Tuesday, May 28, 2024

ನಾಳೆ ಶಾಂತಿಯುತ ಪ್ರತಿಭಟನೆಗೆ ಹಡಪದ ಅಪ್ಪಣ್ಣ ಶ್ರೀಗಳ ಕರೆ

ಬೆಳಗಾವಿ: ಹಡಪದ ಸಮಾಜದಿಂದ ನಾಳೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸಮಾಜದ ಶ್ರೀಗಳು ಶಾಂತಿಯುತ ಪ್ರತಿಭಟನೆ ಮಾಡಲು ಕರೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಕ್ಷೇತ್ರ ತಂಗಡಿಗಿಯ ಮಠದ ಪರಮಪೂಜ್ಯ  ಅನ್ನದಾನಿ ಭಾರತಿ ಅಪ್ಪಣ್ಣ ಮಹಾಸ್ವಾಮಿಗಳು ನಾಳೆ ಸುವರ್ಣ ಗಾರ್ಡನ್ ಟ್ವೆಂಟ ನಂಬರ್ 6 ರಲ್ಲಿ ನಡೆಯುವ ಹಡಪದ ಸಮಾಜದ ಬೃಹತ್ ಹೋರಾಟಕ್ಕೆ ರಾಜ್ಯಾದ್ಯಂತ ಸಮಾಜಬಾಂಧವರು ಆಗಮಿಸುತ್ತಿದ್ದಾರೆ.

ಸಮಾಜದ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ಕೈಗೊಂಡಿದ್ದೇವೆ ಸರ್ಕಾರ ಹಲವಾರು ಬಾರಿ ಮನವಿ ಹೋರಾಟ ಪಾದಯಾತ್ರೆ ಮಾಡಿ ಗಮನಸೆಳೆದರು ಸಮಾಜದ ಬಗ್ಗೆ ಸಮಾಜದ ಬೇಡಿಕೆಗಳ ಬಗ್ಗೆ ಸ್ಪಂದಿಸುತ್ತಿಲ್ಲ ನಾಡಿನ ಹೋರಾಟ ಸರ್ಕಾರ ಪರಿಗಣಿಸಿ ಬೇಡಿಕೆ ಈಡೇರಿಸದಿದ್ದರೆ ಮುಂಬರುವ ದಿನಗಳಲ್ಲಿ ಅಖಂಡ ಕರ್ನಾಟಕ ಹಡಪದ ಸಮಾಜದಿಂದ ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ರಾಜ್ಯ ಮುಖಂಡರಾದ ಸಿದ್ದಣ್ಣ ಮುಂಡಗೋಡ ನಾಗರಾಜ್ ಸರ್ಜಾಪುರ ,ಡಾ|| ಸಂಗಪ್ಪ ಹಡಪದ, ಬೆಳಗಾವಿ ಜಿಲ್ಲಾ ಅಧ್ಯಕ್ಷ ಸುರೇಶ ಹಡಪದ ,ಕಾರ್ಯಾಧ್ಯಕ್ಷ ಸಂತೋಷ ಹಡಪದ,ಜಿಲ್ಲಾ ಉಪಾಧ್ಯಕ್ಷ ಶಿವಾನಂದ ಹುನ್ನೂರ, ಆನಂದ ಕುರ್ಲಿ, ಮಧ್ಯಮ ವಕ್ತಾರ ಆನಂದ ಹಂಪಣ್ಣವರ್ ಮಾತನಾಡಿದರು.

ಈ ವೇಳೆ ಬೆಳಗಾವಿ ತಾಲೂಕ ಅಧ್ಯಕ್ಷ ಮಹಾಂತೇಶ ಹಂಪನ್ನವರ ಕಾನೂನು ಸಲಹೆಗಾರ ಶಾತಗೌಡ ನಾವಿ, ಜಿಲ್ಲಾ ಮುಖಂಡರಾದ ಬಸವರಾಜ ಹಡಪದ ಗೋಕಾಕ ತಾಲೂಕ ಅಧ್ಯಕ್ಷ ಸಿದ್ದಪ್ಪ ನಾವಲಗಿ ಸಂಘಟನಾ ಕಾರ್ಯದರ್ಶಿ ಕಿರಣ್ ನಾವಿ, ಸೋಮಶೇಖರ ನಾವಲಗಿ, ಮಹಾಂತೇಶ ಹಡಪದ, ರವಿ ಕೊರೆ ಸುರೇಶ ಹಡಪದ,ಈಶ್ವರ ಬೆಟಿಗೇರಿ ಇನ್ನೂ ಹಲುವಾರು ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಜಿಲ್ಲೆ

ರಾಜ್ಯ

error: Content is protected !!