Thursday, July 25, 2024

ಕೂಡಲಸಂಗಮದೇವ ಅಂಕಿತವನ್ನೇ ಬಳಸಲಿದ್ದೇವೆ: ಮಾತೆ ಗಂಗಾದೇವಿ ಸ್ಪಷ್ಟನೆ

ಸುದ್ದಿ ಸದ್ದು ನ್ಯೂಸ್ ಕಿತ್ತೂರು:ಬಸವಣ್ಣನ ವಚನಗಳಲ್ಲಿ ಲಿಂಗದೇವ ಬದಲಿಗೆ ಕೂಡಲಸಂಗಮದೇವ ಅಂಕಿತವನ್ನೇ ನಾವು ಬಳಸಲಿದ್ದೇವೆ. ಎಂದು ಕೂಡಲಸಂಗಮ ಬಸವಧರ್ಮ ಪೀಠದ ಮಾತೆ ಗಂಗಾದೇವಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರಾಷ್ಟ್ರೀಯ ಬಸವದಳದ ಮಹಿಳಾ ಜಗದ್ಗುರುಗಳಾದ ಪೂಜ್ಯ ಗಂಗಾ ಮಾತಾಜಿಯವರು ತಿದ್ದುಪಡಿ ಆಗಿದ್ದ “ಲಿಂಗದೇವ” ಎಂಬ ಅಂಕಿತನಾಮವನ್ನು ಬದಲಾಯಿಸಿ ಮೂಲ ವಚನಾಂಕಿತವಾದ “ಕೂಡಲಸಂಗಮ” ವನ್ನು ಬಳಸುವುದಾಗಿ ಘೋಷಣೆ ಮಾಡಿದ್ದಾರೆ.

ಬಸವಧರ್ಮ ಪೀಠದಿಂದ ಹಿಂದಿನ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಪ್ರಕಟಿಸಿದ್ದ ವಚನದೀಪ್ತಿ ಪುಸ್ತಕದಲ್ಲಿ ಲಿಂಗದೇವ ಅಂಕಿತ ಬಳಸಲಾಗಿತ್ತು. ರಾಜ್ಯ ಸರ್ಕಾರ ಅದನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಆ ಕ್ರಮವನ್ನು ನಂತರ ಸುಪ್ರೀಂಕೋರ್ಟ್ ಕೂಡ ಎತ್ತಿಹಿಡಿದಿದೆ.

‘ಅದನ್ನು ಒಪ್ಪಿಕೊಂಡು ವಚನದೀಪ್ತಿ ಪುಸ್ತಕದ ಮರು ಮುದ್ರಣ ನಿಲ್ಲಿಸಿದ್ದ ಮಾತೆ ಮಹಾದೇವಿ,  ಲಿಂಗದೇವ ಅಂಕಿತ ಬಳಸುವುದಿಲ್ಲ ಎಂದು 2017ರ ಸೆಪ್ಟೆಂಬರ್ 21ರಂದು ಸ್ಪಷ್ಟನೆ ನೀಡಿದ್ದರು. ಅದನ್ನೇ ನಾವೂ ಮುಂದುವರೆಸಿಕೊಂಡು ಬಂದಿದ್ದೇವೆ‘ ಎಂದರು.

ಆದರೆ ಕೆಲವರು ಈಗಲೂ ಲಿಂಗದೇವ ಅಂಕಿತವನ್ನೇ ಬಳಸುತ್ತಿದ್ದಾರೆ. ಅದು ಅವರ ವೈಯಕ್ತಿಕ ಅಭಿಪ್ರಾಯವೇ ಹೊರತು ಬಸವಧರ್ಮ ಪೀಠಕ್ಕೆ ಸಂಬಂಧವಿಲ್ಲ. ಲಿಂಗದೇವ ಬಳಕೆಯಿಂದ ಲಿಂಗಾಯತ ಧರ್ಮ ಸ್ವತಂತ್ರ ಹೋರಾಟಕ್ಕೂ ಹಿನ್ನಡೆ ಆಗಿದೆ. ಅದನ್ನು ತಪ್ಪಿಸಲು ಹಾಗೂ ನ್ಯಾಯಾಲಯದ ತೀರ್ಪು ಗೌರವಿಸಲು ಈ ಸ್ಪಷ್ಟನೆ ನೀಡುತ್ತಿದ್ದೇನೆ‘ ಎಂದು ಹೇಳಿದರು.

ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಬಸವ ಸಮಿತಿಯು ರಾಷ್ಟ್ರೀಯ ಬಸವದಳದ ಮಹಿಳಾ ಜಗದ್ಗುರುಗಳಾದ ಪೂಜ್ಯ ಗಂಗಾ ಮಾತಾಜಿಯವರ ಈ ನಿರ್ಣಯವನ್ನು ಹೃದಯಪೂರ್ವಕವಾಗಿ ಸ್ವಾಗತಿಸುತ್ತದೆ. ತನ್ಮೂಲಕ ಬಸವಾದಿ ಶರಣರ ತತ್ವಗಳನ್ನು ವಿಕಾಸಗೊಳಿಸುವ ಸಮಾಜದ ಪ್ರಯತ್ನಕ್ಕೆ ಆನೆ ಬಲ ಬಂದಂತಾಗಿದೆ ಎಂದು ಬೆಂಗಳೂರು ಬಸವ ಸಮಿತಿ ಅಧ್ಯಕ್ಷರಾದ ಅರವಿಂದ ಜತ್ತಿ ಹೇಳಿದ್ದಾರೆ

