Friday, April 19, 2024

ವೈಷ್ಣೋದೇವಿ ದೇವಸ್ಥಾನದಲ್ಲಿ ಕಾಲ್ತುಳಿತದಿಂದಾಗಿ ಭೀಕರ ಅಪಘಾತ

ದೆಹಲಿ:ವೈಷ್ಣೋದೇವಿ ದೇವಸ್ಥಾನದಲ್ಲಿ ಭೀಕರ ಅಪಘಾತ ಸಂಭವಿಸಿದೆ. ರಾತ್ರಿ ಮೂರು ಗಂಟೆ ಸುಮಾರಿಗೆ ಕಾಲ್ತುಳಿತದಿಂದಾಗಿ 12 ಜನರು ಸಾವನ್ನಪ್ಪಿದ್ದರಾ. 13 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಮತ್ತು ಸೇನಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ಆರಂಭಿಕ ವರದಿಗಳ ಪ್ರಕಾರ, ಅಪಾರ ಸಂಖ್ಯೆಯ ಭಕ್ತರಿಂದ ಕಾಲ್ತುಳಿತ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾಸ್ತವವಾಗಿ, ಈ ಭಯಾನಕ ಘಟನೆಯು ತ್ರಿಕೂಟ ಪರ್ವತದಲ್ಲಿರುವ ದೇವಾಲಯದ ಗರ್ಭಗುಡಿಯ ಹೊರಗೆ ಸಂಭವಿಸಿದೆ. ದೇವಸ್ಥಾನದ ಮೂರನೇ ದ್ವಾರದ ಬಳಿ ಹೊಸ ವರ್ಷದ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಈ ನಡುವೆ ಭಕ್ತರ ನಡುವೆ ವಾಗ್ವಾದ ನಡೆದು ಮಾತಿನ ಚಕಮಕಿ ನಡೆದಿದೆ. ಇದರಿಂದ ಕಾಲ್ತುಳಿತ ಉಂಟಾಗಿದೆ ಎಂದು ಅಲ್ಲಿನ ಪ್ರತ್ಯಕ್ಷ ದರ್ಶಿಗಳು ಹೇಳುತ್ತಾರೆ

ಜಿಲ್ಲೆ

ರಾಜ್ಯ

error: Content is protected !!