Friday, September 20, 2024

ರೈತ ಹೋರಾಟಗಾರ, ಮಾಜಿ ಕೇಂದ್ರ ಸಚಿವ ದಿವಂಗತ ಬಾಬಾಗೌಡ ಪಾಟೀಲ ಅವರ ಮೂರ್ತಿ ಬೆಳಗಾವಿ ಸುವರ್ಣ ವಿಧಾನ ಸೌಧ ಆವರಣದಲ್ಲಿ ನಿರ್ಮಿಸಿ: ಬೆಳಗಾವಿ ಬಸವ ಮಂಟಪ ಸ್ವಾಮೀಜಿ.

ಬೆಳಗಾವಿ: ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ಖಾಸಗೀಕರಣ ಕಾಯ್ದೆ, ಹಿಂಪಡೆಯುವುದು, ಹಾನಿಗಿಡಾದ ಬೆಳೆಗಳಿಗೆ ಪ್ರತಿ ಎಕರೆಗೆ ರೊ.25000 ಪರಿಹಾರ ನೀಡುವುದು ಸೇರಿದಂತೆ ಹಲವಾರು ರೈತರ ಸಮಸ್ಯೆಗಳಿಗೆ ಹಕ್ಕೊತ್ತಾಯಸಿ ಅಖಂಡ ಕರ್ನಾಟಕ ರೈತ ಸಂಘದವರು ಬೆಳಗಾವಿಯ ಸುವರ್ಣ ಗಾರ್ಡನ್ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಕರ್ನಾಟಕದ ರೈತರು ಮಹಾಮಾರಿ ಕೋರೋನಾ, ಅಕಾಲಿಕ ಅತಿವೃಷ್ಟಿ ಮತ್ತು ಅನಾವೃಷ್ಟಿ ಬೆಳೆಗಳಿಗೆ ಪರಿಸರ ಅಸಮತೋಲನದಿಂದಾಗಿ ರೋಗದ ಬಾಧೆ, ಅಷ್ಟೇ ಅಲ್ಲದೆ ಜನರಿಗೆ ಕೂಡ ಶೀತಬಾಧೆ, ರೈತರ ಬೆಳೆ ಅಲ್ಪಸ್ವಲ್ಪ ಮಾರಾಟ ಮಾಡುವ ಬೆಳೆಗಳಿಗೂ ಉತ್ತಮವಾದ ಬೆಲೆ ಬಾರದೆ ಕಳೆದ ಎರಡು ವರ್ಷಗಳಿಂದ ರೈತರ ಸ್ಥಿತಿ ಭಿಕ್ಷುಕನ ಗಿಂತಲೂ ಕಡೆಯಾಗಿದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ವಾಲಿ ಮಾತನಾಡಿದರು.

ಅಲ್ಲದೆ ಕಬ್ಬಿನ ಕಾರ್ಖಾನೆಗಳು ಕೂಡ ಬಾಕಿ ಬಿಲ್ ಕೊಡಲಾರದೆ ಸತಾಯಿಸುತ್ತಿದೆ. ಮತ್ತು ಕಾರ್ಖಾನೆಗಳಿಗೆ ಕಳಿಸಿದ ಕಬ್ಬಿನ ತೂಕದಲ್ಲಿಯೂ ಮೋಸವಾಗುತ್ತಿದೆ ಈ ಎಲ್ಲ ಕಾರಣದಿಂದಾಗಿ ರೈತರ ಬದುಕು ಹೇಳತೀರದ ಸಂಕಷ್ಟದಲ್ಲಿ ಇದ್ದೇವೆ.

ಇತ್ತ ಬದುಕಲೂ ಆಗದೇ ಸಾಯಲೂ ಆಗದೇ ಜೀವನ ಸಂಕಷ್ಟ ಮಯವಾಗಿದೆ ರೈತರ ಮಕ್ಕಳಿಗೆ ಉದ್ಯೋಗವೂ ದೊರಕದೆ ಇರುವುದು ರೈತರ ಮಕ್ಕಳಿಗೆ ಯಾರು ಕೂಡ ಕನ್ಯಾ ಕೊಡಲು ಕೂಡಾ ತಯಾರಿಲ್ಲ. ಹೀನಾಯ ಬದುಕು ಸಾಗಿಸುವ ದುರ್ಗತಿ ಬಂದಿದೆ.

ಇಂತಹ ಪರಿಸ್ಥಿತಿಯಲ್ಲಿ ಸರ್ಕಾರಗಳು ರೈತರ ಮತ್ತು ಕೂಲಿಕಾರರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಅನಿವಾರ್ಯ ಪರಿಸ್ಥಿತಿ ಬಂದಿದೆ ಆದ್ದರಿಂದ ಸರ್ಕಾರ ಕೃಷಿಯ ಕಡೆಗೆ ಗಮನ ಹರಿಸಿ ರಾಜ್ಯದ ರೈತರ ಮತ್ತು ಊಟ ಮಾಡುವ ಎಲ್ಲರನ್ನು ರಕ್ಷಿಸುವ ಕಡೆಗೆ ಗಮನ ಹರಿಸುವುದು ಅವಶ್ಯವಾಗಿದೆ ಇಲ್ಲವಾದರೆ ಮುಂದೊಂದು ದಿನ ಜನರು ಊಟಕ್ಕಾಗಿ ಪರಿತಪಿಸುವ ಸ್ಥಿತಿ ನಿರ್ಮಾಣವಾದರೆ ಆಶ್ಚರ್ಯ ಪಡಬೇಕಾಗಿಲ್ಲ ಎಂದರು.

ಈ ಸಂದರ್ಭದಲ್ಲಿ ಬೆಳಗಾವಿ ಸುವರ್ಣ ವಿಧಾನ ಸೌಧ ಆವರಣದಲ್ಲಿ ರೈತ ಹೋರಾಟಗಾರ, ಮಾಜಿ ಕೇಂದ್ರ ಸಚಿವರಾದ ದಿವಂಗತ ಬಾಬಾಗೌಡ ಪಾಟೀಲ ಅವರ ಮೂರ್ತಿಯನ್ನು ಸರಕಾರ ನಿರ್ಮಾಣ ಮಾಡಬೇಕು ಎಂದು ಬೆಳಗಾವಿ ಬಸವ ಮಂಟಪ ಸ್ವಾಮೀಜಿಗಳು ಒತ್ತಾಯಿಸಿದರು.

ಈ ವೇಳೆ ಮಹಾಂತೇಶ ರಾಹುತ, ಪಿ ಕೆ ನೀರಲಕೇರಿ ಅಪೇಶಿ ದಳವಾಯಿ, ಕಲ್ಲಪ್ಪ ಕುಗಟಿ, ಕಲ್ಲಗೌಡ ಪಾಟೀಲ, ಪರ್ವತಗೌಡ ಪಾಟೀಲ, ಅಕೀಲಸಾಬ ಮುನವಳ್ಳಿ, ಸಂಗಮೇಶ ವಾಲಿ, ಬಸವರಾಜ ಹಣ್ಣಕೇರಿ ಸೇರಿದಂತೆ ಸಾವಿರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಜಿಲ್ಲೆ

ರಾಜ್ಯ

error: Content is protected !!