Tuesday, April 16, 2024

ನೇಗಿನಹಾಳದಲ್ಲಿ ಗ್ರಾಮ ಒನ್ ಕೇಂದ್ರ ಉದ್ಘಾಟಣೆ

‌ಬೈಲಹೊಂಗಲ: ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ಗ್ರಾಮ ಒನ್ ಕೇಂದ್ರ ಉದ್ಘಾಟಿಸಿ ಮಾತನಾಡಿದ ಗ್ರಾಮ ಪಂಚಾಯತ ಅಧ್ಯಕ್ಷ ಶಿವಾಜಿ ಮುತಗಿ ಸರಕಾರದಿಂದ ದೊರೆಯುವ ಸವಲತ್ತುಗಳನ್ನು ಹಾಗೂ ಕಾಗದಪತ್ರ ವ್ಯವಹಾರಗಳನ್ನು ಪಡೆಯಲು ಜನಸಾಮಾನ್ಯರ ಪ್ರತಿನಿತ್ಯ ಹತ್ತಾರು ಕಛೇರಿಗಳನ್ನು ಸುತ್ತಿ ಬೇಸತ ಜನರಿಗೆ ಒಂದೇ ಸೂರಿನಡಿಯಲ್ಲಿ 750 ಸೇವೆಗಳು ದೊರೆಯುವಂತೆ  ಮಾಡಿರುವ ಯೋಜನೆ ಸಮರ್ಪಕವಾಗಿ ನಡೆಯಲಿ ಹಾಗೂ ಗ್ರಾಮಸ್ಥರು ಇದರ ಸದುಪಯೋಗ ಪಡೆದುಕ್ಕೂಳ್ಳಲಿ ಎಂದು ಶಿವಾಜಿ ಮುತಗಿ ಹೇಳಿದರು.

ಗ್ರಾಮದ ಜನತಾ ಕಾಲನಿಯ ಗ್ರಾಮ ಒನ್ ಕೇಂದ್ರದ ನಾಗರಾಜ ಬಾಣಕರ ಅವರ ಕಛೇರಿಯಲ್ಲಿ ನೂತನ ಯೋಜನೆಯ ಬಗ್ಗೆ  ಮಾತನಾಡಿದ ಅವರು  ಆದಾಯ ಮತ್ತು ಜಾತಿ ಪ್ರಮಾಣಪತ್ರ, ರೈತರು, ಕಾರ್ಮಿಕರು, ಸ್ವ-ಉದ್ಯೋಗಿಗಳು, ಗರ್ಭಿಣಿಯರು, ವೈದ್ಯಾಫ್ಯ ವೇತನ ಅರ್ಜಿ ಹೀಗೆ ಹಲವಾರು ಯೋಜನೆಗಳಿಗೆ ಅರ್ಜಿ ಸಲ್ಲಿಸಿ ದಾಖಲೆಗಳನ್ನು ಪಡೆಯಬಹುದು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ ಜಿ.ಎಲ್. ಡಿ.ಬಿ ಇನಾಮದಾರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಮಡಿವಾಳಪ್ಪ ಮೂರಗೋಡ, ಪ್ರಾರ್ಚಾಯರಾದ ಸಿ.ಆರ್ ಮೆಳವಂಕಿ, ಡಿ.ಪಿ.ಇ.ಪಿ ಶಾಲೆ ಮುಖ್ಯ ಅಧ್ಯಾಪಕ ಎಸ್.ಬಿ ಘಂಟಿ, ಗ್ರಾ.ಪಂ ಉಪಾಧ್ಯಕ್ಷೆ ದ್ರಾಕ್ಷಾಯಣಿ ಹುಲಮನಿ, ಗಂಗಾಧರ ಚನ್ನಪ್ಪಗೌಡರ, ಮಹಾಂತೇಶ ಪಾಶ್ಚಾಪೂರ, ಗಂಗಪ್ಪ ತೋರಣಗಟ್ಟಿ, ನಾಗಪ್ಪ ಭೋವಿ, ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು

 

 

ಜಿಲ್ಲೆ

ರಾಜ್ಯ

error: Content is protected !!