Saturday, July 27, 2024

ಇಂದು ಸ್ವಾಮಿ ವಿವೇಕಾನಂದ ಜಯಂತಿ. ಇದನ್ನು ರಾಷ್ಟ್ರೀಯ ಯುವ ದಿನ ಎಂದು ಆಚರಣೆ

18ನೇ ಶತಮಾನದಲ್ಲಿ ಭಾರತ ದೇಶ ಕಂಡ ಶ್ರೇಷ್ಠ ಧರ್ಮಗುರು, ತತ್ವಜ್ಞಾನಿ, ಸಮಾಜ ಸುಧಾರಕ, ಹಿಂದೂ ಧರ್ಮ ಪ್ರತಿಪಾದಕ ಸ್ವಾಮಿ ವಿವೇಕಾನಂದ. ಇಂದು ಜನವರಿ 12, ಅವರ 159ನೇ ಜನ್ಮಜಯಂತಿ. ಈ ದಿನವನ್ನು ಇಂದು ನಾವು ರಾಷ್ಟ್ರೀಯ ಯುವ ದಿನ ಎಂದು ಆಚರಿಸುತ್ತೇವೆ.

ಇಂದಿನ ಕೋಲ್ಕತ್ತಾದಲ್ಲಿ ಬಂಗಾಳಿ ಮನೆತನದಲ್ಲಿ 1863ರ ಜನವರಿ 12ರಂದು ಜನಿಸಿದ ಸ್ವಾಮಿ ವಿವೇಕಾನಂದರು ಸಮೃದ್ಧ ಚಿಂತಕರಾಗಿದ್ದರು, ಶ್ರೇಷ್ಠ ವಾಗ್ಮಿ ಮತ್ತು ಪರಮ ದೇಶಭಕ್ತ ಎನಿಸಿದ್ದರು.

ರಾಷ್ಟ್ರೀಯ ಯುವ ದಿನ ಆಚರಣೆ ಏಕೆ?:
ವಿವೇಕಾನಂದರ ಬೋಧನೆಗಳು ಬಹಳಷ್ಟು ಯುವ ಭಾರತೀಯರಿಗೆ ಸ್ಫೂರ್ತಿ ನೀಡಿತು. 19 ನೇ ಶತಮಾನದಲ್ಲಿ ಆಧ್ಯಾತ್ಮಿಕ ಜಾಗೃತಿಯನ್ನು ತಂದಿತು. ಆದ್ದರಿಂದ ಅವರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವಾಗಿ ಆಚರಿಸಲಾಗುತ್ತದೆ. ಅತೀಂದ್ರಿಯ ಮತ್ತು ಯೋಗಿ ರಾಮಕೃಷ್ಣ ಪರಮಹಂಸರ ಮಾರ್ಗದರ್ಶನದಲ್ಲಿ ಪುರಾತನ ಹಿಂದೂ ಧರ್ಮಗ್ರಂಥಗಳ ಮೂಲಕ ಭಾರತೀಯ ತತ್ವಶಾಸ್ತ್ರವನ್ನು ಮರುಶೋಧಿಸಿದ ಮತ್ತು ಅದನ್ನು ಮುಖ್ಯವಾಹಿನಿಯ ಭಾರತೀಯ ಚಿಂತನೆಗೆ ತಂದ ಭಾರತದ ಪ್ರಮುಖ ಚಿಂತಕರಲ್ಲಿ ಒಬ್ಬರು.

Koo App

ಸ್ವಾಮಿ ವಿವೇಕಾನಂದರು 1893 ರಲ್ಲಿ ವಿಶ್ವ ಧರ್ಮಗಳ ಸಂಸತ್ತಿನಲ್ಲಿ ಭಾರತ ಮತ್ತು ಹಿಂದೂ ಧರ್ಮವನ್ನು ಪ್ರತಿನಿಧಿಸಿದ್ದರು. ಸ್ವಾಮಿ ವಿವೇಕಾನಂದರ ಜೀವನ ಮತ್ತು ಕಾರ್ಯ ಹಲವಾರು ವರ್ಷಗಳಿಂದ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿದೆ. 1985ರಿಂದ ಭಾರತ ಸರ್ಕಾರವು ವಿವೇಕಾನಂದರ ವಿಚಾರಧಾರೆಗಳು ವಿಶೇಷವಾಗಿ ಯುವಕರನ್ನು ಪ್ರೇರೇಪಿಸುತ್ತದೆ ಮತ್ತು ಅವರ ಜೀವನವನ್ನು ರೂಪಿಸಲು ಸಹಾಯ ಮಾಡುತ್ತದೆ ಎಂದು ಹೇಳಿ ರಾಷ್ಟ್ರೀಯ ಯುವ ದಿನ ಆಚರಿಸಲು ಪ್ರಾರಂಭಿಸಿತು.

ರಾಷ್ಟ್ರೀಯ ಯುವ ದಿನದ ಆಚರಣೆ

ಪ್ರತಿ ವರ್ಷ  ರಾಷ್ಟ್ರೀಯ ಯುವ ದಿನವು ಶಾಲೆಗಳು ಮತ್ತು ಕಾಲೇಜುಗಳಲ್ಲಿ ವಿವಿಧ ಕಾರ್ಯಕ್ರಮಗಳು, ಸಮ್ಮೇಳನಗಳು, ಭಾಷಣಗಳು ಮತ್ತು ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಭಾರತದ ಯುವಕರಲ್ಲಿರುವ ಪ್ರತಿಭೆಯನ್ನು ಬಳಸಿಕೊಳ್ಳಲು ಸಹಾಯ ಮಾಡುವುದು ಮತ್ತು ವಿವಿಧ ಸಮಸ್ಯೆಗಳ ಬಗ್ಗೆ ಅವರು ಹೇಗೆ ಭಾವಿಸುತ್ತಾರೆ ಎಂಬುದನ್ನು ವ್ಯಕ್ತಪಡಿಸಲು ವೇದಿಕೆಯನ್ನು ನೀಡುವುದು ಇದರ ಉದ್ದೇಶವಾಗಿದೆ. ರಾಷ್ಟ್ರೀಯ ಯುವ ದಿನದ ಆಚರಣೆಯು ಭಾರತದ ಯುವಜನರು ಭಾಗವಹಿಸುವ, ಹಂಚಿಕೊಳ್ಳುವ ಮತ್ತು ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುವ ಮತ್ತು ಸ್ವಾಮಿ ವಿವೇಕಾನಂದರ ಜೀವನ ಮತ್ತು ಕಾರ್ಯಗಳನ್ನು ಆಚರಿಸುವ ವಿವಿಧ ಸಮ್ಮೇಳನಗಳು ಮತ್ತು ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ.

ಜಿಲ್ಲೆ

ರಾಜ್ಯ

error: Content is protected !!