Tuesday, April 16, 2024

ಡಿಡಿಪಿಐ ಕಚೇರಿನೊ ಅಥವಾ ಸಂಘದ ಕಚೇರಿನೊ ತಿಳಿಯದಂತಾದ ಸಾರ್ವಜನಿಕರು…

ಬೆಳಗಾವಿ: ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ಮುಖ್ಯ ಪ್ರವೇಶ ದ್ವಾರದ ಒಳಗಡೆ ಎಡ ಗೋಡೆಯ ಮೇಲೆ ಘಣವೆತ್ತ ಪ್ರಾಥಮಿಕ ಶಿಕ್ಷಕರ ಜಿಲ್ಲಾ ಸಂಘದ ಪದಾಧಿಕಾರಿಗಳ ಪ್ಲಕ್ಸ ಅಳವಡಿಸಿದ್ದಾರೆ. ಜಿಲ್ಲಾಮಟ್ಟದ ಅಧಿಕಾರಿಗಳಿರುವ ಈ ಕಚೇರಿಯಲ್ಲಿ ಇದನ್ನ ತೂಗುಹಾಕಿರುವದರಿಂದ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ಇದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿನೊ ಅಥವಾ ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಕಚೇರಿನೊ ಸಾರ್ವಜನಿಕರಿಗೆ ಗೊತ್ತಾಗುತ್ತಿಲ್ಲ.?

ಜಿಲ್ಲಾಮಟ್ಟದ ಅಧಿಕಾರಿಗಳಿರುವ ಈ ಕಚೇರಿಯಲ್ಲಿ ಸಂಘದ ಪದಾಧಿಕಾರಿಗಳ ಪ್ಲಕ್ಸ ಅವಶ್ಯಕತೆಯಾದರೂ ಏನಿದೆ.?

ಸಂಘದ ಪದಾಧಿಕಾರಿಗಳ ಪ್ಲಕ್ಸ್ ತೂಗುಹಾಕಿರುವುದು

ಶಿಕ್ಷಕರ ಸಂಘದ ಈ ಉಡಾಪೆ ಕೆಲಸಗಳಿಂದ ಅನೇಕ ಶಿಕ್ಷಕರಿಗೆ ಇರುಸು ಮುರುಸಾಗುತ್ತಿದೆ.ಹಾರ ತೂರಾಯಿ,ಬ್ಯಾನರ ಮೂಲಕ ಕಂಗೊಳಿಸುತ್ತಿರುವ ಸಂಘಗಳು ಶಿಕ್ಷಕರ ಹಿತ ಮತ್ತು ಮಕ್ಕಳ ಭವಿಷ್ಯ ಕಾಯುವ ಕೆಲಸಗಳನ್ನು ಮಾಡಲಿ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಶಿಕ್ಷಕರ ಹಲವಾರು ಸಮಸ್ಯೆಗಳಿವೆ.ಅವುಗಳಿಗೆ ಸ್ಪಂದಿಸಿ ಪರಿಹಾರ ಒದಗಿಸುವ ಕೆಲಸ ಮಾಡಬೇಕಿದ್ದು ,ಇದಲ್ಲದೆ ಕೆಲವು ಶಿಕ್ಷಕರು ಪಾಠ ಬೋಧನೆ ಮಾಡದೆ ಕೇವಲ ರಾಜಕಾರಣ ಮಾಡುತ್ತಾ ಮಕ್ಕಳ ಭವಿಷ್ಯದ ಜೊತೆ ಆಟವಾಡುತ್ತಿದ್ದಾರೆ ಇಂತಹ ಶಿಕ್ಷಕರಿಗೆ ಮಾರ್ಗದರ್ಶನ ಮಾಡಿ ಕಾರ್ಯ ಪ್ರವೃತ್ತಿಯಲ್ಲಿ ತೊಡಗುವಂತೆ ಮಾಡಬೇಕಾದ ಸಂಘ ಈ ರೀತಿ ಜಿಲ್ಲಾ ಮಟ್ಟದ ಕಚೇರಿಯಲ್ಲಿ ಪ್ಲೆಕ್ಸ್ ತೂಗುಹಾಕುವುದರಿಂದ ಸಮಸ್ಯೆಗಳಿಗೆ ಪರಿಹಾರ ಸಿಗಬಹುದೆ.

ಇವತ್ತು ಪ್ರಾಥಮಿಕ ಶಿಕ್ಷಕರ ಸಂಘದ ಪ್ಲೆಕ್ಸ್ ನಾಳೆ ಪ್ರೌಢ ಶಾಲಾ ಶಿಕ್ಷಕರ ಸಂಘದ ಪ್ಲೆಕ್ಸ್ ಮುಂದೆ ಅನುದಾನಿತ/ಅನುದಾನ ರಹಿತ ಶಿಕ್ಷಕರ ಸಂಘದ ಫ್ಲೆಕ್ಸ್ ಕೊಡಾ ರಾರಾಜಿಸುತ್ತವೆ. ಇದರಲ್ಲಿ ಅಚ್ಚರಿ ಪಡಬೇಕಾಗಿಲ್ಲ.

ಇನ್ನಾದರೂ ಇಲಾಖೆಯ ಮುಖ್ಯಸ್ಥರು ಎಚ್ಚತ್ತೂಗೊಂಡು ಕಾರ್ಯ ನಿರ್ವಹಿಸಿದರೆ ಇಲಾಖೆಯ ಗೌರವ ಕಾಪಾಡಿಕೊಳ್ಳಬಹುದು.

 

 

ಜಿಲ್ಲೆ

ರಾಜ್ಯ

error: Content is protected !!