಬಾಲಶೇಖರ ಬಂದಿ ಹಾಗೂ ಮಹಿಳಾ ಸಮಾಜದ ಅಧ್ಯಕ್ಷೆ ಶೈಲಜಾ ಬಿಂಗೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ ನ  ಬೆಳಗಾವಿ ಜಿಲ್ಲೆಯ ಎಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರುಗಳು , ಸಾಹಿತಿಗಳು, ಕಲಾವಿದರು ಹಾಗೂ ಕನ್ನಡ ಪ್ರೇಮಿಗಳು ಈ ಕಾರ್ಯಕ್ರಮದಲ್ಲಿ ತಪ್ಪದೇ ಬಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಕಸಾಪ ಬೆಳಗಾವಿ ಜಿಲ್ಲಾ ಅಧ್ಯಕ್ಷೆ ಮಂಗಲಾ ಮೆಟಗುಡ್ಡ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹಾಗೂ  ಕಾರ್ಯಕ್ರಮದಲ್ಲಿ ಸಮಸ್ತರು ಮುಖ ಕವಚ ಧರಿಸಿ ಸಾಮಾಜಿಕ ಅಂತರ  ಕಾಯ್ದುಕೊಂಡು ಕೋವಿಡ ನಿಯಮ ಪಾಲಿಸುವಂತೆ  ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ  ಆಕಾಶ್ ಅರವಿಂದ ಥಬಾಜ ( ಮೊ.ನಂ-9448634208/9035419700)  ಅವರನ್ನು ಸಂಪರ್ಕಿಸಲು ಕೋರಿದ್ದಾರೆ.

ಜಿಲ್ಲೆ

ರಾಜ್ಯ

error: Content is protected !!