Thursday, July 25, 2024

ವಿಶೇಷಚೇತರಿಗಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ

ವರದಿ: ಈರಣ್ಣಾ ಹುಲ್ಲೂರ

ಸವದತ್ತಿ: ಸವದತ್ತಿ ತಾಲೂಕಾ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲೂಕಾ ಪಂಚಾಯತ ಹಾಗೂ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಇಲಾಖೆ, ಇವರುಗಳ ಸಂಯುಕ್ತ ಆಶ್ರಯದಲ್ಲಿ  ವಿಶೇಷಚೇತರಿಗಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ತಾಲೂಕಾ ಪಂಚಾಯತ ಸಬಾಭವನ ಸವದತ್ತಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಸದರಿ ಕಾರ್ಯಕ್ರಮವನ್ನು ಸಸಿಗೆ ನೀರೆಯುವುದರ ಮೂಲಕ  ಹರೀಶ ಜಿ. ಗೌರವಾನ್ವಿತ 2ನೇ ಹೆಚ್ಚುವರಿ ದಿವಾಣಿ ನ್ಯಾಯಾಧೀಶರು ಸವದತ್ತಿರವರು ಉದ್ಫಾಟಿನೆ ನೆರವೇರಿಸಿದರು. ಹಾಗೂ ವಿಶೇಷಚೇತರಿಗಾಗಿ ಸರ್ಕಾರದಿಂದ ಅನೇಕ ಸೌಲಭ್ಯಗಳು ದೊರೆಯುತ್ತಿವೆ ಅವುಗಳನ್ನು ಎಲ್ಲರೂ ಪಡೆದುಕೊಳ್ಳಬೇಕು ಯಾರು ಯಾವ ಕಾರಣಕ್ಕೂ ಕುಗ್ಗದೇ ನಿಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ  ಬಿ. ಕೆ. ಕಡಕೋಳ ನ್ಯಾಯವಾದಿಗಳು ಮಾತನಾಡಿ ಎಲ್ಲ ರಾಜ್ಯ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ಬಗ್ಗೆ ಅದರ ಉದ್ದೇಶದ ಬಗ್ಗೆ ಹಾಗೂ ಅವರಿಗಾಗಿ ಇರುವ ವಿಶೇಷ ನ್ಯಾಯಾಲಯದ ಬಗ್ಗೆ ಕೂಲಂಕುಶವಾಗಿ ವಿವರಿಸಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡಿದ  ಮಹೇಶ ಅಂಗಡಿ ಶಿರಸ್ತೇದಾರರು ಹಿರಿಯ ಶ್ರೇಣಿ ದಿವಾಣಿ ನ್ಯಾಯಾಲಯ ರವರು ಮಾತನಾಡಿ ವಿಶೇಷಚೇತನರಿಗಾಗಿ ಇರುವ ಸರ್ಕಾರದ ಸೌಲಭ್ಯಗಳು ಹಾಗೂ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳವ ಬಗ್ಗೆ ಸ-ವಿವರವಾಗಿ ವಿವರಿಸಿದರು.

ಕಾರ್ಯಕ್ರಮದಲ್ಲಿ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ  ಸಿ. ವಿ. ಸಾಂಭಯ್ಯನಮಠ, ತಾಲೂಕಾ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಶ್ರೀ ಯಶವಂತಕುಮಾರ, ಸಹಾಯಕ ಸರ್ಕಾರಿ ಅಭಿಯೋಜಕರಾದ ಶ್ರೀ ಎಸ್. ಎಮ್. ಜಂಬೂನವರ, ಶಿಶು ಅಭಿವೃದ್ದಿ ಯೋಜನಾಧಿಕಾರಿಗಳಾದ  ಕಾಂಚನಾ ಅಮಠೆ, ಹಿರಿಯ ನ್ಯಾಯವಾದಿಗಳಾದ ಆರ್. ಎಸ್. ಆಲದಕಟ್ಟಿ, ಎಮ್. ಆರ್. ಡಬ್ಲೂ, ಶ್ರೀ ಎಸ್. ಎಸ್. ಹೂಲಿಕಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನ್ಯಾಯವಾದಿಗಳಾದ ಎಸ್.ಎಸ್. ಕಾಳಪ್ಪನವರ, ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

ಜಿಲ್ಲೆ

ರಾಜ್ಯ

error: Content is protected !!