Wednesday, September 18, 2024

ಮುರುಗೇಶ ನಿರಾಣಿಯವರನ್ನು ನಿಂದನೆ ಮಾಡದಂತೆ ಯತ್ನಾಳರಿಗೆ ಎಚ್ಚರಿಕೆ ನೀಡಿದ;ಚಿಕ್ಕನಗೌಡ್ರ

ಸುದ್ದಿ ಸದ್ದು ನ್ಯೂಸ್

ಬೆಳಗಾವಿ ಡಿಸೆಂಬರ್ 26: ಸಚಿವ ಮುರುಗೇಶ ನಿರಾಣಿಯವರು 2008 ರ ಸಂಪುಟದಲ್ಲಿ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವರಾಗಿ ಅರ್ಥಪೂರ್ಣವಾಗಿ ಕೆಲಸ ಮಾಡಿದ್ದಾರೆ. 2020 ರಲ್ಲಿ ಗಣಿ ಹಾಗೂ ಭೂ ಸಚಿವರಾಗಿ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿದ್ದಾರೆ. ಪ್ರಸ್ತುತ ಬಸವರಾಜ ಬೊಮ್ಮಾಯಿಯವರ ಸಂಪುಟದಲ್ಲಿ ಕೈಗಾರಿಕಾ ಸಚಿವರಾಗಿ “ಉದ್ಯಮಿಯಾಗು ಉದ್ಯೋಗ ನೀಡು” ಎಂಬ ಪ್ರತಿಪಾದಕರಾಗಿ ಮುಖ್ಯ ಮಂತ್ರಿಗಳಿಂದ ಕರ್ತವ್ಯ ಸಾಧಕರೆಂದು ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಬೃಹತ್ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ

ಕಠಿಣ ಪರಿಶ್ರಮದಿಂದ ಉದ್ಯಮಿಯಾಗಿ ಸಕ್ಕರೆ ಉದ್ಯಮದಲ್ಲಿ ದಿನವೊಂದಕ್ಕೆ 500 ಟನ್ ಕಬ್ಬು ನುರಿಸುವದರಿಂದ ಪ್ರಾರಂಭಿಸಿ ಇಂದು ದಿನಕ್ಕೆ 75 ಸಾವಿರ ಟನ್‌ಗೂ ಹೆಚ್ಚಿನ ಕಬ್ಬು ನುರಿಸುವುದಲ್ಲದೇ ಪ್ರತಿದಿನ 25 ಲಕ್ಷ ಲೀಟರ್ ಇಥನಾಲ್ ಉತ್ಪಾದಿಸುವ ಘಟಕವನ್ನು ಸ್ಥಾಪಿಸಲಾಗಿದೆ. ಅಲ್ಲದೆ ದಿನಕ್ಕೆ 200 ಮೇಘಾವ್ಯಾಟ್ ವಿದ್ಯುತ್ ಹಾಗೂ ಗ್ಯಾಸ್ ಉತ್ಪಾದನಾ ಘಟಕಗಳು ಇವೆ. ಇವರ ಉದ್ಯೋಗ ಸಮೋಹದ ಸಂಯೋಗದಿಂದ ಸುಮಾರು 70 ಸಾವಿರ ಜನರಿಗೆ ಉದ್ಯೋಗ ನೀಡಿದ್ದಾರೆ. ಶಿಕ್ಷಣ ಸಹಕಾರಿ ಕ್ಷೇತ್ರದಲ್ಲಿ ಮೇಲುಗೈ ಸಾಧಿಸಿ ಎಂಆರ್‌ಎನ್ ಫೌಂಡೇಶನ್ ವತಿಯಿಂದ ವಿವಿಧ ಕಾಯಿಲೆಗಳ ಉಚಿತ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ.

ರಾಜ್ಯದಲ್ಲಿ ನಷ್ಟದಿಂದ ಸ್ಥಗಿತಗೊಂಡ ಹಲವು ಸಕ್ಕರೆ ಕಾರ್ಖಾನೆಗಳನ್ನು ಪುನಃ ಪ್ರಾರಂಭಿಸಿದ ನಿದರ್ಶನಗಳಿವೆ.

