Saturday, July 27, 2024

ವಲ್ಲಭ ಭಾಯ್ ಪಟೇಲ್ ಮಾದರಿಯಲ್ಲಿ ಬಸವಣ್ಣನವರ ಪ್ರತಿಮೆ ನಿರ್ಮಿಸಿ ಮೇಲ್ಮನೆ ಸದಸ್ಯ ಎಚ್.ಆರ್.ನಿರಾಣಿ ಅಭಿಮತ

ಸುದ್ದಿ ಸದ್ದು ನ್ಯೂಸ್

ಮುಧೋಳ (ಡಿ 24) : ಗುಜರಾತಿನ ನರ್ಮದಾ ನದಿಯ ದಡದಲ್ಲಿ ನಿರ್ಮಿಸಲಾದ ಸರ್ದಾರ್ ವಲ್ಲಭ ಭಾಯ್ ಪಟೇಲರ ಪ್ರತಿಮೆಯ ಮಾದರಿಯಲ್ಲಿ ಸಾಮಾಜಿಕ ಸಮಾನತೆಯ ಹರಿಕಾರ ಕಾಯಕ ಯೋಗಿ ವಿಶ್ವಗುರು ಬಸವಣ್ಣನವರ ಭವ್ಯ ಪ್ರತಿಮೆಯನ್ನು ಆಲಮಟ್ಟಿ ಜಲಾಶಯದ ಪಕ್ಕದಲಿ ನಿರ್ಮಿಸಬೇಕು. ಜತೆಗೆ ಈ ಭಾಗವನ್ನು ಅಕ್ಷರಧಾಮವಾಗಿ ಅಭಿವೃದ್ಧಿ ಪಡಿಸಬೇಕು ಎಂದು ವಿಧಾನ ಪರಿಷತ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ ಎಂದು ಮೇಲ್ಮನೆ ಸದಸ್ಯರಾದ ಹಣುಮಂತ ನಿರಾಣಿ ಅವರು ತಿಳಿಸಿದ್ದಾರೆ.

ದೆಹಲಿಯಲ್ಲಿ ಇರುವ ಅಕ್ಷರ ಧಾಮ

ಆಲಮಟ್ಟಿ ಹಿನ್ನೀರಿನ ರಾಮದೂರದಲ್ಲಿ ಪ್ರಾಣಿ ಸಂಗ್ರಾಲಯ, ಜಂಗಲ್ ಸಫಾರಿ, ಡೋಣಿ ವಿಹಾರ, ವ್ಯವಸ್ಥೆ ಕಲ್ಪಿಸಿ ಪ್ರವಾಸಿಗರನ್ನು ಆಕರ್ಷಿಸುವ ಕೆಲಸ ನಡೆಯಬೇಕು ಹಾಗೂ ಮೈಸೂರಿನ ರಂಗನತಿಟ್ಟು ಮಾದರಿಯಲ್ಲಿ ಪಕ್ಷಿಧಾಮ ನಿರ್ಮಿಸಲು ಇಲ್ಲಿ ದೊಡ್ಡ ಅವಕಾಶವಿದ್ದು ಫಾಂಟಸಿ ವಾಟರ್ ಪಾರ್ಕ್  ನಿರ್ಮಿಸುವುದರ ಜೊತೆಗೆ ಪ್ರವಾಸಿಗರಿಗೆ ಉತ್ತಮ ಊಟ, ವಸತಿಗಾಗಿ ಯಾತ್ರಿ ನಿವಾಸಿಗಳನ್ನು ನಿರ್ಮಿಸಬೇಕು.

ರಂಗನತಿಟ್ಟು ಪಕ್ಷಿಧಾಮ

ರಾಜ್ಯದಲ್ಲಿಯೇ ಉತ್ತಮ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸರಕಾರ ಕಾರ್ಯಾರಂಭ ಮಾಡಬೇಕು ಎಂದು ಶೂನ್ಯ ವೇಳೆಯಲ್ಲಿ ಮೇಲ್ಮನೆ ಸದಸ್ಯರಾದ ಹಣುಮಂತ ನಿರಾಣಿ ಅವರು ಆಗ್ರಹ ಪಡಿಸಿದ್ದಾರೆ.  

ಗದಗದಲ್ಲಿ ಇರುವ ಬಸವಣ್ಣನವರ ಮೂರ್ತಿ

ದೆಹಲಿಯಲ್ಲಿ ಇರುವ ನಾರಾಯಣಸ್ವಾಮಿ ದೇವಸ್ಥಾನದ ಮಾದರಿಯಲ್ಲಿ ಕೂಡಲಸಂಗಮದಲ್ಲಿ ಇರುವ ಸಂಗಮನಾಥ ದೇವಸ್ಥಾನವನ್ನು ವಿಸ್ತರಿಸಬೇಕು. ಸಂಸ್ಕೃತಿಯ ಮತ್ತು ಇತಿಹಾಸವನ್ನು  ತಿಳಿಸಿಕೊಡುವ ಹಿನ್ನೆಲೆಯಲ್ಲಿ ರಂಗ ಮಂದಿರ ಕಟ್ಟಬೇಕು.

ಕೂಡಲಸಂಗಮದಲ್ಲಿ ಇರುವ ಸಂಗಮನಾಥ ದೇವಸ್ಥಾನ

ಬಾಗಲಕೋಟ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಬಹಳಷ್ಟು ನೈಸರ್ಗಿಕ ಸಂಪತ್ತಿದೆ. ವಿಜಯಪುರದ ಗೋಲಗುಮ್ಮಟ, ಬಾರಾ ಕಮಾನ್, ಇಬ್ರಾಹಿಂ ರೋಜಾ, ಶಿವ ಮಂದಿರ, ಸಿದ್ದೇಶ್ವರ ದೇವಾಲಯ, ಬಾದಾಮಿ ಐಹೊಳೆ, ಪಟ್ಟದಕಲ್ಲು ಕೂಡಲಸಂಗಮ ಸೇರಿದಂತೆ ಇನ್ನೂ ಅನೇಕ ಪಟ್ಟಣ ಮತ್ತು ಗ್ರಾಮಗಳು ಆಕರ್ಷಕ ಐತಿಹಾಸಿಕ ಸ್ಥಳಗಳಾಗಿವೆ. ಭಾರತ ಅಷ್ಟೇ ಅಲ್ಲದೆ ವಿದೇಶಿ ಪ್ರವಾಸಿಗರನ್ನು ಕೂಡ ಈ ಎಲ್ಲ ಐತಿಹಾಸಿಕ ಸ್ಥಳಗಳು ಆಕರ್ಷಿಸುತ್ತವೆ. ಈ ಎಲ್ಲ ನೈಸರ್ಗಿಕ ಅನುಕೂಲತೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಪ್ರವಾಸೋದ್ಯಮ ಸಚಿವರು ಈ ಭಾಗವನ್ನು ಆಕರ್ಷಕ ಪ್ರವಾಸ ಸ್ಥಾನವಾಗಿ ಬೆಳೆಸಬೇಕು ಎಂದರು.

 

ಜಿಲ್ಲೆ

ರಾಜ್ಯ

error: Content is protected !!