Thursday, September 19, 2024

ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ 50 ಎಕರೆ ಕಬ್ಬಿನ ಬೆಳೆ ಸುಟ್ಟು ಕರಕಲು

ಸುದ್ದಿ ಸದ್ದು ನ್ಯೂಸ್
ಚನ್ನಮ್ಮನ ಕಿತ್ತೂರ- 20: ತಾಲೂಕಿನ ಎಂ.ಕೆ. ಹುಬ್ಬಳ್ಳಿ ಪಟ್ಟಣದ ವ್ಯಾಪ್ತಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ ರೈತನ ವರ್ಷದ ಶ್ರಮವೆಲ್ಲಾ ನೂಚ್ಚು ನೂರಾಗಿದ್ದು ಸಮೀಪದ ಪಟ್ಟಣದ ಹೊರ ವಲಯದಲ್ಲಿ ಹತ್ತಿಕೊಂಡ ಬೆಂಕಿಯಿಂದ ಸುಮಾರು 50 ಎಕರೆಗೂ ಹೆಚ್ಚಿನ ಕಬ್ಬಿನ ಬೆಳೆ ಸುಟ್ಟು ಕರಕಲಾಗಿದೆ.  ಜಮೀನಿನ ರೈತರುಗಳಾದ ಉಳವಪ್ಪಾ ಗಡಾದ, ಸಚಿನ ಜಾರ್ಜನಗೌಡ ಪಾಟೀಲ, ಮಲ್ಲಿಕಾರ್ಜುನ ಕರವಿನಕೊಪ್ಪ, ಶಾಂತವ್ವಾ ಮುಗದಯ್ಯನವರ, ಬಸಪ್ಪಾ ಕರವಿನಕೊಪ್ಪ, ಮಹಾದೇವ ಸಂಪಗಾರ, ಲಕ್ಷ್ಮೀ ಕರವಿನಕೊಪ್ಪ, ಈರಣ್ಣಾ ಕರವಿನಕೊಪ್ಪ, ಬಸವಂತ ಸಂಪಗಾರ, ಗಂಗಪ್ಪಾ ಕಲ್ಲೋಳ್ಳಿ, ರಾಚಪ್ಪಾ ಹತ್ತಿ, ದಾದಾಪೀರ ಅಗಸಿಬಾಗಿಲ, ಶ್ರೀಕಾಂತ ಕಲ್ಲೋಳ್ಳಿ, ಮುಗುಟಸಾಬ ಜಮಾದಾರ, ಅರುಣ ಗಣಾಚಾರಿ, ಶಿವಪುತ್ರಪ್ಪ ಗಡಾದ, ಉಳವಪ್ಪ ಸಂಬನ್ನವರ, ಪುಟ್ಟಪ್ಪ ಪಟ್ಟಣಶೆಟ್ಟಿ, ಬಸಪ್ಪಾ ಗಡಾದ, ಸೇರಿದಂತೆ ಹಲವು ರೈತರ ಕಬ್ಬಿನ ಗದ್ದೆಗಳು ಬೆಂಕಿಗೆ ಆಹುತಿಯಾಗಿವೆ. ಎಂದು ಸ್ಥಳೀಯರು ತಿಳಿಸಿದ್ದಾರೆ. ಹತ್ತಿದ ಬೆಂಕಿಯನ್ನು ಹರಸಾಹಸ ಪಟ್ಟು ರೈತರು ಮತ್ತು ಅಗ್ನಿಶಾಮಕ ಸಿಬ್ಬಂದಿ ನುಂದಿಸಲು ಶ್ರಮಿಸಿದ್ದಾರೆ. ಸುದ್ದಿ ತಿಳಿತಿದ್ದಂತೆ ಕಿತ್ತೂರು ಹೆಸ್ಕಾಂ ಅಧಿಕಾರಿ ಎಂ.ಕೆ. ಹಿರೇಮಠ ಸ್ಥಳಕ್ಕೆ ದಾವಿಸಿ ಪರಿಶೀಲಿಸಿದ್ದು ತಕ್ಷಣವೇ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ರೈತರಿಗೆ ತಿಳಿ ಹೇಳಿದರು.

