Tuesday, September 17, 2024

ಕೇಂದ್ರದ ಮೂರ್ಖತನದ ನಿರ್ಧಾರ ತೆಗೆದುಕೊಂಡಿದ್ದೇಕೆ: ಡಿ.ಕೆ. ಶಿವಕುಮಾರ್

ಬೆಂಗಳೂರು: ಗಣರಾಜ್ಯೋತ್ಸವ ಪಥಸಂಚಲನವು ಭಾರತದ ವಿವಿಧತೆಯ ಪ್ರತೀಕ. ಪ್ರತಿ ರಾಜ್ಯಕ್ಕೂ ತನ್ನ ಕಲೆ ಹಾಗೂ ಸಂಸ್ಕೃತಿಯನ್ನು ಪ್ರದರ್ಶಿಸುವ ಹಕ್ಕಿದೆ. ಹಿಂದೂ ಧರ್ಮದ ಶ್ರೇಷ್ಠ ಸುಧಾರಕರು ನಾರಾಯಣ ಗುರುಗಳು. ಹೀಗಿರುವಾಗ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು ಗಣರಾಜ್ಯೋತ್ಸವ ಪರೇಡ್‌ನಿಂದ ಮೂರನೇ ಬಾರಿಗೆ ರದ್ದು ಮಾಡಿರುವುದು ಅತಿರೇಕದ ನಿರ್ಧಾರ.

ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ವಿಶ್ವದಾದ್ಯಂತ ಲಕ್ಷಾಂತರ ಅನುಯಾಯಿಗಳ ಭಾವನೆಗಳಿಗೆ ನೋವುಂಟು ಮಾಡಿದೆ. ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಒಂದೇ ಜಾತಿ, ಒಂದೇ ಮತ , ಒಂದೇ ದೇವರು ಎಂದು ಪ್ರತಿಪಾದಿಸಿದ ನಾರಾಯಣ ಗುರುಗಳ ಬಗ್ಗೆ ಇಂಥಹ ಮೂರ್ಖತನದ ನಿರ್ಧಾರ ತೆಗೆದುಕೊಂಡಿದ್ದೇಕೆ? ಎಂದು ಡಿಕೆಶಿ ಪ್ರಶ್ನಿಸಿದ್ದಾರೆ.

Koo App

ಗಣರಾಜ್ಯೋತ್ಸವ ಪಥಸಂಚಲನವು ಭಾರತದ ವಿವಿಧತೆಯ ಪ್ರತೀಕ. ಪ್ರತಿ ರಾಜ್ಯಕ್ಕೂ ತನ್ನ ಕಲೆ ಹಾಗೂ ಸಂಸ್ಕೃತಿಯನ್ನು ಪ್ರದರ್ಶಿಸುವ ಹಕ್ಕಿದೆ. ಹಿಂದೂ ಧರ್ಮದ ಶ್ರೇಷ್ಠ ಸುಧಾರಕರು ಶ್ರೀ ನಾರಾಯಣ ಗುರುಗಳು. ಹೀಗಿರುವಾಗ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು ಗಣರಾಜ್ಯೋತ್ಸವ ಪರೇಡ್‌ನಿಂದ ಮೂರನೇ ಬಾರಿಗೆ ರದ್ದು ಮಾಡಿರುವುದು ಅತಿರೇಕದ ನಿರ್ಧಾರ. 1/2

D K Shivakumar (@dkshivakumar_official) 17 Jan 2022

 

ಜಿಲ್ಲೆ

ರಾಜ್ಯ

error: Content is protected !!