Sunday, September 8, 2024

ಬಜಾಜ್ ಪಲ್ಸರ್ ಹೊಂಡಾಗೆ ಸೆಡ್ಡು ಹೊಡೆಯುವ ಟಿವಿಎಸ್‌‌ನ ರೈಡರ್ 125 ಸಿಸಿ ಬಿಡುಗಡೆ

ಸುದ್ದಿ ಸದ್ದು ನ್ಯೂಸ್

ಚನ್ನಮ್ಮನ ಕಿತ್ತೂರು: ಪಟ್ಟಣದ ಗುರುವಾರ ಪೇಟೆಯಲ್ಲಿ ಇರುವ ಬಸವ ಮೋಟರ್ಸ ಟಿವಿಎಸ್‌ ಮೋಟಾರು ಮಾರಾಟ ಮಳಿಗೆಯಲ್ಲಿ ನೂತನವಾಗಿ ಬಿಡುಗಡೆಯಾದ ಟಿವಿಎಸ್‌ ಮೋಟಾರು ಕಂಪನಿಯ ರೈಡರ್‌ 125 ಸಿಸಿ ದ್ವಿಚಕ್ರ ವಾಹನವನ್ನು ಬಿಡುಗಡೆ ಮಾಡಲಾಯಿತು.

ಅಖಿಲ ಭಾರತ ಲಿಂಗಾಯತ ಪಂಚಮ

ಸಾಲಿ ಸಮಾಜದ ಕಿತ್ತೂರು ತಾಲೂಕಾಧ್ಯಕ್ಷರು, ಭಾರತೀಯ ಜನತಾ ಪಕ್ಷದ ಮುಖಂಡರು ಸಮಾಜ ಸೇವಕರಾದ ಡಿ. ಆರ್.‌ ಪಾಟೀಲ ಮತ್ತು ಆರಕ್ಷಕರಾದ ಸುನೀಲ ಮುರಗೋಡ ಅವರು ಟಿವಿಎಸ್‌ನ ರೈಡರ್‌ 125 ಸಿಸಿ ಬಿಡುಗಡೆಗೊಳಿಸಿ ತುರಕರ ಶೀಗಿಹಳ್ಳಿಯ ಡಾ ಮಂಜುನಾಥ ಮಿಂಡೋಳ್ಳಿ ಅವರಿಗೆ ವಾಹನವನ್ನು ಹಸ್ತಾಂತರಿಸಿದರು.

ರೈಡರ್‌ 125 ಸಿಸಿ ವಾಹನವನ್ನು ಬಿಡುಗಡೆಗೊಳಿಸುತ್ತಿರುವ ಗಣ್ಯರು

ಈ ವೇಳೆ ಬಸವ ಮೋಟರ್ಸನ ಮಾಲಿಕರು ಮಾತನಾಡಿ ಟಿವಿಎಸ್‌ ಮೋಟಾರು ಕಂಪನಿಯ ರೈಡರ್‌ 125 ಸಿಸಿ ದ್ವಿಚಕ್ರ ವಾಹನವು 125 ಸಿಸಿ ವಿಭಾಗದಲ್ಲಿಯೇ ವಿನೂತನ ಫೀಚರ್ಸ್‌ ಮತ್ತು ವಿನೂತನ ತಂತ್ರಜ್ಞಾನ ಮತ್ತು ಆಕರ್ಷಕ ಸ್ಪೋರ್ಟ್ಸ ವಿನ್ಯಾಸವನ್ನು ಹೊಂದಿದ್ದು ಯುವ ಜನತೆಯನ್ನು ಗಮನದಲ್ಲಿ ಇಟ್ಟುಕೊಂಡು ಈ ಹೊಸ ಬೈಕ್‌ ಸಿದ್ದಪಡಿಸಲಾಗಿದೆ. ಹೊಸ ವಿನ್ಯಾಸದ ಆಕರ್ಷಕ ಎಲ್‌ಇಡಿ ಹೆಡ್‌ಲ್ಯಾಂಪ್‌, ಹಿಂಬಾಗದ ಇಲ್‌ಇಡಿ ಬಲ್ಬ್‌, ಟಿಎಟಿ ಸ್ಕೃೀನ ಕುಡಾ ಹೊಂದಿದ್ದು ಇಕೋ ಮತ್ತು ಪವರ್‌ ಮೋಡ್‌ 5 ಸ್ಪೀಡ್‌ ಗಿಯರ್‌ ಬಾಕ್ಸ್‌ ಹೊಂದಿದೆ. ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಡ್ರಮ್, ಡಿಸ್ಕ್‌ ಮತ್ತುಕನೆಕ್ವೆಡ್‌ ವೆರಿಯಂಟ್‌ ಬೈಕಗಳನ್ನು ಪಡೆಯಬಹುದು ಎಂದು ತಿಳಿಸಿದರು.

ಕಿತ್ತೂರು ಬಸವ ಮೋಟರ್ಸನಲ್ಲಿ ರೈಡರ್‌ 125 ಬಿಡುಗಡೆ ಮಾಡಲಾಯಿತು

 

ಈ ವೇಳೆ ಬಾಬು ಗಡದವರ, ಆನಂದ ಹಂಪಣ್ಣವರ, ರಮೇಶ ಗದ್ದಿಹಳ್ಳಿ, ಸಂಜು ಚಿನಗುಡಿ, ರಹೆಮಾನ ಕರಿಕಟ್ಟಿ, ರವಿ ಎಮ್ಮಿ, ಚಿನ್ನು ಹೆಗಡೆ, ವಿನೋದ ಮಿಂಡೊಳ್ಳಿ, ಸಿ.ಬಿ. ಸಾಲಿಮಠ, ಯಶೋದಾ ಮಾಳಗಿ, ಸೇರಿದಂತೆ ಇನ್ನೂ ಅನೇಕರು ಇದ್ದರು.

ಜಿಲ್ಲೆ

ರಾಜ್ಯ

error: Content is protected !!