ಈ ವೇಳೆ ರೈತರು ಆಕ್ರೋಶದಿಂದ ಅಧಿಕಾರಿಗಳ ಎದುರು ತಮ್ಮ ದುಃಖವನ್ನು ವ್ಯಕ್ತಪಡಿಸುತ್ತಾ ಸರ್ ನಾವು ಒಂದು ವರ್ಷ ಬೆಳೆ ಬೆಳೆದಿದ್ದೇವು. ಕಣ್ಣುಮುಚ್ಚಿ ಕಣ್ಣು ತೆರೆಯುವದರೊಳಗೆ ಶಾರ್ಟ ಸರ್ಕಿಟನಿಂದ ಕಬ್ಬಿನ ಬೆಳೆ ಸುಟ್ಟು ಹೋಗಿದೆ. ದುಃಖವನ್ನು ಯಾರ ಮುಂದೆ ತೊಡಿಕೊಳ್ಳುವುದೆಂದರು. ಅದಕ್ಕಾಗಿ ಸರಕಾರ ಹಾಗೂ ಹೆಸ್ಕಾಂ ವತಿಯಿಂದ ನಮ್ಮ ನಷ್ಟಕ್ಕೆ ಪರಿಹಾರ ಒದಗಿಸಬೆಂಕೆಂದು ಮನವಿ ಮಾಡಿಕೊಂಡರು.
ಸ್ಥಳಕ್ಕೆ ಭೇಟಿಕೊಟ್ಟ ಕಿತ್ತೂರ ತಹಶೀಲ್ದಾರ ಸೋಮಲಿಂಗಪ್ಪ ಹಾಲಗಿ ಕಷ್ಟಪಟ್ಟು ರೈತ ಬೆಳೆದ ಬೆಳೆ ಸುಟ್ಟಿದ್ದು ನೋವಿನ ಸಂಗತಿ. ಅವರ ನಷ್ಟಕ್ಕೆ ಪರಿಹಾರ ಒದಗಿಸಲು ಸೂಕ್ತ ಕ್ರಮ ಕೈಗೊಳಲಾಗುವುದು ಎಂದರು.
ಈ ವೇಳೆ ಸುದ್ದಿ ತಿಳಿದ ತಕ್ಷಣ ಶಾಸಕ ಮಹಾಂತೇಶ ದೊಡಗೌಡರ ಸ್ಥಳಕ್ಕೆ ಆಗಮಿಸಿ ಹಾನಿಗೊಳಗಾದ  ರೈತರಿಗೆ ಸಮಾಧಾನ ಹೇಳಿ ತಕ್ಷಣ ವಿವಿಧ ಸಕ್ಕಾಕರೆ ರ್ಖಾನೆ ಅದಿಕಾರಿಗಳೊಂದಿಗೆ  ಮಾತನಾಡಿ ಅಗ್ನಿಗಾಹುತಿಯಾಗಿರುವ ಕಬ್ಬು ಸಾಗಿಸಲು ಕಟಾವು ತಂಡ ಹಾಗೂ ಕಬ್ಬು ಸಾಗಿಸಲು ವಾಹನ ವ್ಯವಸ್ಥೆ ಮಾಡಿಕೊಟ್ಟು  ಸೂಕ್ತ ಪರಿಹಾರ ಒದಗಿಸಲು ಸರ್ಕಾರದ ಮುಖ್ಯಸ್ಥರೊಂದಿಗೆ ಮಾತನಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ  ಕಂದಾಯ ನಿರೀಕ್ಷಕ ವ್ಹಿ.ಬಿ. ಬಡಗಾಂವಿ, ಗ್ರಾಮ ಲೆಕ್ಕಾಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು ಸಿಬ್ಬಂದಿ ವರ್ಗ, ರೈತರು ಸೇರಿದಂತೆ ಇನ್ನೂ ಅನೇಕರು ಇದ್ದರು.

ಜಿಲ್ಲೆ

ರಾಜ್ಯ

error: Content is protected !!