Saturday, September 21, 2024

ಶಿಕ್ಷಣ ಪದ್ಧತಿಯಲ್ಲಿ ಕೃಷಿ ಪ್ರಾತ್ಯಕ್ಷಿಕೆ ತಂದಿರುವ ಮರಾಠೆ ಕಾಲೇಜು

ಸುದ್ದಿ ಸದ್ದು ನ್ಯೂಸ್

ಮಹಾರಾಷ್ಟ್ರ : ಬೆಳಗಾವಿಯಿಂದ ಸುಮಾರು 170 ಕಿಮೀ ದೂರದಲ್ಲಿ ಇರುವ ಪಕ್ಕದ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಫೋಂಡಾಘಾಟ್ ಎಂಬ ಗ್ರಾಮ ಇದೆ. ಆ ಗ್ರಾಮದಲ್ಲಿ ಮರಾಠೆ ಕೃಷಿ ಕಾಲೇಜು ಇದೆ. ಅಲ್ಲಿನ ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಅವಧಿಯಲ್ಲಿ ಕೆಲವು ವಾಣಿಜ್ಯ ಬೆಳೆ, ಹಣ್ಣು, ಹೂವು, ಹಾಗೂ ಬಗೆ ಬಗೆಯ ತರಕಾರಿಗಳನ್ನು ಬೆಳೆಯುತ್ತಾರೆ .

ಫೋಂಡಾಘಾಟ್ ಸಮೀಪದಲ್ಲಿಯೇ ವೈಭವವಾಡಿ ಪಟ್ಟಣದಲ್ಲಿ ವಾರದ ಸಂತೆಯಾಗುತ್ತದೆ. ಕೃಷಿ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಅಭ್ಯಾಸದ ಭಾಗವಾಗಿ ತಾವು ಬೆಳೆದ ಬೆಳೆಯನ್ನು ವೈಭವವಾಡಿ ಸಂತೆಯಲ್ಲಿ ಹೋಗಿ ಮಾರಬೇಕು .ಇದು ಅಭ್ಯಾಸದ ಒಂದು ಭಾಗ‌. ಇದರಲ್ಲಿ ಯಾವುದೇ ಕೃತಘ್ನತೆ ಇಲ್ಲ ‌.

ಕೃಷಿ ಕುರಿತು ರೈತರಿಂದ ಮಾರ್ಗದರ್ಶನ ಮಾಡಿಸುತ್ತಿರುವುದು

ಗಿರಾಕಿಗಳ ಬೇಕು ಬೇಡ , ಚೌಕಾಶಿ ಮಾಡುವ ಮನೋಭಾವ , ಬೆಳೆದ ಬೆಳೆಯನ್ನು ಮಾರಿಬಂದ ಲಾಭದ ಸಂತಸ , ಹಾನಿಯಾಗುವ ಬೆಲೆಗೆ ಗ್ರಾಹಕ ಕೇಳಿದಾಗಿನ ನೋವು ಹೀಗೆ ರೈತನ ಜೀವನದ ನೈಜ ಮುಖದ ಅನುಭವ First Hand Experience ವಿದ್ಯಾರ್ಥಿಗಳ ಪಾಲಿಗೆ ಇಲ್ಲಿ ದೊರೆಯುವದು. ಶಿಕ್ಷಣ ಪದ್ಧತಿಯಲ್ಲಿ ಈ ರೀತಿಯ ಪ್ರಾತ್ಯಕ್ಷಿಕೆ ತಂದಿರುವುದು ಸ್ವಾಗತಾರ್ಹ ‌‌ಮರಾಠೆ ಕೃಷಿ ಕಾಲೇಜು ಅಭಿನಂದನೀಯ.

 

ಜಿಲ್ಲೆ

ರಾಜ್ಯ

error: Content is protected !!