Monday, April 15, 2024

ಬೆಳಗಾವಿ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷನ ಕಾರು ಎ.ಆರ್ ಆಫೀಸ್ ನಲ್ಲಿ! ಜಪ್ತಿ ಮಾಡಿರುವರೇ…?

ಬೆಳಗಾವಿ :ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಜಗದೀಶ ಪಾಟೀಲ, ಸರಕಾರಿ ಹಾಗು ಅರೆ ಸರಕಾರಿ ನೌಕರರ ಗೃಹ ನಿರ್ಮಾಣ ಸಹಕಾರಿ ಸಂಘದ ಇನ್ನೋವಾ ಕಾರು ಸೇರಿದಂತೆ ಹಣಕಾಸಿನ ವ್ಯವಹಾರವನ್ನು ದೂರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಸಂಘದ ಸದಸ್ಯರು ಕೆಲ ದಿನಗಳ ಹಿಂದೆ ಬೆಳಗಾವಿ ಸಹಕಾರ ಸಂಘಗಳ ಉಪ ನಿಬಂಧಕರಿಗೆ ದೂರು ನೀಡಿದರು.

ಹೌದು ಜಿಲ್ಲಾ ಸರಕಾರಿ ನೌಕರರ ಸಂಘದ ಹಾಗೂ ಗೃಹ ನಿರ್ಮಾಣ ಸಹಕಾರಿ ಸಂಘದ ಅಧ್ಯಕ್ಷ ಜಗದೀಶ ಪಾಟೀಲ ಒಬ್ಬನೇ ಆಗಿರುವುದರಿಂದ ಎರಡು ಸಂಘದಲ್ಲಿ ಭಾರಿ ಪ್ರಮಾಣದಲ್ಲಿ ಅವ್ಯವಹಾರ ಮಾಡಿರುತ್ತಾರೆ ಎಂದು ವದಂತಿಗಳು ಕೇಳಿಬರುತ್ತಿವೆ. .

ಗೃಹ ನಿರ್ಮಾಣ ಸಹಕಾರಿ ಸಂಘಕ್ಕೆ ಸೇರಿದ ಇನ್ನೋವಾ ವಾಹನಕ್ಕೆ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷರು ರಾಜ್ಯ ಪ್ರಧಾನ ಕಾರ್ಯದರ್ಶಿ ಎಂದು ನಾಮ ಫಲಕ ಹಾಕಿಕೊಂಡು, ರಾಜ್ಯಾದ್ಯಂತ ಸುತ್ತಾಡಿರುತ್ತಾನೆ. ವಾಹನ ನಿರ್ವಹಣೆ, ಡಿಸೇಲ್ ಖರ್ಚು ಮತ್ತು ಚಾಲಕನ ಪಗಾರ ಸೇರದಂತೆ ಇನ್ನಿತರೆ ಖರ್ಚುಗಳನ್ನು ಎರಡು ಸಂಘದಲ್ಲಿ ಲೆಕ್ಕ ತೋರಿಸಿ ಸಂಘಗಳಿಗೆ ಮೋಸ ಮಾಡುತ್ತಿದ್ದಾನೆ ಎಂದು ಸದಸ್ಯರು ಆರೋಪಿಸಿ ಸಹಕಾರ ಸಂಘಗಳ ಉಪ ನಿಬಂಧಕರಿಗೆ ದೂರು ಕೊಟ್ಟಿದ್ದರು.

ಈಗ ವಾಹನ (ಕಾರು) ಎ.ಆರ್ ಆಫೀಸ್ ನಲ್ಲಿ ಕಂಡು ಬರುತ್ತಿರುವುದು ಸಂಶಯಕ್ಕೆ ಎಡೆಮಾಡಿ ಕೊಟ್ಟಿದೆ. ದೂರಿನನ್ವಯ ವಾಹನ ಜಪ್ತಿ ಮಾಡಲಾಗಿದೆಯೋ ಅಥವಾ ಗೃಹ ನಿರ್ಮಾಣ ಸಹಕಾರಿ ಸಂಘದ ಆಡಳಿತಾವಧಿ ಮುಗಿದಿರುವ ಕಾರಣವೋ ..?

ಜಿಲ್ಲೆ

ರಾಜ್ಯ

error: Content is protected !!