Saturday, July 20, 2024

ಹದಿನಾರರ ಹುಡುಗಿಯ ಪ್ರೇಮ್ ಕಹಾನಿ; ಹೆಂಡತಿಯನ್ನು ಕಳೆದುಕೊಂಡವನ ಜೊತೆ ಲವ್!ಅಂತ್ಯ ಕಂಡಿದ್ದು ಮಾತ್ರ ದುರಂತ.

ರಾಮನಗರ: ಹದಿನಾರರ ವಯಸ್ಸು, ಹುಚ್ಚು ಕೊಡಿ ಮನಸ್ಸು ಎಂಬಂತೆ 16ರ ಹದಿ ಹರೆಯದ ಹುಡುಗಿ ಒಂದು ಮಗುವಿನ ತಂದೆ,ಪತ್ನಿ ಕಳೆದುಕೊಂಡ 26 ವಯಸ್ಸಿನ ಹುಡುಗನ ಜೊತೆಗೆ ಲವ್.

ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿದ್ದವನ ಈ ಹುಚ್ಚು ಪ್ರೀತಿ ಅಂತ್ಯ ಕಂಡಿದ್ದು ಮಾತ್ರ ದುರಂತ. ವಿವಾಹಿತನ ಜೊತೆಗೆ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದ  ಬಾಲಕಿ ಹಾಗೂ ವಿವಾಹಿತ ವ್ಯಕ್ತಿ ತಮ್ಮ ಪ್ರೀತಿಯನ್ನು ಗೆಲ್ಲಲಾಗದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಮನಗರದ ಕಸಬಾ ಹೋಬಳಿಯ ಸುಗ್ಗನಹಳ್ಳಿ ಗ್ರಾಮದ ಬಾಲಕಿ ಹಾಗೂ ಚಾಮುಂಡೇಶ್ವರಿ ನಗರದ ಹರೀಶ್ ಸಾವಿನ ಮನೆ ಸೇರಿದ್ದಾರೆ. 

ಇಬ್ಬರ ಮಧ್ಯೆ  ಪ್ರೇಮಾಂಕುರವಾಗಿತ್ತು. ಆದ್ರೆ ಹರೀಶ್‌ಗೆ ಈಗಾಗಲೇ ಮದುವೆಯಾಗಿ, ಪತ್ನಿ ಮರಣ ಹೊಂದಿದ್ದು, ಒಂದು ಮಗು ಕೂಡ ಇದೆ. ಇನ್ನು ಪ್ರೀತಿಗೆ ಕಣ್ಣಿಲ್ಲ ಅಂತಾರಲ್ಲ ಹಾಗೆ ಮೋಹದ ಮಾಯೆಗೆ ಸಿಲುಕಿದ ಅಪ್ರಾಪ್ತ ಬಾಲಕಿ ಸಿಲುಕಿದ್ದಳು. ಆದ್ರೆ ಈ ಹುಚ್ಚು ಪ್ರೀತಿಯನ್ನು ಎರಡು ಕಡೆಯ ಮನೆಯವ್ರು ಒಪ್ಪಲು ಸಾಧ್ಯವಿರಲಿಲ್ಲ. ಹೀಗಾಗಿ ಬಾಲಕಿಯ ಮನೆಯಲ್ಲಿ ಇವರಿಬ್ಬರ ಪ್ರೀತಿಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಇನ್ನು ಹರೀಶನ ಪೋಷಕರು ಈ ಪ್ರೀತಿಯನ್ನು ಸುತರಾಂ ಒಪ್ಪಿಕೊಳ್ಳಲಿಲ್ಲ. ಇದರಿಂದ ಬೇಸತ್ತ ಇಬ್ಬರು ದುಡುಕಿ ಆತ್ಮಹತ್ಯೆಯ ನಿರ್ಧಾರ ತೆಗೆದುಕೊಂಡಿದ್ದಾರೆ.

