Wednesday, July 24, 2024

ಫೆ-2 ರಂದು ರಾಷ್ಟ್ರ ಮಾತೆ ವೀರರಾಣಿ ಕಿತ್ತೂರು ಚೆನ್ನಮ್ಮನ ಸ್ಮರಣೋತ್ಸವ

ಸುದ್ದಿ ಸದ್ದು ನ್ಯೂಸ್
ಬೈಲಹೊಂಗಲ: ಪಟ್ಟಣದ ಖಾಸಗಿ ಅತಿಥಿಗೃಹದಲ್ಲಿ ರವಿವಾರ ತಾಲೂಕ ಪಂಚಮಸಾಲಿ ಘಟಕದಿಂದ ಕಿತ್ತೂರು ಚೆನ್ನಮ್ಮನ ಸ್ಮರಣೋತ್ಸವವನ್ನು ಆಚರಿಸುವ ಕುರಿತು ಪೂರ್ವಭಾವಿ ಸಭೆ ಜರುಗಿತು.
ಸ್ವಾತಂತ್ರ ಹೋರಾಟದ ಪ್ರಥಮ ಬೆಳ್ಳಿ ಚುಕ್ಕಿ ಸೂರ್ಯ ಮುಳುಗದ ಸಾಮ್ರಾಜ್ಯವನ್ನು ಕಟ್ಟಿದ ಬ್ರಿಟಿಷರಿಗೆ ಸೋಲಿನ ರುಚಿ ತೋರಿಸಿದ ರಾಷ್ಟ್ರ ಮಾತೆ ವೀರರಾಣಿ ಕಿತ್ತೂರು ಚೆನ್ನಮ್ಮನ ಸ್ಮರಣೋತ್ಸವವನ್ನು ಫೆ-2 ರಂದು ಅದ್ದೂರಿಯಾಗಿ ರಾಷ್ಟ್ರ ಮಾತೆ ವೀರರಾಣಿ ಕಿತ್ತೂರು ಚೆನ್ನಮ್ಮನ ಸ್ಮರಣೋತ್ಸವವನ್ನು ಫೆ-2 ರಂದುಚೆನ್ನಮ್ಮನ ಅಭಿಮಾನಿಗಳು ಜಾತಿ ಮತ ಪಂಥ ಪಕ್ಷ ಎಂಬ ಭೇದಭಾವ ಮರೆತು ಕೈಜೋಡಿಸಬೇಕು ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಬಸವ ಜಯಮೃತ್ಯುಂಜಯ ಮಹಾಸ್ವಾಮಿಗಳು ಹೇಳಿದರು.
ವೀರರಾಣಿ ಕಿತ್ತೂರು ಚೆನ್ನಮ್ಮ ಭಾರತದಲ್ಲಿ ಪ್ರಥಮ ಸ್ವಾತಂತ್ರ‍್ಯ ಸಂಗ್ರಾಮದ ಬೆಳ್ಳಿಚುಕ್ಕಿ ಆಗಿದ್ದು ಇಂದು ರಾಷ್ಟ್ರಮಟ್ಟದಲ್ಲಿ ಗೌರವ ಸಿಗಬೇಕಾಗಿದೆ ಆದರೆ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಕೇವಲ ಬೈಲಹೊಂಗಲ ನಾಡಿಗೆ ಸೀಮಿತವಾಗಿದ್ದ ಚೆನ್ನಮ್ಮನ ಪರಾಕ್ರಮ ಇಂದು ಕಿತ್ತೂರು ಉತ್ಸವ ಹಾಗೂ ರಾಜ್ಯ ಸರ್ಕಾರ ಕಿತ್ತೂರು ಕರ್ನಾಟಕ ನಾಮಕರಣ ಮಾಡುವ ಮೂಲಕ ರಾಜ್ಯಾದ್ಯಂತ ಚನ್ನಮ್ಮನ ಸ್ಮರಣೆ ನಡೆಯುತ್ತಿದೆ ಇದು ರಾಷ್ಟ್ರಮಟ್ಟದಲ್ಲಿ ನಡೆಯಬೇಕಾಗಿದೆ ಎಂದರು.