ರಾಷ್ಟ್ರೀಯ ಬಸವದಳದ ಮಹಿಳಾ ಜಗದ್ಗುರುಗಳಾದ ಪೂಜ್ಯ ಗಂಗಾ ಮಾತಾಜಿಯವರು ಲಿಂಗದೇವ ಎಂಬ ಅಂಕಿತನಾಮವನ್ನು ಬದಲಾಯಿಸಿ ಮೂಲ ವಚನಾಂಕಿತವಾದ “ಕೂಡಲಸಂಗಮ” ವನ್ನು ಬಳಸುವುದಾಗಿ ಘೋಷಣೆ ಮಾಡಿರುವುದಕ್ಕೆ ಕಿತ್ತೂರು ರಾಷ್ಟ್ರೀಯ ಬಸವ ಸೇನೆಯ ರಾಜ್ಯ ಅಧ್ಯಕ್ಷ ಬಸವರಾಜ ಚಿನಗುಡಿ, ಕಾರ್ಯದರ್ಶಿ ಮಡಿವಾಳಪ್ಪ ಕೊರಿಶೆಟ್ಟರ ಹಾಗೂ ಸರ್ವ ಸದಸ್ಯರು, ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಕಿತ್ತೂರು ತಾಲೂಕಾಧ್ಯಕ್ಷ ಡಿ.ಆರ್. ಪಾಟೀಲ ಮತ್ತು ಸರ್ವ ಸದಸ್ಯರು, ನಿಕಟಪೂರ್ವ ಕನ್ನಡ ಸಾಹಿತ್ಯ ಪರಿಷತ್ತ ಕಿತ್ತೂರು ತಾಲೂಕಾ ಅಧ್ಯಕ್ಷ ಡಾ ಜಗದೀಶ ಹಾರುಗೊಪ್ಪ, ಜಾಗತಿಕ ಲಿಂಗಾಯತ ಮಹಾಸಭಾ ಕಿತ್ತೂರು ತಾಲೂಕಾಧ್ಯಕ್ಷ ಚಂದ್ರಗೌಡ ಪಾಟೀಲ ಹಾಗೂ ಸರ್ವ ಸದಸ್ಯರು, ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಮಹೇಶ ಚನ್ನಂಗಿ, ರಾಷ್ಟ್ರೀಯ ಬಸವ ಸೇನೆ ಸಂಸ್ಥಾಪಕ ಅಧ್ಯಕ್ಷ ಉಮೇಶ ಗೌರಿ, ಯುವ ಸಾಹಿತಿ ಸಿದ್ದರಾಮ ತಳವಾರ, ಆಮ್ ಆದ್ಮಿ ಪಕ್ಷದ ಮುಖಂಡ ಆನಂದ ಹಂಪಣ್ಣವರ, ಕಿತ್ತೂರು ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಕಿರಣ್ ವಾಳದ, ಬಸವ ಕ್ರಾಂತಿ ದಿನಪತ್ರಿಕೆ ಕಿತ್ತೂರು ತಾಲೂಕು ವರದಿಗಾರ ವಿಠ್ಠಲ ಮಿರಜಕರ, ವಿಜಯ ಕರ್ನಾಟಕ ಪತ್ರಿಕೆ ವರದಿಗಾರ ಸಂಜೀವ ತಿಲಗರ, ಲಿಂಗಾಯತ ಕ್ರಾಂತಿ ಪತ್ರಿಕೆ ಸಂಪಾದಕ ಶಿವಾನಂದ ಮೇಟ್ಯಾಲ, ಕನ್ನಡಮ್ಮ ದಿನಪತ್ರಿಕೆ ವರದಿಗಾರ ನಾಗಪ್ಪ ಪಟ್ಟಣಶೆಟ್ಟಿ, ಯುವ ಮುಖಂಡರಾದ ಸಂತೋಷ ಸಂಬಣ್ಣವರ, ರಮೇಶ ಗದ್ದಿಹಳ್ಳಿ, ವಿಕ್ರಮ ಮೆಕಲಮರಡಿ, ಬಸವರಾಜ ಕುದರಿಮನಿ, ಸಂಜು ಚಿನಗುಡಿ ಸೇರಿದಂತೆ ಇನ್ನೂ ಅನೇಕ ಬಸವಾಭಿಮಾನಿಗಳು ಮತ್ತು ಕಿತ್ತೂರು ನಾಡಿನ ಸಮಸ್ತ ಶರಣ ಬಂಧುಗಳು ಮಾತಾಜಿಯವರ ಈ ನಿರ್ಣಯವನ್ನು ಹೃದಯಪೂರ್ವಕವಾಗಿ ಸ್ವಾಗತಿಸಿ ಅಭಿನಂದನೆ ಸಲ್ಲಿಸುವುದರ ಜೊತೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.

 

ಜಿಲ್ಲೆ

ರಾಜ್ಯ

error: Content is protected !!