Thursday, September 19, 2024

ಯುಪಿ, ಉನ್ನಾವೊ ಅತ್ಯಾಚಾರ ಸಂತ್ರಸ್ತೆಯ ತಾಯಿಯನ್ನು ವಿಧಾನಸಭಾ ಚುನಾವಣಾ ಕಣಕ್ಕಿಳಿಸಿದ ಕಾಂಗ್ರೇಸ್¸

ಸುದ್ದಿ ಸದ್ದು ನ್ಯೂಸ್

ಲಕ್ನೊ: ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 10 ರಿಂದ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಈಗಾಗಲೇ ತಿಳಿಸಿದ ಹಿನ್ನಲೆಯಲ್ಲಿ ಮುಂದಿನ ತಿಂಗಳು ನಡೆಯಲಿರುವ ಪಂಚರಾಜ್ಯ ಚುನಾವಣಾ ಕಾವು ಈಗಿನಿಂದಲೆ ಏರುತ್ತಿದ್ದು ಉತ್ತರ ಪ್ರದೇಶದ ಉನ್ನಾವೊ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನಾಗಿ 2017 ರ ಉನ್ನಾವೊ ಅತ್ಯಾಚಾರ ಸಂತ್ರಸ್ತೆಯ ತಾಯಿಯ ಹೆಸರನ್ನು ಘೋಷಿಸಿದೆ.ಇಂದು ಕಾಂಗ್ರೇಸ್ ಪಕ್ಷ ಬಿಡುಗಡೆ ಮಾಡಿದ ಮೊದಲ ಪಟ್ಟಿಯಲ್ಲಿ ಉನ್ನಾವೊ ಸಂತ್ರಸ್ತೆಯ ತಾಯಿ ಆಶಾ ಸಿಂಗ್ ಅವರ ಹೆಸರು ಕೂಡ ಇದೆ. “ನೀವು ಕಿರುಕುಳ ಹಾಗೂ ಚಿತ್ರಹಿಂಸೆಗೆ ಬಲಿಯಾಗಿದ್ದರೆ ಕಾಂಗ್ರೆಸ್ ಪಕ್ಷ ನಿಮ್ಮನ್ನು ಬೆಂಬಲಿಸುತ್ತದೆʼʼ ಎಂಬ ಹೊಸ ಸಂದೇಶವನ್ನು ಕಾಂಗ್ರೇಸ್ ಪಕ್ಷ ರವಾನಿಸುತ್ತದೆ ಎಂದು ಉತ್ತರ ಪ್ರದೇಶದ ಪೂರ್ವ ಭಾಗದ ಉಸ್ತುವಾರಿ, ಎಐಸಿಸಿಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಗೊಳಿಸಿ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.

2017 ರಲ್ಲಿ ಬಿಜೆಪಿಯ ಮಾಜಿ ನಾಯಕ ಕುಲದೀಪ್ ಸಿಂಗ್ ಸೆಂಗಾರ್ ಎಂಬಾತ 19 ವರ್ಷದ ಮುಗ್ದ ಯುವತಿಯ ಮೇಲಿನ ಅತ್ಯಾಚಾರ ವ್ಯಸಗಿ ಅಪರಾಧಿಯಾಗಿದ್ದು, ಈಗ ಈತ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆ. ಆ ಸಂತ್ರಸ್ತೆ ಯುವತಿಯ ತಾಯಿಯನ್ನು ಕಾಂಗ್ರೇಸ್ ಪಕ್ಷ ವಿಧಾನಸಭಾ ಬಿ ಪಾರ್ಮ ನೀಡುವ ಮೂಲಕ ಅಚ್ಚರಿ ಮೂಡಿಸಿದೆ. ಸಂತ್ರಸ್ತೆ ತಾಯಿಯ ಹೆಸರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಉತ್ತರ ಪ್ರದೇಶದ ಪೂರ್ವ ಭಾಗದ ಉಸ್ತುವಾರಿ ಪ್ರಿಯಾಂಕಾ ವಾದ್ರಾ ಇಂದು ಬಿಡುಗಡೆ ಮಾಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಕಳೆದ ಬಿಜೆಪಿ ಸರ್ಕಾರ ಆಡಳಿತ ಅವದಿಯಲ್ಲಿ ಅನೇಕ ಅತ್ಯಾಚಾರಗಳು ನಡೆದಿದ್ದು ಕೆಲವು ಅತ್ಯಾಚಾರಗಳು ಬೆಳಕಿಗೆ ಬರದೆ ಮುಚ್ಚಿಹಾಕಲಾಗಿದೆ ಈ ಕಾರಣಕ್ಕಾಗಿ 2022 ಮಚುನಾವಣೆಯಲ್ಲಿ ಶೇ 40 ರಷ್ಟು ಟಿಕೆಟ್‌ಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ ಎಂದು ಹೇಳಿರುವ ಪ್ರಿಯಾಂಕಾ,

ಎಐಸಿಸಿಯ ಪ್ರಧಾನ ಕಾರ್ಯದರ್ಶಿ  ಪ್ರಿಯಾಂಕಾ ವಾದ್ರಾ

“ನಮ್ಮ ಪಕ್ಷವನ್ನು ಬಲಪಡಿಸುವುದು ಹಾಗೂ ನಮ್ಮ ಅಭ್ಯರ್ಥಿಗಳು ಜನರ ಸಮಸ್ಯೆಗಳ ಬಗ್ಗೆ ಹೋರಾಡುವುದು ನಮ್ಮ ಗುರಿಯಾಗಿದೆ. ನಾವು ನಕಾರಾತ್ಮಕ ಪ್ರಚಾರಕ್ಕೆ ಒಳಗಾಗುವುದಿಲ್ಲ. ನಮ್ಮ ಪ್ರಚಾರವು ದಲಿತರು ಮತ್ತು ಹಿಂದುಳಿದವರ ಅಭಿವೃದ್ಧಿ ಮತ್ತು ಪ್ರಗತಿಯ ಬಗ್ಗೆ ಇರುತ್ತದೆ”   ಎಂದ   ಅವರು “ನಾನು ಉತ್ತರಪ್ರದೇಶದಲ್ಲಿ ಆರಂಭಿಸಿದ್ದನ್ನು ಮುಂದುವರಿಸುತ್ತೇನೆ ಮತ್ತು ಚುನಾವಣೆಯ ನಂತರವೂ ರಾಜ್ಯದಲ್ಲಿಯೇ ಇರುತ್ತೇನೆ. ರಾಜ್ಯದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸುತ್ತೇನೆ” ಎಂದು  ಹೇಳಿದರು.

ಜಿಲ್ಲೆ

ರಾಜ್ಯ

error: Content is protected !!