ಮಾಜಿ ಶಾಸಕರು ಕಾಡಾ ಅಧ್ಯಕ್ಷರಾದ ಡಾ. ವಿ ಅಯ್. ಪಾಟೀಲ ಮಾತನಾಡಿ, ಬೈಲಹೊಂಗಲ ಗಂಡು ಮೆಟ್ಟಿನ ನಾಡು ವೀರರ ಬೀಡಾಗಿದೆ ಬೆಳವಡಿ ಮಲ್ಲಮ್ಮ ಅಮಟೂರ ಬಾಳಪ್ಪ ಸಂಗೊಳ್ಳಿ ರಾಯಣ್ಣ ಸರದಾರ ಗುರುಶಿದ್ದಪ್ಪ, ಬಿಜ್ಜಗತ್ತಿ ಚನ್ನಬಸಪ್ಪ, ವೀರರಾಣಿ ಕಿತ್ತೂರು ಚೆನ್ನಮ್ಮಅವರ ವೀರ ಪರಾಕ್ರಮ ನವ ಜನಾಂಗಕ್ಕೆ ಗೊತ್ತಾಗಬೇಕಾಗಿದೆ ವೀರರ ಸ್ಮರಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಪAಚಮಸಾಲಿ ತಾಲೂಕ ಘಟಕದ ಅಧ್ಯಕ್ಷ ಶ್ರೀಶೈಲ್ ಬೊಳನ್ನವರ ಮಾತನಾಡಿ, ಬೈಲಹೊಂಗಲ ನಾಡಿನಾದ್ಯಂತ ಲಿಂಗಾಯತ ಪಂಚಮಸಾಲಿ ಸಮಾಜವನ್ನು ಸಂಘಟಿತಗೊಳಿಸಿ ಪ್ರತಿವರ್ಷ ಚೆನ್ನಮ್ಮನ ಪೂಣ್ಯಸ್ಮರಣೆಯ ಉತ್ಸವವನ್ನು ಅದ್ದೂರಿಯಾಗಿ ಆಚರಿಸಿ, ಬರುವ ದಿನಗಳಲ್ಲಿ ರಾಷ್ಟ್ರೀಯ ಕಾರ್ಯಕ್ರಮವನ್ನಾಗಿ ಮಾಡಲು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಪಂಚಮಸಾಲಿ ೨ ಎ ಮೀಸಲಾತಿ ಹಕ್ಕೊತ್ತಾಯ ಸಮಿತಿ ರಾಜ್ಯಾಧ್ಯಕ್ಷ ಎಫ್ ಎಸ್ ಸಿದ್ದನಗೌಡರ ಮಾತನಾಡಿ, ಯುವಕರಲ್ಲಿ ರಾಷ್ಟ್ರಪ್ರೇಮ ಬೆಳೆಸುವುದರೊಂದಿಗೆ ದೇಶಕ್ಕಾಗಿ ಹೋರಾಡಿ ಪ್ರಾಣತ್ಯಾಗ ಮಾಡಿದ ವೀರರಾಣಿ ಕಿತ್ತೂರು ಚೆನ್ನಮ್ಮನ ಇತಿಹಾಸವನ್ನು ಪರಿಚಯಿಸುವ ಉದ್ದೇಶದಿಂದ ಈ ೧ರಂದು ವೀರರಾಣಿ ಚೆನ್ನಮ್ಮನ ಜನ್ಮಸ್ಥಳ ಕಾಕತಿಯಿಂದ ವೀರಜ್ಯೋತಿಯನ್ನು ತೆಗೆದುಕೊಂಡು ಕಿತ್ತೂರು ಕೋಟೆ ರಾಯಣ್ಣನ ಸಂಗೊಳ್ಳಿ ಬಾಳಪ್ಪನವರ ಅಮಟೂರ ಮೂಲಕ ಬೈಲಹೊಂಗಲಕ್ಕೆ ಆಗಮಿಸಲಿದೆ. ಫೆಬ್ರವರಿ 2 ರಂದು ಮುಂಜಾನೆ 9 