ಬಸನಗೌಡ ಪಾಟೀಲ್ ಯತ್ನಾಳ್‌ ಅವರು ತಮ್ಮನ್ನು ತಾವು ಪಂಚಮಸಾಲಿ ನಾಯಕರೆಂದು ಕರೆದುಕೊಳ್ಳಲು ಪ್ರಾರಂಭಿಸಿ ಇನ್ನು ಒಂದು ವರ್ಷಕ್ಕೆ 20 ದಿನ ಬಾಕಿ ಇದೆ. ಇವರು ಕೇಂದ್ರ ಸಚಿವರಾಗಿದ್ದಾಗ ಅವರು ಪಂಚಮಸಾಲಿ ಸಮಾಜದ ಸಮಸ್ಯೆ ಹಾಗೂ ಮೀಸಲಾತಿ ಬಗ್ಗೆ ಕನಿಷ್ಠ ಸೌಜನ್ಯವೂ ಇರಲಿಲ್ಲ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು 2ನೇ ಹಂತದ ಸಂಪುಟ ವಿಸ್ತರಣೆಯಲ್ಲಿ ಯತ್ನಾಳರಿಗೆ ಮಂತ್ರಿಸ್ಥಾನ ದೊರೆಯದಿದ್ದಾಗ ಇವರಿಗೆ ಪಂಚಮಸಾಲಿಗರ 2ಎ ಮೀಸಲಾತಿ ಹಾಗೂ ಕೇಂದ್ರದ ಓಬಿಸಿಯ  ಜ್ಞಾನೋದಯವಾಗಿದೆ. ಇವರು ರೈಲ್ವೆ ರಾಜ್ಯ ಸಚಿವರಾಗಿ ರಾಜ್ಯಕ್ಕೆ ಇವರ ಕೊಡುಗೆ ಏನು? ಸಂಸದರಾಗಿದ್ದಾಗ ನಿರಾಣಿ ಅವರ  ಮಾರ್ಗದರ್ಶನದಲ್ಲಿ “ಜ್ಞಾನ ಶಿವಯೋಗಿ ಶಿವಕುಮಾರ್ ಸ್ವಾಮಿಗಳ” ಹೆಸರಿನಿಂದ ಇಂಡಿಯಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸಿ ಎರಡೇ ವರ್ಷದಲ್ಲಿ ಸ್ಥಗಿತಗೊಳಿಸಿ ಮಾರಾಟ ಮಾಡಿದ ಈ ವ್ಯಕ್ತಿ ತಾನು ಕೆಲಸಕ್ಕೆ ಬರುವವನು ಎಂಬುದನ್ನು ಮೊದಲು ಸಾಬೀತು ಪಡಿಸಲಿ ಎಂದು ಸಮಸ್ತ ಲಿಂಗಾಯತ ಹೋರಾಟ ವೇದಿಕೆಯ ಮುಖ್ಯ ಸಂಘಟಕ ಹಾಗೂ ಬೆಳಗಾವಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಿ.ಎಂ. ಚಿಕ್ಕನಗೌಡರ ಆಗ್ರಹಿಸಿದ್ದಾರೆ.

ನಿರಾಣಿಯವರು ಕೃಷಿ ಪೂರಕ ಉದ್ಯಮಿಗಳಾಗಿ ಸತತ ಪರಿಶ್ರಮದಿಂದ ಬೆಳೆದು ಬಂದವರು.

ಪಂಚಮಸಾಲಿಯ ಕೂಡಲಸಂಗಮ ಮತ್ತು ಹರಿಹರ ಸೇರಿದಂತೆ ಎರಡು ಪೀಠಗಳನ್ನು ಪ್ರಾರಂಭದಿಂದ ತಮ್ಮ ಎರಡು ಕಣ್ಣುಗಳು ಎಂದು ತಿಳಿದು ಉಭಯ ಪೀಠಗಳನ್ನು ಪೋಷಿಸಿಕೊಂಡು ಬಂದವರು. ಇಂಥವರು ಪಂಚಮಸಾಲಿ ಸಮಾಜದಲ್ಲಿ ಇರುವುದೇ ನಮ್ಮ ಸಮಾಜಕ್ಕೆ ಹೆಮ್ಮೆ ಹಿರಿಮೆ ಗರಿಮೆ. ಸಚಿವ ಮುರುಗೇಶ ನಿರಾಣಿ ಅವರ ಕುರಿತು ಹಗುರವಾಗಿ ಹಾಗೂ ಬಹಿರಂಗವಾಗಿ ಹೇಳಿಕೆ ನೀಡುವುದು ಮತ್ತು ಅಸಂವಿಧಾನಿಕ ಪದ ಬಳಕೆ ಮಾಡುವದು ಖಂಡನಾರ್ಹವಾಗಿದೆಯೆಂದು ಖಡಕ್ಕಾಗಿ  ಎಚ್ಚರಿಸಿದ್ದಾರೆ.

 

ಜಿಲ್ಲೆ

ರಾಜ್ಯ

error: Content is protected !!