Saturday, July 27, 2024

ಹಿಂದೂ ಹುಲಿ ರಮಾಕಾಂತ್ ಕೊಂಡೂಸ್ಕರ್, ಸೇರಿ 27 ಜನರ ಬಂಧನ ಬೆಳಗಾವಿಯಲ್ಲಿ ನಿಷೇಧಾಜ್ಞೆ ಜಾರಿ

ಸುದ್ದಿ ಸದ್ದು ನ್ಯೂಸ್
ಬೆಳಗಾವಿ: ಇತ್ತೀಚೆಗೆ ಬೆಂಗಳೂರಿನ ಸ್ಯಾಂಕಿ ಕೆರೆ ಹತ್ತಿರ ಇರುವ ಶಿವಾಜಿ ಪ್ರತಿಮೆಗೆ ಅವಮಾನ ಪ್ರಕರಣಕ್ಕೆ ಸಂಬಂಧಿಸಿದಂತೆ ತಡರಾತ್ರಿ ಬೆಳಗಾವಿಯಲ್ಲಿ ಅನೇಕ ಹಿಂದೂಪರ ಸಂಘಟನೆಗಳು ಪ್ರತಿಭಟನೆ ಮಾಡುವುದಲ್ಲದೆ ಪೊಲೀಸರ ಮತ್ತು ಪೊಲೀಸ್​ ವಾಹನಗಳು ಸೇರಿದಂತೆ ನಗರದ ಕೆಲವು ವಾಹನಗಳ ಮೇಲೆ ಕೆಲ ಎಂಇಎಸ್‌ನ ಪುಂಡರು ಕಲ್ಲು ತೂರಾಟ ನಡೆಸಿ ಅಪಾರ ಪ್ರಮಾಣದ ಹಾನಿ ಮಾಡುವುದಲ್ಲದೆ ಸಂಗೊಳ್ಳಿ ರಾಯಣ್ಣ ವಿಗ್ರಹವನ್ನು ಕೆಡವಿ ಅಟ್ಟಹಾಸ ಮೆರೆದಿದ್ದರು.

ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಎಂಇಎಸ್ ಮುಖಂಡ ಮತ್ತು ಶ್ರೀರಾಮಸೇನೆ ಹಿಂದೂಸ್ತಾನ್ ಸಂಘಟನೆ ಅಧ್ಯಕ್ಷ ರಮಾನಾಥ್ ಕೋಂಡುಸ್ಕರ್ ಸೇರಿದಂತೆ ಇತರ 27 ಜನ ಪುಂಡರನ್ನು ಬಂಧಿಸಿ ಹಿಂಡಲಗಾದಿಲ್ಲಿ ಇರುವ ಮಾವನ ಮನೆಗೆ ಅಟ್ಟಿದ್ದಾರೆ.

ತಡರಾತ್ರಿ ಬೆಳಗಾವಿಯ ಸಂಭಾಜಿ ವೃತ್ತದಲ್ಲಿ ಶ್ರೀರಾಮಸೇನೆ ಹಿಂದೂಸ್ತಾನ್ ಸಂಘಟನೆ ಅಧ್ಯಕ್ಷ ರಮಾಕಾಂತ್ ಕೊಂಡುಸ್ಕರ್ ಸೇರಿದಂತೆ ನೂರಾರು​ ಪ್ರತಿಭಟನಾಕಾರರು ಜಮಾವಣೆಗೊಂಡು, ಪ್ರತಿಭಟನೆ ನಡೆಸುತ್ತಿದ್ದು, ತಪ್ಪಿತಸ್ಥರನ್ನ ಬಂಧಿಸುವಂತೆ ಆಗ್ರಹಿಸುತ್ತಿದ್ದರು.

ಪ್ರತಿಭಟನೆಯಲ್ಲಿ ಎಂಇಎಸ್ ಮುಖಂಡ ಶುಭಂ ಶೆಳ್ಕೆ ಮತ್ತು ಮಾಜಿ ಮೇಯರ್ ಸರಿತಾ ಪಾಟೀಲ ಸೇರಿ ಎಂಇಎಸ್ ಪುಂಡರು ಪ್ರತಿಭಟನೆಗೆ ಸಾಥ್ ನೀಡಿದ್ದರು ಎನ್ನಲಾಗ್ತಿದೆ.

ಪ್ರತಿಭಟನೆ ವೇಳೆ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ಎಂಇಎಸ್ ಪುಂಡರು ಉದ್ಧಟತನ ಪ್ರದರ್ಶಿಸಿದ್ದರು. ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಳ್ಳುತ್ತಿದ್ದಂತೆ ನಗರ ಡಿಸಿಪಿ ವಿಕ್ರಂ ಆಮಟೆ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಎಂಇಎಸ್ ಪುಂಡರು ಪೊಲೀಸ್​ ವಾಹನದ ಮೇಲೂ ಕಲ್ಲು ತೂರಿ ಅಟ್ಟಹಾಸ ಮರೆದು ಸಂಗೊಳ್ಳಿ ರಾಯಣ್ಣನ ವಿಗ್ರಹ ಕೆಡವಿದ್ದರು.

ಈ ಘಟನೆ ಕುರಿತು ನಗರದ ಮೂರು ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿತ್ತು. ದೂರಿನನ್ವಯ ತಕ್ಷಣ ಕಾರ್ಯಾಚರಣೆ ಕೈಗೊಂಡ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಎಂಇಎಸ್ ಮುಖಂಡ ಶುಭಂ ಶೆಳ್ಕೆ ಮತ್ತು ರಾಮಸೇನೆಯ ರಮಾಕಾಂತ್ ಕೊಂಡುಸ್ಕರ್ ಸೇರಿದಂತೆ ಸುಮಾರು 30 ಜನ ಎಂಇಎಸ್ ಕಾರ್ಯಕರ್ತರನ್ನು ಬಂಧಿಸಿ ರಾತ್ರಿಯೇ ಜಡ್ಜ್ ಎದುರು ಹಾಜರುಪಡಿಸಿದ್ದರು. ಬಳಿಕ ಬಂಧಿಸಿದ ಎಲ್ಲರನ್ನೂ ಪೊಲೀಸರು ಹಿಂಡಲಗಾ ಜೈಲಿಗಟ್ಟಿದ್ದಾರೆ.

ಗಲಭೆ ಮಾಡಿದ ಎಂಇಎಸ್ ಪುಂಡರ ವಿರುದ್ಧ ಒಟ್ಟು ನಾಲ್ಕ ಪ್ರಕರಣಗಳು ದಾಖಲಾಗಿವೆ. ಐಪಿಸಿ 333, 335 ಸೇರಿ ವಿವಿಧ ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗಿದೆ.

ಜಿಲ್ಲೆ

ರಾಜ್ಯ

error: Content is protected !!