ಗಂಟೆಗೆ ವೀರರಾಣಿ ಕಿತ್ತೂರು ಚೆನ್ನಮ್ಮ ವೃತ್ತದಿಂದ ಚೆನ್ನಮ್ಮನ ಸಮಾಧಿಯವರೆಗೆ ಅದ್ದೂರಿ ಮೆರವಣಿಗೆಯೊಂದಿಗೆ ಆಗಮಿಸಲಿದೆ ನಂತರ ಪಂಚಮಸಾಲಿ ಸಮಾಜದ ಜನಪ್ರತಿನಿಧಿಗಳು ಹಾಗೂ ಪ್ರಶಸ್ತಿ ವಿಜೇತರಿಗೆ ಮತ್ತು ನೂತನವಾಗಿ ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಸಮಾಜದ ಮುಖಂಡರಿಗೆ ಸತ್ಕಾರ ಸಮಾರಂಭ ನಡೆಯಲಿದೆ ಎಂದರು.
ಈ ವೇಳೆ ತಾಲೂಕ ಪ್ರಧಾನ ಕಾರ್ಯದರ್ಶಿ ಮಹೇಶ್ ಹರಕುಣಿ, ರಾಜ್ಯ ಮಹಿಳಾ ಘಟಕದ
ಪ್ರಧಾನ ಕಾರ್ಯದರ್ಶಿ ರೋಹಿಣಿ ಪಾಟೀಲ, ನ್ಯಾಯವಾದಿ ಎಮ್.ವಾಯ್. ಸೋಮಣ್ಣವರ್,
ಜಿ ಪಂ ಮಾಜಿ ಸದಸ್ಯ ಶಂಕರ ಮಾಡಲಗಿ, ರಾಜಶೇಖರ್ ಮೂಗಿ, ಮಹಾಂತೇಶ್ ಮತ್ತಿಕೊಪ್ಪ,
ಉಮೇಶ್ ಬೊಳತ್ತಿನ ಸೇರಿದಂತೆ ಇನ್ನೂ ಅನೇಕರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಬಾಬು ಕುಡಸೋಮನ್ನವರ, ಮುರಿಗೆಪ್ಪ ಗುಂಡೂರು,
ವೀರೇಶ್ ಹಲಕಿ, ಗೌಡಪ್ಪ ಪಾಟೀಲ, ಈಶ್ವರ್ ಕೊಪ್ಪದ, ಎಸ್.ಎಫ್. ಹರಕುಣಿ, ವಿತ್ತಲ್ ಅಂದಾನಿ.
ರಾಜು ಕುಡಸೋಮಣ್ಣವರ, ಮೋಹನ ವಕ್ಕುಂದ, ಮಹಾಂತೇಶ್ ಗುಂಡಲೂರು,
ಪ್ರಕಾಶ್ ಭರಮಗೌಡರ ಕುಮಾರ್ ಪಾಟೀಲ್ ಈರಣ್ಣ ಬೆಟಗೇರಿ ಈಶ್ವರ ಬೊರಕನವರ,
ಮಹಾಂತೇಶ ತಟವಟಿ, ಮಲ್ಲಿಕಾರ್ಜುನ ದೇಸಾಯಿ, ಗಂಗಪ್ಪ ಚಪ್ಪಳ್ಳಿ, ಮಹೇಶ ಕಂಠಿ,
ಮಹಾಂತೇಶ ಅಕ್ಕಿ, ಶಿವಪ್ಪ ಕಡಕೊಳ, ರಮೇಶ್ ಯಲ್ಲಪ್ಪಗೌಡರ, ಸೇರಿದಂತೆ ನೂರಾರು
ಪಂಚಮಸಾಲಿ ಸಮಾಜದ ಮುಖಂಡರು ಮತ್ತು ರಾಣಿ ಚನ್ನಮ್ಮನ ಅಭಿಮಾನಿಗಳು ಇದ್ದರು

 

ಜಿಲ್ಲೆ

ರಾಜ್ಯ

error: Content is protected !!