10ನೇ ತರಗತಿ ಓದುತ್ತಿದ್ದ ಬಾಲಕಿ ಹಾಗೂ ಕಾರ್ ಡ್ರೈವರ್ ಆಗಿದ್ದ ಹರೀಶ್ ಪರಸ್ಪರ ಪ್ರೀತಿಸುತ್ತಿದ್ದರು. ಸೇಮ್ ಟು ಸೇಮ್ ಚೆಲುವಿನ ಚಿತ್ತಾರ ಸಿನಿಮಾದಂತೆ ಇವರ ಪ್ರೇಮ ಕಥೆ ಇದ್ದು, ಕೊಂಚ ಮಟ್ಟಿಗೆ ಟ್ವಿಸ್ಟ್ ಇತ್ತು. ಅಲ್ಲಿ ಮೆಕಾನಿಕ್ ಜೊತೆಯಲ್ಲಿ ಅಪ್ರಾಪ್ತೆ ಪ್ರೇಮಪಾಶಕ್ಕೆ ಬಿದ್ರೆ, ಇಲ್ಲಿ ವಿವಾಹಿತ ವ್ಯಕ್ತಿಯೊಡನೆ ಅಪ್ರಾಪ್ತ ಬಾಲಕಿ ಪ್ರೇಮ ಸಂಬಂಧಕ್ಕೆ ಹಪಹಪಿಸಿದ್ದಳು. ಇನ್ನು ಈ ವಿಷಯ ಬಾಲಕಿಯ ಪೋಷಕರಿಗೆ ತಿಳಿದು ಪ್ರೀತಿ ಮುಂದುವರಿಸದಂತೆ ಬುದ್ಧಿವಾದ ಸಹ ಹೇಳಿದ್ರು. ಪೋಷಕರ ಬುದ್ಧಿ ಮಾತಿಗೆ ಬೇಸರಗೊಂಡ ಹುಡುಗಿ ಮನೆ ಬಿಟ್ಟು ಬಂದು ತನ್ನನ್ನು ಮದುವೆಯಾಗುವಂತೆ ಹರೀಶನನ್ನು ಕೇಳಿಕೊಂಡಿದ್ಳು. ಗೊಂದಲಕ್ಕೆ ಬಿದ್ದ ಹರೀಶ ಹರಿಶಿನದ ದಾರ ಕಟ್ಟಿ ಮದುವೆ ಮಾಡಿಕೊಂಡು, ತನ್ನ ಮನೆಗೆ ಕರೆದೊಯ್ದಿದ್ದಾನೆ. ಆದ್ರೆ ಅಲ್ಲೂ ಕೂಡ ಹರೀಶನ ಪೋಷಕರು ಇಬ್ಬರಿಗೂ ಬುದ್ಧಿವಾದ ಹೇಳಿ, ಮನೆಗೆ ತೆರಳುವಂತೆ ಹುಡುಗಿಗೆ ತಾಕೀತು ಮಾಡಿದ್ದಾರೆ.

ಇನ್ನು ಪೋಷಕರ ವಿರೋಧದಿಂದ ಮನೆಯಿಂದ ಹೊರಟ ಇಬ್ಬರೂ ರಾಮನಗರದ ಹೊರ ವಲಯದ ರಾಮದೇವರ ಬೆಟ್ಟದ ಸಮೀಪದ ಬೈಪಾಸ್ ಹೆದ್ದಾರಿ ಪಕ್ಕದಲ್ಲಿ ಕುಳಿತು, ಫೇಸ್‌ಬುಕ್ ಹಾಗೂ ವಾಟ್ಸಾಪ್ ಸ್ಟೇಟಸ್‌ನಲ್ಲಿ ರಿಪ್ (RIP) ಎಂದು ಬರೆದು ಒಟ್ಟಿಗೆ ನೇಣು ಬಿಗಿದುಕೊಂಡಿದ್ದಾರೆ. ಈ ಸ್ಟೇಟಸ್ ನೋಡಿದ ಹರೀಶ್ ಸ್ನೇಹಿತ್ರು ಪೊಲೀಸರ ಸಹಾಯದೊಂದಿಗೆ ಲೊಕೇಶನ್ ಕಂಡು ಹಿಡಿದು ಹುಡುಕಾಟ ಸಹ ನಡೆಸಿದ್ದರು. ಇನ್ನು ಕತ್ತಲೆಯಾದ ಕಾರಣ ಇವರಿಬ್ರು ಪತ್ತೆಯಾಗಿರಲಿಲ್ಲ. ಇನ್ನು ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿದ್ದ ಮೃತ ಪ್ರೇಮಿಗಳನ್ನ ಕಂಡ ದನಗಾಹಿಗಳು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ರಾಮನಗರ ಗ್ರಾಮಾಂತರ ಪೊಲೀಸ್ರು ಶವಪರೀಕ್ಷೆ ನಡೆಸಿ, ಬಳಿಕ ಮೃತದೇಹಗಳನ್ನು ವಾರಸುದಾರರಿಗೆ ಒಪ್ಪಿಸಿದ್ದಾರೆ. ಸಾಯೋ ಮುನ್ನ ಹರೀಶ್ ಹುಡುಗಿಗೆ ತಾಳಿಕಟ್ಟಿದ್ದಾನೆ.

ಒಟ್ಟಾರೆ ವಿವಾಹಿತ ವ್ಯಕ್ತಿಯೊಬ್ಬನ ಪ್ರೇಮಪಾಶಕ್ಕೆ ಸಿಲುಕಿದ ಅಪ್ರಾಪ್ತ ಬಾಲಕಿ ದಾರುಣ ಅಂತ್ಯ ಕಂಡಿದ್ದಾಳೆ. ಅದೇನೇ ಇರಲಿ ಹುಚ್ಚು ಪ್ರೀತಿಯಲ್ಲಿ ಯುವ ಸಮುದಾಯ ಮತಿ ಕಳೆದುಕೊಂಡು ಏನೆಲ್ಲಾ ಮಾಡ್ತಾರೆ ಅನ್ನೋದಕ್ಕೆ ಇದೊಂದು ಚಿಕ್ಕ ಉದಾಹರಣೆಯಷ್ಟೇ.

ಜಿಲ್ಲೆ

ರಾಜ್ಯ

error: Content is protected !!