Thursday, July 25, 2024

ಎಮ್ ಇ ಎಸ್ ಪುಂಡರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ಮೂಡಲಗಿ – ಭಾಷಾ ಗೊಂದಲದಲ್ಲಿ ಬಸವಣ್ಣ, ರಾಯಣ್ಣನಂಥವರಿಗೆ ಅವಮಾನ ಮಾಡಿರುವ ಎಮ್ ಇ ಎಸ್ ಪುಂಡರ ಹುಟ್ಟಡಗಿಸಬೇಕು.

ಕರ್ನಾಟಕದಲ್ಲಿ ಶಿವಸೇನೆ ಮತ್ತು ಎಮ್ಈಎಸ್ ಸಂಘಟನೆಗಳ ಮೇಲೆ ನಿಷೇಧ ಹೇರಲೇಬೇಕು ಎಂದು ನಿವೃತ್ತ ಶಿಕ್ಷಕ ಬಿ ಆರ್ ತರಕಾರ ಹೇಳಿದರು.

ವಿಶ್ವಗುರು ಬಸವಣ್ಣ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಕನ್ನಡ ಧ್ವಜಕ್ಕೆ ಅವಮಾನ ಮಾಡಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ ಎಂಬ ಪುಂಡರ ಗುಂಪನ್ನು ಕರ್ನಾಟಕದಲ್ಲಿ ನಿಷೇಧಿಸಬೇಕೆಂದು ಆಗ್ರಹಿಸಿ ಅಖಿಲ ಭಾರತೀಯ ಲಿಂಗಾಯತ ಪಂಚಮಸಾಲಿ ಮಹಾಸಭಾ ಕೂಡಲಸಂಗಮ ಹಾಗೂ ಶ್ರೀ ಬಸವ ಸೇವಾ ಯುವಕ ಸಂಘ ಮತ್ತು ಬಸವಣ್ಣನವರ ಅನುಯಾಯಿಗಳಿಂದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.ಮೂಡಲಗಿಯ ಕಲ್ಮೇಶ್ವರ ವೃತ್ತದಲ್ಲಿ ಪ್ರತಿಭಟನಾ ಸಭೆ ನಡೆಯಿತು.

ಈ ಸಂದರ್ಭದಲ್ಲಿ ಪರಶುರಾಮ ಬಾಳಿಗೇರಿ ಡಾ. ಬಿ ಎಮ್ ಫಾಲಭಾಂವಿ, ಮಲ್ಲು ಗೋಡಿಗೌಡರ ಮಾತನಾಡಿ ಎಮ್ಈಎಸ್ ಎಂಬ ಪುಂಡರ ಗುಂಪನ್ನು ನಿಷೇಧಿಸಬೇಕು.ಹಾಗೂ ಮಹನೀಯರ ಪ್ರತಿಮೆಗಳಿಗೆ ಅವಮಾನ ಮಾಡಿರುವ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ನಿಂಗಪ್ಪ ಫಿರೋಜಿ, ಪುರಸಭಾ ಅಧ್ಯಕ್ಷ ಹಣಮಂತ ಗುಡ್ಲಮನಿ, ಎಮ್ ಎಚ್ ಸೋನವಾಲಕರ.ರವಿ ಸಣ್ಣಕ್ಕಿ, ಬಸವರಾಜ ಪಾಟೀಲ ( ಪಂಚಮಸಾಲಿ ತಾಲೂಕಾ ಅಧ್ಯಕ್ಷ) ಮಲ್ಲಪ್ಪ ಮದಗುಣಕಿ, ರುದ್ರಪ್ಪಾ ವಾಲಿ, ಮಲ್ಲಿಕಾಜು೯ನ ಢವಳೇಶ್ವರ, ಬಸಪ್ರಭು ನಿಡಗುಂದಿ, ಸದಾಶಿವ ನಿಡಗುಂದಿ, ಬಸವರಾಜ ರಂಗಾಪೂರ, ಕಲ್ಮೇಶ ಗೋಕಾಕ, ಶಿವಬೋಧ ಗೋಕಾಕ , ಈಶ್ವರ ಢವಳೇಶ್ವರ, ಸಂಗಮೇಶ ಕೌಜಲಗಿ, ಪ್ರಕಾಶ ಮುದೋಳ, ಹಾಗೂ ಅನೇಕರು ಹಾಜರಿದ್ದರು.

ಜಿಲ್ಲೆ

ರಾಜ್ಯ

error: Content is protected !!