Saturday, June 15, 2024

ನ್ಯಾಯಾಧೀಶ ಮಲ್ಲಿಕಾರ್ಜುನ್ ವಿರುದ್ಧ ಕರ್ನಾಟಕದ್ಯಂತ ಹೋರಾಟಗಳು ನಡೆಯುತಿದ್ದರೂ ಕ್ಯಾರೇ ಎನ್ನದ ಸರ್ಕಾರ

ಸೇಡಂ:- ರಾಯಚೂರು ಜಿಲ್ಲೆಯಲ್ಲಿ ಜನವರಿ 26ರಂದು ಗಣರಾಜ್ಯೋತ್ಸವ ದಿನದಂದು ನ್ಯಾಯಾಧೀಶ  ಮಲ್ಲಿಕಾರ್ಜುನ್ ಗೌಡ ಸಂವಿಧಾನ ಪಿತಾಮಹ  ಡಾ! ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಅವಮಾನ ಮಾಡಿದ್ದಲ್ಲದೆ ನ್ಯಾಯಾಧೀಶನಾಗಿ ತನ್ನನು ತಾನೇ ಅವಮಾನ ಮಾಡಿಕೊಳ್ಳದರ ಜೊತೆಗೆ ದಲಿತರನ್ನು ಅವಮಾನಿಸಿದ್ದರೆ.

ಇಂತಹ ಮೂರ್ಖನ ವಿರುದ್ಧ ಇಂದಿಗೆ ಸುಮಾರು 6ದಿನಗಳ ಕಾಲ ಸತತವಾಗಿ ದಲಿತ ಪರ ಸಂಘಟನೆಗಳು ಸೇರಿದಂತೆ ವಿವಿಧ ಜಿಲ್ಲಾ ಮತ್ತು ತಾಲೂಕು ಮಟ್ಟದ ಪ್ರಗತಿ ಪರ ಸಂಘಟನೆಗಳು ಸಹ ಹೋರಾಟ ಮಾಡುತಿದ್ದರು ಸರ್ಕಾರವು ನೋಡಿ ನೋಡದಂತೆ ಕ್ಯಾರೇ ಎನ್ನುತ್ತಿಲ್ಲ.

ಇದಕ್ಕೆ ಕಾರಣ ಏನು.? ಬಾಬಾ ಸಾಹೇಬ್ ಅಂಬೇಡ್ಕರ ಅವರು ಬರೆದಿರುವ ಸಂವಿಧಾನಕ್ಕೆ ಸರ್ಕಾರವು ಸಹ ಅವಮಾನ ಮಾಡಿದಂತೆ ಆಗುತ್ತಿದೆ.

ಇದುವರೆಗೆ ಯಾವುದೇ ದಲಿತ ಪರ ಮಹಿಳಾ ಸಂಘಟನೆಗಳು ಮುಂದಕ್ಕೆ ಬಂದಿಲ್ಲ ಒಂದು ವೇಳೆ ಬಂದರೆ ಮುಂದಿನ ಪರಿಸ್ಥಿತಿಗೆ ಸರ್ಕಾರ ಹೊಣೆಗರರಾಗುತ್ತರೆ ಎಂದು ಎಚ್ಚರಿಸುತ್ತಿದೇನೆ. ಎಂದು ಸೇಡಂ ತಾಲೂಕಿನ ದಲಿತ ಮಾದಿಗ ಸಮನ್ವಯ ಸಮಿತಿ ಮಹಿಳಾ ಘಟಕ ಪ್ರಚಾರ ಸಮಿತಿ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿ ಸಿದ್ದಮ್ಮ ರುದ್ರವಾರ ಇವರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ವರದಿ ವೆಂಕಟಪ್ಪ ಕೆ ಸುಗ್ಗಾಲ್ ಸೇಡಂ

ಜಿಲ್ಲೆ

ರಾಜ್ಯ

error: Content is protected !!