Sunday, September 8, 2024

ಕಲಾವಿದನ ಕಣ್ಣು ಆಪರೇಷನ್‌ಗೆ ಧನ ಸಹಾಯ ಮಾಡಿ ಮಾನವಿಯತೆ ಮೆರೆದ ಹಬೀಬ್ ಶಿಲ್ಲೇದಾರ

ಸುದ್ದಿ ಸದ್ದು ನ್ಯೂಸ್

ಚನ್ನಮ್ಮನ ಕಿತ್ತೂರು: ತಾಲೂಕಿನ ಎಮ್ ಕೆ ಹುಬ್ಬಳ್ಳಿ ಪಟ್ಟಣದ ಕಲಾವಿದ ರಾಜೇಂದ್ರ ಶರ್ಮಾ ಇವರು ಖ್ಯಾತ ಕಲಾವಿದರು ಚಲನಚಿತ್ರ ಹಾಸ್ಯ ನಟ ರಾಜು ತಾಳಿಕೋಟಿ ಅವರ ಸಹೋದರಿಯ ಪತಿ. ಇವರು ಆಕಸ್ಮಿಕವಾಗಿ ರಾಷ್ಟ್ರೀಯ ಹೆದ್ದಾರಿ 4 ಕ್ಕೆ ಹೊಂದಿಕೊಂಡು ಇರುವ ಶ್ರೀ ಸತೀಶ ಕಲ್ಯಾಣ ಮಂಟಪದ ಎದುರು ತಿರುಗಾಡುವ ಆಕಸ್ಮಿಕವಾಗಿ ನಮ್ಮ ಗಾರ್ಮೆಂಟ್ ವರ್ಕರ್ಸ್ ಕಣ್ಣಿಗೆ ಬಿದ್ದು ಅವರು ವಿಚಾರಿಸಿದಾಗ ನಾನೊಬ್ಬ ಅನಾಥ ನನಗೆ ಹಿಂದುಮುಂದು ಯಾರು ಇಲ್ಲಾ, ನನಗೆ ವಯಸ್ಸಾಗಿದೆ ನನಗೆ ಕಣ್ಣು ಕಾಣುವುದಿಲ್ಲ ಆಪರೇಷನ್ ಮಾಡಿಸಿಕೊಳ್ಳಲು ನನ್ನ ಹತ್ತಿರ ಹಣ ಇಲ್ಲಾ ಎಂದು ಹೇಳಿಕೊಂಡಿದ್ದಾನೆ. ತಕ್ಷಣ ಶ್ರೀ ಸತೀಶ ಗಾರ್ಮೆಂಟ್ಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಹೋದರಿಯರು ಗಾರ್ಮೆಂಟ್ ಮಾಲಿಕರಾದ ಹಬೀಬ್ ಶಿಲ್ಲೇದಾರ ಅವರಿಗೆ ತಿಳಿಸಿದ್ದಾರೆ. ವಿಷಯ ತಿಳಿದ ಹಬೀಬ್ ಶಿಲ್ಲೇದಾರ ತಕ್ಷಣ ಕಲಾವಿದ ರಾಜೇಂದ್ರ ಶರ್ಮಾ ಅವರ ಕಣ್ಣು ಆಪರೇಷನ್ ಮಾಡಿಸಿಕೊಳ್ಳಲು ರೂಂ 5 ಸಾವಿರ ಧನ ಸಹಾಯ ಮಾಡುವ ಮುಖಾಂತರ ಮಾನವಿಯತೆ ಮೆರೆದಿದ್ದಾರೆ.

ಈ ವೇಳೆ ಶ್ರೀ ಸತೀಶ ಗಾರ್ಮೆಂಟ್ಸ್‌ನ ನೌಕರರು, ಕಲ್ಯಾಣ ಮಂಟಪ ನೌಕರರು, ಹಾಗೂ ಸತೀಶ ಜಾರಕಿಹೊಳಿ ಅವರ ಅಭಿಮಾನಿಗಳು ಸೇರಿದಂತೆ ಇನ್ನೂ ಅನೇಕರು ಇದ್ದರು

ಸಮಾಜಸೇವಕ ಹಬೀಬ್ ಶಿಲ್ಲೇದಾರ

“ಇವರ ಪರಿಸ್ಥಿತಿ ಕಂಡು ನನಗೆ ಬಹಳ ನೋವಾಗಿ ಕಣ್ಣಲ್ಲಿ ನೀರು ಬಂತು ಏಕೆಂದರೆ ನಾನು ಕೂಡಾ ಬಡತನದ ನೋವು ಅನುಭವಿಸಿ ಬಂದವನು.ಒಬ್ಬ ಬಿಡುವಿನ ನೋವು ಮತ್ತೊಬ್ಬ ಬಡವನಿಗೆ ಅರ್ಥವಾಗಬಲ್ಲದು. ಬಡವರ ಕಷ್ಟ ಏನೆಂದು ನನಗೆ ಗೊತ್ತು.ಏನೆ ಇರಲಿ ಇಂತಹ ನೋವು ಇದ್ದ ಬಡವರ ಸೇವೆ ಮಾಡುವ ಶಕ್ತಿಯನ್ನು ಭಗವಂತ ನನಗೆ ಕರುಣಿಸಿರುವುದು ನನ್ನ ಪೂರ್ವಜನ್ಮದ ಪುಣ್ಯ. ಇದು ಪ್ರಚಾರಕ್ಕಾಗಿ ಅಲ್ಲ ಪ್ರೇರಣೆಗಾಗಿ” ಸಮಾಜ ಸೇವಕ ಹಬೀಬ್ ಶಿಲ್ಲೇದಾರ, ಅಂಬಡಗಟ್ಟಿ.

ಜಿಲ್ಲೆ

ರಾಜ್ಯ

error: Content is protected !!